ಕಲಿಸಿದ ಗುರುವಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

Get real time updates directly on you device, subscribe now.

*ಕಲಿಸಿದ ಗುರುವಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ.*

ಹಿರೇವಂಕಲಕುಂಟಾ ಸ.ಪ.ಪೂ ಕಾಲೇಜ್ ( ಪ್ರೌಢ ಶಾಲಾ ವಿಭಾಗ) ನ ಉಪಪ್ರಾಚಾರ್ಯರಾಗಿದ್ದಚಂದ್ರಕಾಂತಯ್ಯ ಕಲ್ಯಾಣಮಠರವರು ಇದೇ ಜೂನ್ ೩೦ ರಂದು ಶಿಕ್ಷಕ ವೃತಿಯಿಂದ ಸೇವಾನಿವೃತ್ತಿ ಹೊಂದಿದ ಪ್ರಯುಕ್ತ ಅವರ ಹಳೆಯ ವಿದ್ಯಾರ್ಥಿಗಳು ಅದ್ದೂರಿ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಿ ಬೀಳ್ಕೊಟ್ಟರು.ಇದೇ ರವಿವಾರ ಜುಲೈ ೨ ರಂದು ನಡೆದ ಕಾರ್ಯಕ್ರಮದಲ್ಲಿ ಅವರು ಸೇವೆ ಸಲ್ಲಿಸಿದ ೧೯೮೯ ರಿಂದ ೨೦೨೩ ರ ವರೆಗಿನ ೩೪ ಬ್ಯಾಚಿನ ಎಸ್ ಎಸ್ ಎಲ್ ಸಿ ಹಳೆಯ ವಿದ್ಯಾರ್ಥಿಗಳು ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದರು.

ವಿದ್ಯಾರ್ಥಿಗಳ ಪಾಲಿನ ಚಾಮಯ್ಯ ಮೇಷ್ಟ್ರು ಅಂತಲೇ ಹೆಸರಾಗಿರುವ ಸಿ.ಕೆ ಅವರು
ಸುದೀರ್ಘ ೩೪ ವರ್ಷಗಳ ಸೇವೆಯನ್ನು ಒಂದೇ ಊರಿನಲ್ಲಿ, ಒಂದೇ ಶಾಲೆಯಲ್ಲಿ ಮಾಡಿರುವುದು ಒಂದು ವಿಶೇಷ. ಹಾಗಾಗಿ ಸಾವಿರಾರು ವಿದ್ಯಾರ್ಥಿಗಳ ಮನದಲ್ಲಿ ಶಾಶ್ವತ ಉಳಿದ ಹಳ್ಳಿಮೇಷ್ರು ಅಂತಲೇ ಅವರು ಪ್ರಸಿದ್ದಿ.

 

ಕಾರ್ಯಕ್ರಮದ ಉದ್ಘಾಟನೆ ಮಾಡಿದ ಕತೆಗಾರರು ಹಾಗೂ ಹಂಪಿ ಕನ್ನಡ ವಿವಿ ವಿಶ್ರಾಂತ ಪ್ರಾಧ್ಯಾಪಕರಾದ ಡಾ.
ಅಮರೇಶ ನುಗಡೋಣಿ ಮಾತನಾಡಿ ಬಹುಶಃ ನಾನು ನೋಡಿದ ಹಾಗೆ ಕನಾ೯ಟಕದಲ್ಲಿ ಈ ಬಗೆಯ ಕಾರ್ಯಕ್ರಮ ಇದೇ ಮೊದಲು ಅಂತ ಹೇಳಬಹುದು.ಸಿಕೆ ಸರ್ ರವರ ಸುದೀರ್ಘ ೩೪ ವರ್ಷಗಳ ಕಾಲ ಅವರ ಶಿಷ್ಯರಾಗಿ ಶಿಕ್ಷಣ ಪಡೆದ ಅಸಂಖ್ಯಾತ ವಿದ್ಯಾರ್ಥಿಗಳು ಇವರ ಮೇಲೆ ಇಟ್ಟಿರುವ ಪ್ರೀತಿ,ವಿಶ್ವಾಸ,ಗೌರವ,ಭಾವನಾತ್ಮಕ ಸಂಬಂಧ ಸಾಮಾನ್ಯವಾದುದ್ದಲ್ಲ.ಇವರು ಸಲ್ಲಿಸಿದ ನಿಸ್ವಾರ್ಥ ಶಿಕ್ಷಣ ಸೇವೆ ಅಸಾಮಾನ್ಯ ಎಂಬುದಕ್ಕೆ ಇಲ್ಲಿ ಸೇರಿರುವ ಭಾರಿ ಸಂಖ್ಯೆಯ ಜನರೇ ಸಾಕ್ಷಿ. ಗುರುಭಕ್ತಿ ಇದ್ದಲ್ಲಿ ಮಾತ್ರ ಇಷ್ಟು ಜನಸಂಖ್ಯೆ ಸೇರಲು ಸಾದ್ಯ.ವಿದ್ಯಾರ್ಥಿಗಳು ಪ್ರಾ ಮತ್ತು ಪ್ರೌಢ ಶಾಲೆಯ ಗುರುಗಳನ್ನು ನೆನೆಯುತ್ತಾರೆ.ಶಿಕ್ಷಕರ ಹೇಳಿದ ಮಾತು ವೇದವಾಕ್ಯ ಎಂಬ ಭಾವನೆ ಇರುತ್ತದೆ.ಕಾಲೇಜು ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ನಡುವೆ ಭಾವನಾತ್ಮಕ ಸಂಬಂಧ ಇರುವುದಿಲ್ಲ.ಹೈಸ್ಕೂಲಿನಲ್ಲಿ ಕಲಿಸಿದಗುರುಗಳು ವಿದ್ಯಾರ್ಥಿಗಳ ಮನದಲ್ಲಿ ಶಾಶ್ವತವಾಗಿ ಇರುತ್ತಾರೆ.ಪಾಲಕರು ತಮ್ಮ ಮಕ್ಕಳ ಶಿಕ್ಷಕನಾಗಿ ಮಾಡಬೇಕು,ಸಿಕ್ಕರುವ ಕೆಲಸವನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದು ಹೇಳಿದರು.

ನಿವೃತ್ತ ಉಪನ್ಯಾಸಕರಾದ ರಾಜಾಸಾಬ ಕುಷ್ಟಗಿ ಅವರು ಮಾತನಾಡಿ ಸಿ.ಕೆ ಅವರ ಜತೆಗಿನ ನೆನಪುಗಳನ್ನು ಹಂಚಿಕೊಂಡರು. ಹಿರೇವಂಕಲಕುಂಟಾ ಶಾಲೆ, ಕಾಲೇಜಿನ ವಿದ್ಯಾರ್ಥಿಗಳು ಆತ್ಮವಿಶ್ವಾಸ ಉಳ್ಳವರು ,ಬುದ್ದಿವಂತರು.ಹಿಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಪಾಠಗಳನ್ನು ಅತ್ಯಂತ ಶ್ರದ್ಧೆಯಿಂದ ಕೇಳುತ್ತಿದ್ದರು.
ಶಿವಾಜಿ ಮಹಾರಾಜರು, ಅಮರೇಶ ನುಗಡೋಣಿ ಬರೆದ ಪಾಠಗಳು, ಪಂಚತಂತ್ರದಂತಹ ನೀತಿಪಾಠಗಳು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ.ವಿದ್ಯಾರ್ಥಿಗಳು ಎಲ್ಲರೂ ನಮ್ಮವರು ಎಂಬ ಮನೋಭಾವವನ್ನು ಶಿಕ್ಷಕರು ಬೆಳೆಸಿಕೊಳ್ಳಬೇಕು.
ಯಾರು ಹೆಚ್ಚು ಕಡಿಮೆ ಅಲ್ಲ.ಎಲ್ಲರೂ ಸಮಾನರು.ಹಾಗೆಯೇ
ವಿದ್ಯಾರ್ಥಿಗಳಲ್ಲಿ ತಾರತಮ್ಯ ಅಹಂ ಇರಬಾರದು.ಇಲ್ಲಿಯ ವಿದ್ಯಾರ್ಥಿ-ವಿದ್ಯಾರ್ಥಿನಿಯರ ವಿಧೇಯತೆ ಮತ್ತು ಪ್ರೀತಿಯನ್ನು ಎಂದು ಮರೆಯಲಾಗದು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀ ಚಂದ್ರಕಾಂತಯ್ಯ ಕಲ್ಯಾಣಮಠ ಅವರು ೩೪ ವರ್ಷಗಳ ನನ್ನ ವೃತ್ತಿ ಬದುಕಿನಲ್ಲಿ ನಾನು ಇಷ್ಟೊಂದು ಮಕ್ಕಳ ಪ್ರೀತಿ ವಿಶ್ವಾಸ ಗಳಿಸಿದ್ದೇನೆ ಎಂದು ನನಗೆ ಗೊತ್ತೇ ಇರಲಿಲ್ಲ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಇಂತಹ ಬ್ರಹತ್ ಹಳೆಯ ವಿದ್ಯಾರ್ಥಿಗಳ ಸಮಾವೇಶ ಆಯೋಜಿಸಿ ನನ್ನನ್ನು ಬೀಳ್ಕೊಡುತ್ತಿರುವುದು ನನ್ನ ಜೀವಮಾನದಲ್ಲಿ ನೆನಪುಳಿಯಲಿದೆ.ಇದೊಂದು ಐತಿಹಾಸಿಕ ಹಾಗೂ ಚಿರಸ್ಮರಣೀಯ ಕಾರ್ಯಕ್ರಮ ಎನ್ನುತ್ತಾ ೩೪ ವರ್ಷಗಳ ತಮ್ಮ ನೆನಪಿನ ಬುತ್ತಿಯನ್ನು ಮಕ್ಕಳೆದುರು ಬಿಚ್ಚಿಟ್ಟರು.ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಆಟದ ಮೈದಾನದ ಕೊರತೆಯಿದ್ದು ಅದನ್ನು ಪಡೆಯಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಗ್ರಾಮಸ್ಥರು ಮಾಡಬೇಕೆಂದು ವಿನಂತಿಸಿದರು.

ಭವ್ಯ ಮೆರವಣಿಗೆ:

ಗ್ರಾಮದ ಬಸ್ ನಿಲ್ದಾಣದಿಂದ ಅಲಂಕೃತ ಠಥದಲ್ಲಿ ಕುಳಿತು ಸಿಕೆ ರವರ ದಂಪತಿಗಳ ಮೆರವಣಿಗೆ ಸಾಗಿತು,ದಾರಿಯುದ್ದಕ್ಕೂ ಹೂವುಗಳು.ಡೋಳ್ಳು.ತೋಗುಲು ಗೊಂಬೆ ನೃತ್ಯ, ಹಲಗೆ ವಾದ ,ಡಿಜೆ ಸೌಂಡ್ ಸಾವಿರಾರು ಹಳೆಯ ವಿದ್ಯಾರ್ಥಿಗಳು,ವಿದ್ಯಾರ್ಥಿನಿಯರು.ಗ್ರಾಮಸ್ಥರು, ಯುವಕರ ಕುಣಿದು ಕುಪ್ಪಳಿಸಿದರು.

ಹಳೆಯ ವಿದ್ಯಾರ್ಥಿಗಳ ಸಮ್ಮಿಲನ:

ಈ ಶಾಲೆಯಲ್ಲಿ 1989 ರಿಂದ ಶಿಕ್ಷಣ ಪಡೆದ ಎಲ್ಲಾ ಬ್ಯಾಚಿನ ಸಹಪಾಠಿ ವಿದ್ಯಾರ್ಥಿಗಳು ಭಾಗಹಿಸಿದ್ದರು.ತಮ್ಮ ಅಚ್ಚುಮೆಚ್ಚಿನ ಗುರುವಿನ ಸೇವಾ ನಿವೃತ್ತಿಗೆ ಶುಭ ಕೋರಿ,ಉಡುಗೊರೆ ನೀಡಿ ಗ್ರುಪ್ ಪೋಟೋ ತೆಗೆಸಿಕೊಂಡು ಸಂತಸಪಟ್ಟರು.

ದಿವ್ಯ ಸಾನಿದ್ಯವನ್ನು ಶ್ರೀ ಬಸವಾನಂದ ಸ್ವಾಮಿಗಳು ಮಹಾಮನೆ ಮನಗುಂಡಿ,ಧಾರವಾಡ . ಅಧ್ಯಕ್ಷತೆಯನ್ನು ಕಿರಣಕುಮಾರ್ ,ಪ್ರಾಚಾರ್ಯರು ಸ.ಪ.ಪೂರ್ವ ಕಾಲೇಜುಇವರು ವಹಿಸಿಕೊಂಡಿದ್ದರು.ಮುಖ್ಯ ಅತಿಥಿಗಳಾಗಿ ಡಾ.ಕೆ ವೆಂಕಟೇಶ ಪ್ರಾಚಾರ್ಯರು.ಸ.ಪ್ರ.ದ.ಕಾಲೇಜು ಹಗರಿಬೊಮ್ಮನಹಳ್ಳಿ,ನಿವೃತ್ತ ಶಿಕ್ಷಕರು, ಉಪನ್ಯಾಸಕರು ಮೇಲೆ ಉಪಸ್ಥಿತರಿದ್ದರು.

ವಿಜ್ಞಾನ ಶಿಕ್ಷಕ  ದೇವೇಂದ್ರ ಜಿರ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದರೆ ಪತ್ರಕರ್ತ ನರಸಿಂಹಮೂರ್ತಿ ಪ್ಯಾಟಿ ಕಾರ್ಯಕ್ರಮ ನಿರೂಪಣೆ ಮಾಡಿದರು.
ಹಳೆಯ ವಿದ್ಯಾರ್ಥಿಗಳು. ಊರಿನ ಗುರು ಹಿರಿಯರು, ಯುವಕರು,ಮಹಿಳೆಯರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: