ಟೀಚರ್ಸ್ ಕಾಲೋನಿಯಲ್ಲಿ ವಾಕಿಂಗ್ ಹೊರಟಿದ್ದ ಮಹಿಳೆಯ ಸರಗಳ್ಳತನ
ಕೊಪ್ಪಳ : ಬೆಳ್ಳಂ ಬೆಳಿಗ್ಗೆ ವಾಕಿಂಗ್ ಹೊರಟಿದ್ದ ಮಹಿಳೆಯ ಸರಗಳ ತನ ಮಾಡಿದ ಘಟನೆ ಕೊಪ್ಪಳದ ಟೀಚರ್ಸ್ ಕಾಲೋನಿಯಲ್ಲಿ ನಡೆದಿದೆ. ಇಂದು ಬೆಳಿಗ್ಗೆ ಘಟನೆ ನಡೆದಿದ್ದು ಮಂಜುಳಾ ಹಿರೇಮಠ ಎನ್ನುವವರ ಸರವನ್ನು ಬೈಕ್ ನಲ್ಲಿ ಬಂದಿದ್ದ ಕಳ್ಳರು ಕದ್ದೋಯ್ದಿದ್ದಾರೆ.
ಬೈಕ್ ಮೇಲೆ ಬಂದಂತಹ ಕಳ್ಳರು ಮಂಜುಳ ಹಿರೇಮಠ ಅವರ ಕುತ್ತಿಗೆಯಲ್ಲಿದ್ದ ಸರಕ್ಕೆ ಕೈ ಹಾಕಿ ಕಿತ್ತುಕೊಂಡು ಹೋಗಿದ್ದಾರೆ. ಸ್ಥಳಕ್ಕೆ ನಗರ ಠಾಣೆಯ ಸಿಪಿಐ ಜಯಪ್ರಕಾಶ್ ಹಾಗೂ ಅವರ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Comments are closed.