ತೇಜಸ್ವಿ ಕನ್ನಡದ ಸಣ್ಣಕತೆಗಳ ಕ್ಷೀತಿಜ ವಿಸ್ತರಿಸಿದವರು: ಡಾ.ಮುಮ್ತಾಜ್ ಬೇಗಂ
ಗಂಗಾವತಿ: ನವ್ಯ ಸಾಹಿತ್ಯದ ಕಾಲಘಟ್ಟದ ಪ್ರಮುಖ ಬರಹಗಾರರಲ್ಲಿ ತೇಜಸ್ವೀ ಅವರು ಪ್ರಮುಖರು. ಅಬಚೂರಿನ ಪೋಸ್ಟಾಫೀಸು ಕಥಾ ಸಂಕಲನದ ಮೂಲಕ ಬಂಡಾಯ ಸಾಹಿತ್ಯವನ್ನು ಪ್ರಾರಂಭಿಸಿ,. ಕನ್ನಡದ ಸಣ್ಣಕತೆಗಳ ಕ್ಷೀತಿಜವನ್ನು ವಿಸ್ತರಿಸಿದವರು ತೇಜಸ್ವಿ ಎಂದು ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ಸಂಯೋಜಕರಾದ ಡಾ. ಮುಮ್ತಾಜ್ ಬೇಗಂ ಮಾತನಾಡಿದರು.
ನಗರದ ಶ್ರೀಕೊಲ್ಲಿನಾಗೇಶ್ವರರಾವ್ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೊತ್ತರ ಕನ್ನಡ ಅಧ್ಯಯನ ವಿಭಾಗದಲ್ಲಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ವಾರದ ಓದು ಕಾರ್ಯಕ್ರಮದಲ್ಲಿ ಮಾತನಾಡಿದರು.
ತೇಜಸ್ವಿ ಅವರ ಕತೆಗಳನ್ನು ಓದುವುದೇ ಒಂದು ಸೊಗಸು. ತೆಳು ಹಾಸ್ಯ ತೇಜಸ್ವಿಯವರ ಗದ್ಯದ ಪ್ರಮುಖ ಗುಣ ಅದು ಅವರ ಕತೆಯಲ್ಲಿಯೂ ಪ್ರಮುಖವಾಗಿ ಕಾಣುತ್ತದೆ. ಅಲ್ಲದೇ ಮೌಢ್ಯತೆ, ಸಾಮಾಜಿಕ ಮೌಲ್ಯ, ಸೌಹಾಧತೆ, ಸಂವಹನ, ಸಂಪರ್ಕ ಮಾಧ್ಯಮಗಳ ಬಳಕೆ ಮತ್ತು ಬಿಕ್ಕಟ್ಟುಗಳ ಬಗ್ಗೆ ಕತೆಯಲ್ಲಿ ಹೆಣೆಯಲಾಗಿದೆ ಎಂದರು.
ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದ ದ್ವೀತಿಯ ಸೆಮಿಸ್ಟರ್ ವಿದ್ಯಾರ್ಥಿನಿ ಸುಮಾ ಹೊರಪೇಟೆ ಅವರು ಪೂರ್ಣಚಂದ್ರ ತೇಜಸ್ವಿಯವರ ಪರಿಚಯ ಹಾಗೂ ಅಬಚುರಿನ ಪೋಸ್ಟಾಫೀಸು ಕಥಾ ಸಂಕಲನದ ಕುರಿತು ವಿಚಾರವನ್ನು ಮಂಡಿಸಿದರು. ಜಾಗತೀಕರಣ, ಆಧುನೀಕರಣ, ಸಂಪರ್ಕ ಮಾಧ್ಯಮ ವ್ಯವಸ್ಥೆಗೆ ಒಗ್ಗಿಕೊಳ್ಳುವಲ್ಲಿ ಹಳ್ಳಿಗಳು ಎದುರಿಸಿದ ಸಮಸ್ಯೆ, ಪ್ರತಿಭೆಯನ್ನು ಗುರುತಿಸಿಕೊಳ್ಳುವಲ್ಲಿ ಎಡವಿದರೆ ಆಗುವ ಸ್ವಯಂ ಅವನತಿ, ಮೌಢ್ಯ ಮತ್ತು ರಾಜಕಾರಣದ ಕೈಗೆ ಸಿಕ್ಕು ಹೆಣ್ಣಿನ ಸಾವು ಪಡೆಯುತ್ತಿರುವ ಕೆಟ್ಟ ರೂಪಗಳು, ನಗರೀಕರಣಕ್ಕೆ ಹೊಂದಿಕೊಳ್ಳುವಲ್ಲಿ ಆಗುತ್ತಿರುವ ಸಮಸ್ಯೆಗಳು, ಕೋಮು ಸಾಮರಸ್ಯ, ಬ್ರಿಟಿಷ್ ಸರ್ಕಾರದ ಆಡಳಿತ ವೈಖರಿ ಮತ್ತು ಪ್ರಸ್ತುತ ಭಾರತದ ಆಡಳಿತ ವ್ಯವಸ್ಥೆಗಳ ತುಲನಾತ್ಮಕತೆ, ಮನಸಿನ ತೊಳಲಾಟಗಳನ್ನು ಎಲ್ಲಾ ಕಥೆಗಳ ಮೂಲಕ ಅಭಿವ್ಯಕ್ತಿಸಿದ್ದಾರೆ ಹೇಳಿದರು.
ಕಾಯಕ್ರಮದ ಸಂಯೋಜಕರಾದ ಡಾ. ಬಸವರಾಜ ಗೌಡನಬಾವಿ ಪ್ರಾಸ್ತಾವಿಕ ಮಾತನ್ನಾಡಿ, .ಇಂದಿನ ಮಕ್ಕಳು ಸೀಮಿತ ಓದಿಗೆ ಒಳಗಾಗುತ್ತಿದ್ದಾರೆ. ಅಧ್ಯಯನದಿಂದ ಮಾತ್ರ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಲು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿ ಜಗದೇವಿ ಕಲಶೆಟ್ಟಿಯವರು ಮಾತನಾಡಿ, ಪಠ್ಯದ ಆಚೆಗಿನ ಪುಸ್ತಕಗಳ ಓದು ಮಕ್ಕಳಲ್ಲಿ ಜ್ಞಾನ ವಿಸ್ತರಣೆಗೆ ಕಾರಣವಾಗುತ್ತದೆ. ಇಂಥ ಹವ್ಯಾಸ ಬೆಳೆಸಿಕೊಳ್ಳಿ ಎಂದರು.
ವೆಂಕಟೇಶ್ ರೆಡ್ಡಿ ನಿರೂಪಿಸಿದರು ಭೀಮಪ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಕನ್ನಡ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Comments are closed.