ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಮುಖ್ಯಮಂತ್ರಿಗೆ ಮನವಿ

Get real time updates directly on you device, subscribe now.


ಕುಷ್ಟಗಿ.ಜೂ.13: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಘಟಕದ ಪದಾಧಿಕಾರಿಗಳು ಮತ್ತು ವಿವಿಧ ಗ್ರಾಮದ ರೈತ ಮುಖಂಡರು ಗುರುವಾರ ಮಧ್ಯಾಹ್ನ ಇಲ್ಲಿನ ತಹಶೀಲ್ದಾರ ಕಚೇರಿಗೆ ತೆರಳಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ ರವಿ ಎಸ್ ಅಂಗಡಿ ಅವರಿಗೆ ಸಲ್ಲಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಆರ್.ಕೆ ದೇಸಾಯಿ ಮಾತನಾಡಿ ಪರಿಹಾರವನ್ನು ಒಣ ಭೂಮಿಗೆ ಹೇಕ್ಟರಿಗೆ 20 ಸಾವಿರ ರೂಪಾಯಿ ನೀರಾವರಿ ಜಮೀನುಗಳಿಗೆ 50 ಸಾವಿರ  ಪರಿಹಾರವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ನೀಡಬೇಕು. ತೀವೃ ಬರಗಾಲದ ಹಿನ್ನಲೆಯಲ್ಲಿ ರೈತರ ಎಲ್ಲಾ
ಸಾಲಮನ್ನಾ ಮಾಡಬೇಕು. ರೈತರ ಆತ್ಮಹತ್ಯೆ ತಡೆಯಬೇಕು. ಒತ್ತಾಯ ಸಾಲ ವಸೂಲಾತಿಯನ್ನು ತಡೆಯಬೇಕು. ಮೈಕ್ರೋ ಫೈನಾನ್ಸ ಮೂಲಕ ಮಹಿಳೆಯರು ಪಡೆದಿರುವ ಸಾಲವನ್ನು ಮನ್ನಾ ಮಾಡಬೇಕು. ಕಡಿಮೆ ದರದಲ್ಲಿ ಗುಣಾತ್ಮಕ ಬಿತ್ತನೆ ಬಿಜಗಳು, ರಸಗೊಬ್ಬರ ದೊರಕುವಂತೆ ಕ್ರಮ  ಗೊಳ್ಳಬೇಕು.
ಉದೊಗ ಖಾತ್ರಿ ಯೊನೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು. ರೈತರು ಬೇಡಿಕೆ ಸಲ್ಲಿಸಿದಾಗ 14 ದಿನದ ಕೆಲಸ ನಿಡಬೇಕು.
ಸರಕಾರದಿಂದ ನಿಗದಿತವಾದ ಕೂಲಿ 349 ರೂಪಾಯಿ ಕಡ್ಡಾಯವಾಗಿ ಪಾವತಿಸಬೇಕು. ಕೆಲಸದ ದಿನಗಳನ್ನು ಮಾಸಿಕ 200 ಕ್ಕೆ ಹೆಚ್ಚಿಗೆ ಮಾಡಬೇಕು.
ದಿನದ ವೇತನ 600 ರೂಪಾಯಿಗೆ ಹೆಚ್ಚಿಸಬೇಕು. ಕಾಯಕ ಬಂಧುಗಳ ಅರೆ ಕುಶಲ   ವೇತನ ಪಾವತಿಸ ಬೇಕು. ಕೊಪ್ಪಳ ಏತ ನೀರಾವರಿ ಯೋಜನೆಯಲ್ಲಿ ಕುಷ್ಟಗಿ ತಾಲೂಕಿನ 36 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು  ಶೀಘ್ರವಾಗಿ ಜಾರಿ ಮಾಡಿ ಬೇಸಿಗೆ ಅವಧಿಯಲ್ಲಿ ನೀರು ಶೇಖರಣೆಗೆ ಕ್ರಮ ಕೈಗೊಳ್ಳಬೇಕು. ಬಗರ ಹುಕುಂ ಸಾಗುವಳಿದಾರರಿಗೆ ಶೀಘ್ರ ಹಕ್ಕು ಪತ್ರ ನೀಡಬೇಕು. ಅರಣ್ಯ ಭೂಮಿಯಿಂದ ರೈತರನ್ನು ಒಕ್ಕಲೆಬ್ಬಿಸುವು ಅರಣ್ಯ ಇಲಾಖೆಯ ಅಧಿಕಾರಿಗಳ ದೌರ್ಜನ್ಯ ನಿಲ್ಲಬೇಕು. ಪ್ರದೇಶಗಳಲ್ಲಿ ಸುಸಜ್ಜಿತ ಸಾರ್ವಜನಿಕ ಮಹಿಳಾ ಶೌಚಾಲಯ ನಿರ್ಮಿಸಬೇಕು. ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರು ಜಲ ಜೀವನ ಮಿಶನ್ ಯೋಜನೆ ಸಂಪೂರ್ಣವಾಗಿ ಕಳಪೆ ಮಟ್ಟದಲ್ಲಿ ನಡೆಯುತ್ತಿದೆ ಅದರ ಬಗ್ಗೆ ತನಿಖೆ ನಡೆಬೇಕು ನಂದಾಪೂರ ಕ್ರಾಸ್ ದಿಂದ ನಂದಾಪೂರ ಮಾರ್ಗವಾಗಿ ಜುಮಲಾಪೂರ ಗ್ರಾಮಕ್ಕೆ ಕಚೇರಿ ಸಮಯಕ್ಕೆ ಬಸ್‌ ಸೌಲಭ್ಯ ಒದಗಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷೆ ಸಂಗಮ್ಮ ಗುಳಗೌಡ್ರ, ಉಪಾಧ್ಯಕ್ಷೆ ಅಕ್ಕಮ್ಮ ಮರೆಗೌಡ್ರ, ಕಾರ್ಯದರ್ಶಿ ಬಸಪ್ಪ ಹುನಗುಂದ, ಮುತ್ತಣ್ಣ ಬನ್ನಿಗೋಳ, ಮಲ್ಲಿಕಾರ್ಜುನ ತಳವಗೇರಿ, ಸಂಗಪ್ಪ ಕಮತರ, ಕವಿತಾ ತಳವಗೇರಿ ಹಾಗೂ ವಿವಿಧ ಗ್ರಾಮದ ರೈತ ಮುಖಂಡರು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: