ಸರ್ವ ಸದಸ್ಯರ ಸಹಾಯ ಸಹಕಾರದಿಂದ ಬೆಸ್ಟ್ ಕ್ಲಬ್ ಹಾಗೂ ಬೆಸ್ಟ್ ಅಧ್ಯಕ್ಷೆಯ ಅವಾರ್ಡ್ ಲಭಿಸಿದೆ:  ಶಾರದಾ ಶೆಟ್ಟರ್  

Get real time updates directly on you device, subscribe now.


ಕುಷ್ಟಗಿ.ಜೂ.12: ನನಗೆ ಶಕ್ತಿ ಇರುವವರಿಗೊ ಸಮಾಜಕ್ಕೆ ಅನೇಕ ಕೊಡುಗೆ ನೀಡುತ್ತೇನೆ ಇದರಿಂದ ನನ್ನ ಮನಸ್ಸಿಗೆ ನೆಮ್ಮದಿ ದೊರಕುತ್ತದೆ ಎಂದು ಇನ್ನರವೀಲ್ ಕ್ಲಬ್ ಅಧ್ಯಕ್ಷೆ ಶಾರದಾ ಶೆಟ್ಟರ್ ಹೇಳಿದರು.
ಇನ್ನರವೀಲ್ ಕ್ಲಬ್ ವತಿಯಿಂದ ಬುಧವಾರ ಮಧ್ಯಾಹ್ನ ಇಲ್ಲಿನ ಅಜಯ್ ಕಂಪರ್ಟ್ ಸಭಾ ಭವನದಲ್ಲಿ ಏರ್ಪಡಿಸಿದ್ದ ಧನ್ಯವಾದ ಸಮರ್ಪಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು  ಸವಿನಿಯರ್ ದೇಣಿಗೆ, ಯುನಿಕ್ ಪ್ರೋಜಕ್ಟ್, ನ್ಯೋಟ್ರಿಷನ್ ಡೇ, ವೃದ್ದರಿಗೆ ಕಣ್ಣಿನ ಆಪರೇಶನ್, ಆಹಾರ ಸಾಮಗ್ರಿ, ಸದಸ್ಯರ ಸಂಖ್ಯೆ ಹೆಚ್ಚಾಗಿ ಮಾಡಿದ ಬಗ್ಗೆ, ಅಗರಬತ್ತಿ ತಯಾರಿಕೆ ಸೇರಿದಂತೆ ಇನ್ನೂ ಹಲವಾರು ಜನಪ್ರಿಯ ಯೋಜನೆಗಳಿಗೆ ಪ್ರಶಸ್ತಿಗಳು ಲಭಿಸಿವೆ ಅದರ ಜೊತೆಗೆ 2024 ನೇ ಸಾಲಿನ ಕುಷ್ಟಗಿ ಇನ್ನರವೀಲ್ ಕ್ಲಬ್ ಗೆ ಬೆಸ್ಟ್ ಅವಾರ್ಡ್ ಹಾಗೂ ಬೆಸ್ಟ್ ಅಧ್ಯಕ್ಷೆ ಎಂದು ಅವಾರ್ಡ್ ದೊರಕಿದೆ ಈ ಎಲ್ಲಾ ಸಾಧನೆಗಳು ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ಸಹಕಾರದಿಂದ ಸಾಧ್ಯ ಎಂದು ಹೇಳಿದರು. ನನ್ನ ಅವಧಿ ಮುಕ್ತಾಯದವರೆಗೂ ಸಮಾಜಕ್ಕೆ ಅನೇಕ ಕೊಡುಗೆ ನೀಡುತ್ತೇನೆ. ಇದರಿಂದ ನನ್ನ ಮನಸ್ಸಿಗೆ ನೆಮ್ಮದಿ ದೊರಕುತ್ತದೆ ಎಂದು ಖುಷಿಯಿಂದ ಹೇಳಿದರು. ಯೋಗದಿಂದ ರೋಗ ಮುಕ್ತಿ ಹೊಂದುತ್ತದೆ ಬೇಸರ ಪಡದೇ ಪ್ರತಿಯೊಬ್ಬರು ಯೋಗಾಸನ ಮಾಡಬೇಕು ಎಂದು ಸಲಹೆ ನೀಡಿದರು. ಇನ್ನರವೀಲ್ ಕ್ಲಬ್ ಮೂಲಕ ಸಮಾಜಕ್ಕೆ ಅನೇಕ ಕೊಡುಗೆ ಹಾಗೂ ಪ್ರಾಮಾಣಿಕ ಸೇವೆ ನೀಡಿದ ಸಾರ್ಥಕತೆ ನನಗಿದೆ. ನನ್ನ ಮಗ ಹಾಗೂ ನನ್ನ ಪತಿಯವರ ಸಹಾಯ ಸಹಕಾರದಿಂದ ಎರಡು ಅವಧಿಗೆ ಕ್ಲಬ್ ಅಧ್ಯಕ್ಷೆಯಾಗಿ ಹಲವಾರು ಜನಪರ ಕಾರ್ಯ ಹಾಗೂ ಬಡವರ ಸೇವೆ ಮಾಡಿದ ತೃಪ್ತಿ ನನಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಡಿಸ್ಟಕ್ ಎಡಿಟರ್ ಪಾರ್ವತಿ ಪಳೂಟಿ ಮಾತನಾಡಿ ಇನ್ನರವೀಲ್ ಕ್ಲಬ್ ಅಧ್ಯಕ್ಷೆ ಶಾರದಾ ಶೆಟ್ಟರ್ 108 ಪ್ರೋಜಕ್ಟ್ ಮಾಡುವ ಮೂಲಕ ಕುಷ್ಟಗಿ ಇನ್ನರವೀಲ್ ಕ್ಲಬ್ ಹೆಸರು ತರುವ ಮೂಲಕ ಉನ್ನತ ಸಾಧನೆ ಮಾಡಿದ್ದಾರೆ ಎಂದು ಅವರ ಕಾರ್ಯವನ್ನು ಸ್ಲಾಘೀಸಿದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಕುಷ್ಟಗಿ ತಾಲೂಕು ಗುರುತಿಸುವ ಕಾರ್ಯ ಇನ್ನರವೀಲ್ ಕ್ಲಬ್ ಮಾಡಿದೆ. ಹಂತ ಹಂತವಾಗಿ ಕ್ಲಬ್ ನ ಪದಾಧಿಕಾರಿಗಳು ಹಾಗೂ ಸದಸ್ಯರು ವಿವಿಧ ಹುದ್ದೆಗೆ ಮೇಲ್ದರ್ಜೆಗೆ ಹೋಗುವ ಪ್ರಯತ್ನ ಮಾಡಬೇಕು ಎಂದು ಕ್ಲಬ್ ಸದಸ್ಯರಿಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ವಂದನಾ ಗೋಗಿ, ಗೌರಮ್ಮ ಕುಡತಿನಿ, ಖಜಾಂಚಿ ಶರಣಮ್ಮ ಅಂಗಡಿ, ಎಡಿಟರ್ ಮೇಘಾ ದೇಸಾಯಿ ಹಾಗೂ ಕ್ಲಬ್ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!