ಕಳಪೆ ರಸಗೊಬ್ಬರ ಮಾರಿದರೆ ಕ್ರಮ: ತಹಶೀಲ್ದಾರ ರವಿ ಎಸ್. ಅಂಗಡಿ  

Get real time updates directly on you device, subscribe now.

ಕುಷ್ಟಗಿ. ಜೂ.11: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಗುಣಮಟ್ಟದ ಮತ್ತು ನಿಗದಿತ ಬೆಲೆಗೆ ಮಾರಾಟ ಮಾಡುವಂತೆ ತಹಶೀಲ್ದಾರ ರವಿ ಎಸ್, ಅಂಗಡಿ ಮಾರಾಟಗಾರರಿಗೆ ತಾಕೀತು ಮಾಡಿದರು.
ಸಹಾಯಕ ಕೃಷಿ ನಿರ್ದೇಶಕರು ಕುಷ್ಟಗಿ ಕಛೇರಿಯಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ಮಂಗಳವಾರ ಹಮ್ಮಿಕೊಂಡಿದ್ದ ಮುಂಗಾರು ಹಂಗಾಮಿನ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಸಗೊಬ್ಬರ ಕೃತಕ ಅಭಾವ, ಕಾಳಸಂತೆ, ಅನಧೀಕೃತ ಗೋದಾಮುಗಳಲ್ಲಿ ದಾಸ್ತಾನು ಮಾಡಿ ಮಾರಾಟ ಮಾಡುವುದು ಹಾಗೂ ಕಳಪೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಹಾಯಕ ಕೃಷಿ ನಿರ್ದೇಶಕ ಅಜ್ಮೀರ್ ಅಲಿ ಮಾತನಾಡಿ ಕೃಷಿ ಪರಿಕರಗಳ ಪರವಾನಿಗೆ ಕಾಲಕಾಲಕ್ಕೆ ನವೀಕರಣಗೊಳಿಸಿಕೊಳ್ಳಬೇಕು, ರೈತರಿಗೆ ಗುಣಮಟ್ಟದ ಬೀಜ, ರಸಗೊಬ್ಬರ ವಿತರಿಸಬೇಕು ಮತ್ತು ಇಲಾಖೆಯೊಂದಿಗೆ ಸಹಕರಿಸಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕ ತಾಂತ್ರಿಕ ಅಧಿಕಾರಿಗಳಾದ ರಾಜಶೇಖರ, ಸೌಮ್ಯ ಶೆಟ್ಟರ್, ಕೃಷಿ ಅಧಿಕಾರಿ ಪ್ರಕಾಶ ತಾರಿವಾಳ, ಕಂದಾಯ ನಿರೀಕ್ಷಕರಾದ ಉಮೇಶಗೌಡ ಮಾಲಿ ಪಾಟೀಲ ಹಾಗೂ ಪ್ರ.ದ.ಸ ಅನ್ವರ್ ಪಾಷಾ ಸಭೆಯಲ್ಲಿ ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!