ಮರಗಳು ಬೆಳೆದಷ್ಟು ಮನುಕುಲ ಉಳಿಯುತ್ತೇವೆ; ಮುತ್ತಣ್ಣ ಸವರಗೋಳ
ಮರಗಳು ಬೆಳೆದಷ್ಟು ಮನುಕುಲ ಉಳಿಯುತ್ತದೆ. ಮರಮಗಳು ಇಲ್ಲದೆಯೇ ಮನುಷ್ಯರ ಬದುಕು ಊಹಿಸಲಾಸಾಧ್ಯ ಎಂದು ಡಿ.ಎಸ್.ಪಿ ಮುತ್ತಣ್ಣ ಸವರಗೋಳರವರು ನುಡಿದರು. ಅವರು ಕೊಪ್ಪಳ ಚಾರಣ ಬಳಗ ಮತ್ತು ಪರಿಸರ ಪ್ರೇಮಿಗಳ ಸಹಕಾರದೊಂದಿಗೆ ಕೊಪ್ಪಳ ಜಿಲ್ಲಾ ಕ್ರೀಡಾಂಗಣ ಹತ್ತಿರ ಇರುವ ಕ್ರೀಡಾ ವಸತಿ ಶಾಲೆಯ ಹೊರಾಂಗಣದಲ್ಲಿ ವನಮಹೋತ್ಸವ ನಿಮಿತ್ಯ ಹಮ್ಮಿಕೊಂಡಿದ್ದ ಸಸಿನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರೆದು ಇತ್ತೀಚೆಗೆ ಬಿಸಿಲಿನ ತಾಪ ಅತಿ ಹೆಚ್ಚುತ್ತಿರುವುದಕ್ಕೆ ಮನುಷ್ಯನ ದುರಾಶೆಗಳೇ ಕಾರಣ. ಅವನಿಗೆ ಪ್ರಕೃತಿಯ ಮೇಲೆ ಇಲ್ಲದಿರುವ ಕಾಳಜಿ ಎದ್ದು ಕಾಣುತ್ತಿದೆ. ಒಬ್ಬ ವ್ಯಕ್ತಿ ಕನಿಷ್ಠ ಒಂದು ಮರವನ್ನಾದರೂ ಬೆಳೆಸುವ ಪ್ರವೃತ್ತಿ ಬೆಳೆಸಿಕೊಂಡರೆ ನಮ್ಮ ಪರಿಸರ ತಂಪಾಗಿ ಮನುಷ್ಯರನ್ನೂ ತಂಪಾಗಿಡುತ್ತದೆ ಎಂದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಠಲ ಜಾಬಗೌಡರ್‌ರವರು ಮಾತನಾಡಿ ನಾವು ಮುಂದಿನ ಪೀಳಿಗೆಗೆ ಆಸ್ತಿ ಕೊಡುವುದಕ್ಕಿಂತ ಮುಖ್ಯವಾಗಿ ಪ್ರಾಕೃತಿಕ ಕೊಡುಗೆಯನ್ನು ಕೊಡುವುದು ಬಹಳ ಮುಖ್ಯ ಎಂದರು. ಹಿರಿಯ ವಕೀಲರಾದ ವಿ.ಎಂ.ಭೂಸನೂರುಮಠ, ಡಾ||ಎಸ್.ಬಿ.ದಾನರೆಡ್ಡಿ, ಕೊಪ್ಪಳ ನಗರ ಠಾಣೆಯ ಇನ್ಸಪೆಕ್ಟರ್ ಜಯಪ್ರಕಾಶ .ಕೆ ಡಾ||ಕವಿತಾ ಹ್ಯಾಟಿ ಮುಂತಾದವರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಡಾ||ವಿ.ಎಸ್.ಮಾದಿನೂರು. ಡಾ||ಅನಿರುದ್ಧ ಕುಷ್ಟಗಿ, ಬಸವರಾಜ ಸಂಕನಗೌಡರ್, ಗವಿಕುಮಾರ ಕಸ್ತೂರಿ, ಜಮುಜಾ, ಡಾ.ಬಾಲು ತಳವಾರ, ಗುರುರಾಜ ವೈ.ಜಿ, ಸಿ.ಬಿ.ಪಾಟೀಲ್, ಕ್ರೀಡಾ ಇಲಾಖೆಯ ತರಬೇತಿದಾರ ವಿಶ್ವನಾಥ ಮುಂತಾದವರು ಉಪಸ್ಥಿತರಿದ್ದರು. ಕೊಪ್ಪಳ ಚಾರಣ ಬಳಗದ ಸಂಯೋಜಕರಾದ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ಕಾರ್ಯಕ್ರಮ ನೆರೆವೆಸಿದರು. ಕೊನೆಗೆ ಡಾ||ವಿಜಯ ಸುಂಕದ್‌ರವರು ವಂದಿಸಿದರು. ಈ ಕಾರ್ಯಕ್ರಮದಲ್ಲಿ ಕ್ರೀಡಾ ವಸತಿ ಶಾಲೆಯ ಸುಮಾರು ನಲವತ್ತು ಮಕ್ಕಳು ಭಾಗವಹಿಸಿದ್ದರು. ಐವತ್ತಕ್ಕೂ ಅಧಿಕ ಮರಗಳನ್ನು ನೆಡಲಾಯಿತು. ಈ ಕಾರ್ಯಕ್ರಮದ ಪ್ರಾಯೋಜಕರಾದ ಮಹಾಂತೇಶ ಸಂಗಟಿಯವರು ಉಪಸ್ಥಿತರಿದ್ದರು.
Comments are closed.