ನೂತನ ಸಂಸದ ಕೆ. ರಾಜಶೇಖರ್ ಹಿಟ್ನಾಳ- ಡಿಕೆ ಶಿವಕುಮಾರ್ ಭೇಟಿ
ಕೊಪ್ಪಳ ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ ಆಯ್ಕೆ ಆಗಿರುವ ಕೆ. ರಾಜಶೇಖರ್ ಹಿಟ್ನಾಳ ಇಂದು ಬೆಂಗಳೂರಿನಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಉಪ ಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಧನ್ಯವಾದಗಳನ್ನು ತಿಳಿಸಿ, ಆಶೀರ್ವಾದ ಪಡೆದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ದಿಸಿಸಿ ಅಧ್ಯಕ್ಷ ಅಮರೆಗೌಡ ಪಾಟೀಲ್ ಬಯ್ಯಾಪೂರ ಶಾಸಕ ರಾಘವೇಂದ್ರ ಹಿಟ್ನಾಳ್, ಬಸನಗೌಡ ಬಾದರ್ಲಿ, ಕೆ. ಎಂ. ಸಯ್ಯದ್, ಅಮರೇಶ್ ಕರಡಿ , ಗೂಳಪ್ಪ ಹಲಗೇರಿ ಸೇರಿದಂತೆ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನಾಯಕರುಗಳು ಉಪಸ್ಥಿತರಿದ್ದರು.
Comments are closed.