ನ್ಯೂ ಆಕ್ಸಫರ್ಡ್ ಶಾಲೆಯಲ್ಲಿ ವಿಶ್ವ ಪರಿಸರ ದಿನ

Get real time updates directly on you device, subscribe now.

ಆಚರಣೆ ಗಿಡ ಮರಗಳನ್ನು ಬೆಳೆಸುವ ಭಾವನೆ ಮುಖ್ಯ
ಕೊಪ್ಪಳ : ಗಿಡ ಮರಗಳನ್ನು ಬೆಳೆಸುವ ಭಾವನೆಯನ್ನು ಮಕ್ಕಳಲ್ಲಿ ಮುಡಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ನ್ಯೂ ಆಕ್ಸಫರ್ಡ್ ಶಾಲೆಯ ಅಧ್ಯಕ್ಷೆ ಸುಮನ್ ಸಜ್ಜನ್ ಹೇಳಿದರು.
ನಗರದ ಕುಷ್ಟಗಿ ರಸ್ತೆಯಲ್ಲಿರುವ ನ್ಯೂ ಆಕ್ಸಫರ್ಡ್ ಶಾಲೆಯ ಆವರಣದಲ್ಲಿ ಸ್ಕೌಟ್ ಮತ್ತು ಗೈಡ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಗೆ ಸಸಿ ನೆಡುವ ಮುಲಕ ಚಾಲನೆ ನೀಡಿ ಅವರು ಮಾತನಾಡಿದರು. ಮಾನವ ಪರಿಸರ ಒಡನಾಟದಿಂದ ದೂರವಾಗುತ್ತಿದ್ದಾನೆ, ಇದರಿಂದ ಪರಿಸರದಲ್ಲಿ ಅಸಮತೋಲನ ಉಂಟಾಗಿದ್ದು ಸರಿಯಾಗಿ ಮಳೆ ಬರುತ್ತಿಲ್ಲಾ, ಬೇಸಿಗೆಯಲ್ಲಿ ಬಿಸಿಲಿಗೆ ಜನ ಬಳಲುತ್ತಿದ್ದಾರೆ. ಪರಿಸರದಲ್ಲಿ ಬೆಳೆಯುದರಿಂದ ಮಕ್ಕಳಲ್ಲಿ ಉತ್ತಮ ಆರೋಗ್ಯದ ಜತೆಗೆ ಒಳ್ಳೆಯ ಸಂಸ್ಕಾರವು ಬೆಳೆಯುತ್ತದೆ ಎಂದರು.
ನಂತರ ಮಾತನಾಡಿದ ಸ್ಕೌಟ್ ಮತ್ತು ಗೈಡ್ಸ್ ಹಾಗೂ ದೈಹಿಕ ಶಿಕ್ಷಕ ಕೃಷ್ಣಮೂರ್ತಿ ವಂಟೆತ್ತಿನವರ್ ಅವರು, ಪ್ರತಿ ಮಕ್ಕಳು ಪಾಲಕರ ಜತೆಗೂಡಿ ತಮ್ಮ ಮನೆಗಳ ಮುಂದೆ ಒಂದೊಂದು ಸಸಿ ನೆಡವುದು ಸೇರಿದಂತೆ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಎಲ್ಲರು ಪರಿಸರ ರಕ್ಷಣೆಯತ್ತ ಒಲವು ತೊರಬೇಕು ಎಂದು ಹೇಳಿದರು.
ಶಾಲೆಯ ಶಿಕ್ಷಕರನ್ನೊಳಗೂಡಿ ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟು ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಶಾಲೆಯ ಇತರ ಶಿಕ್ಷಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Get real time updates directly on you device, subscribe now.

Comments are closed.

error: Content is protected !!