ಶಿವನಗೌಡ ಪಾಟೀಲ ವಯೋನಿವೃತ್ತಿ
ಕೊಪ್ಪಳ ೦೩.೦೬.೨೦೨೪
ಕೊಪ್ಪಳ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ೨೯ ವರ್ಷಗಳ ಕಾಲ ಸೇವೆ ಸಲ್ಲಿಸಿ, ವಯೋನಿವೃತ್ತಿಗೊಂಡ ಗ್ರಂಥಪಾಲಕ ಶಿವನಗೌಡ ಪಾಟೀಲ ಅವರನ್ನು ಮುಖ್ಯ ಗ್ರಂಥಾಲಯಾಧಿಕಾರಿ ಯಮನೂರಪ್ಪ ವಟಪರವಿ ಸನ್ಮಾನಿಸಿ ಬೀಳ್ಕೊಟ್ಟರು.
ನಗರದ ಕಿನ್ನಾಳ ರಸ್ತೆಯಲ್ಲಿನ, ಎನ್.ಜಿ.ಓ ಕಾಲೋನಿಯಲ್ಲಿರುವ ಮುಖ್ಯ ಗ್ರಂಥಾಲಯಾಧಿಕಾರಿಗಳ ಕಛೇರಿ ಡಾ.ಬಿ.ಆರ್.ಅಂಬೇಡ್ಕರ್ ರೀಡಿಂಗ್ ಸೆಂಟರನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಯಮನೂರಪ್ಪ ವಟಪರವಿ ಮಾತನಾಡಿ ಶಿವನಗೌಡ ಪಾಟೀಲ ಅವರು ಕರ್ತವ್ಯವನ್ನು ನಿಷ್ಟೆಯಿಂದ ಮಾಡುತ್ತಿದ್ದರು. ನಿವೃತ್ತಿಯ ನಂತರವೂ ಶಿವನಗೌಡ ಪಾಟೀಲ ಅವರ ಜೀವನ ಹಸಿರಾಗಿರಲಿ, ಕುಟುಂಬ ಹಾಗೂ ಮೊಮ್ಮಕ್ಕಳೊಂದಿಗೆ ಖುಷಿಯಾಗಿರಲಿ ಎಂದರು.
ಶರಣಪ್ಪ ವಡಗೇರಿ, ಲಾಲ್ ಅಹ್ಮದ್,ರಾಮಪ್ಪ, ಬಸವರಾಜ ಹಟ್ಟಿ, ಯಮನೂರಪ್ಪ ಬೆಲ್ಲದ, ಅವರೊಂದಿಗಿನ ನೆನಪುಗಳನ್ನು ಮೆಲುಕು ಹಾಕಿ ಶುಭ ಹಾರೈಸಿದರು. ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿವೃತ್ತ ನೌಕರರಾದ ಎನ್.ಸಿ.ಫಣಿ ಮತ್ತು ನಾಗರಾಜ ತಳವಾರ ಬಂದು ಹಾರೈಸಿ ಅವರೊಂದಿಗಿನ ಕಳೆದ ದಿನಗಳನ್ನು ನೆನಪಿಸಿದರು.
ಕೊಪ್ಪಳ ಜಿಲ್ಲೆಯ ಎಲ್ಲಾ ಶಾಖಾ ಗ್ರಂಥಾಲಯದ ಗ್ರಂಥಾಲಯ ಸಹಾಯಕರು, ಸಿಬ್ಬಂದಿಗಳು, ಮೇಲ್ವಿಚಾರಕರು ಹಾಜರಿದ್ದರು. ಜಿಲ್ಲಾ ಕೇಂದ್ರ ಗ್ರಂಥಾಲಯದ ಪ್ರಥಮ ದರ್ಜೆ ಸಹಾಯಕ ನರಸಿಂಹಮೂರ್ತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು, ನಾಗರಾಜನಾಯಕ ಡೊಳ್ಳಿನ ನಿರೂಪಿಸಿದರು. ವಿಜಯಲಕ್ಷ್ಮೀ ವಡ್ಡಟ್ಟಿ ವಂದಿಸಿದರು.
Comments are closed.