ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಧಾರಿತ ಎರಡು ದಿನಗಳ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಗಾರ

Get real time updates directly on you device, subscribe now.

               
ಕೊಪ್ಪಳ : ಕರ್ನಾಟಕ ಸರ್ಕಾರದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ , ವಾಧ್ವಾನಿ ಫೌಂಡೇಶನ್ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ಆರ್ಟಿಫಿಸಿಯಲ್ ಇಂಟಲಿಜೆನ್ಸಿ  ಆಧಾರಿತ ಎರಡು ದಿನಗಳ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.
ಇದೇ ತಿಂಗಳು ಜೂನ್ 5 ರಂದು ಬುಧವಾರ ಮುಂಜಾನೆ 9.30 ಕ್ಕೆ ಕಾಲೇಜಿನ ಸಭಾಂಗಣದಲ್ಲಿ  ಕಾರ್ಯಗಾರ  ಉದ್ಘಾಟನೆಯಾಗಲಿದೆ.  ಕಾಲೇಜು ಶಿಕ್ಷಣ ಇಲಾಖೆಯ ಪ್ರಾಧೇಶಿಕ ಕಚೇರಿ  ಕಲಬುರ್ಗಿಯ  ಜಂಟಿ   ನಿರ್ದೇಶಕರಾದ   ಪ್ರೊ ಗೊಳ್ಳೆ ಶಿವಶರಣ.ಬಿ  ಇವರು  ಉದ್ಘಾಟನೆ ಮಾಡಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ  ವಾಧ್ವಾನಿ ಫೌಂಡೇಶನ್  ಬೆಂಗಳೂರಿನ ಮಾಸ್ಟರ್ ಟ್ರೇನರ್  ಕು. ಸ್ವಾತಿ ಪುತ್ರನ್ ಮಾತನಾಡಲಿದ್ದಾರೆ. ಕಾರ್ಯಗಾರದಲ್ಲಿ   ಪ್ರಾದೇಶಿಕ ಕಚೇರಿ ಕಾಲೇಜು ಶಿಕ್ಷಣ ಇಲಾಖೆ  ಕಲಬುರ್ಗಿಯ ಸಹಾಯಕ ನಿರ್ದೇಶಕರಾದ ರಾಜೇಂದ್ರ ಸಿಂಧೆ, ವಿಶೇಷ ಅಧಿಕಾರಿಗಳಾದ  ಡಾ.ಬಿ. ಸರೋಜಾ , ಡಾ. ಸೂರ್ಯಕಾಂತ್ ಉಮ್ಮಾಪುರೇ  ಅತಿಥಿಗಳಾಗಿ  ಆಗಮಿಸುವರು. ಅಧ್ಯಕ್ಷತೆಯನ್ನು   ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳದ ಪ್ರಾಂಶುಪಾಲರಾದ  ತಿಮ್ಮಾರೆಡ್ಡಿ ಮೇಟಿ ವಹಿಸುವರು. 2 ದಿನ ಜರುಗುವ  ಈ ಕಾರ್ಯಗಾರದಲ್ಲಿ ಬಳ್ಳಾರಿಯ ವಿ. ಎಸ್. ಕೆ  ವಿಶ್ವ ವಿದ್ಯಾಲಯ ಹಾಗೂ ಕೊಪ್ಪಳ ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಪದವಿ ಕಾಲೇಜುಗಳ ಆಯ್ದ  ಶಿಕ್ಷಕರು ಭಾಗವಹಿಸಲಿದ್ದಾರೆ.

Get real time updates directly on you device, subscribe now.

Comments are closed.

error: Content is protected !!