ಪಬ್ಲಿಕ್ ಸ್ಪೋರ್ಟ್ಸ ಅಕಾಡೆಮಿಯ ಇಂಡೋರ್ ಸ್ಟೇಡಿಯಂನಲ್ಲಿ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮ
ಗಂಗಾವತಿ: ಗಂಗಾವತಿಯ ಪಬ್ಲಿಕ್ ಕ್ಲಬ್ ಆವರಣದ ಪ್ಲೇಯಿಂಗ್ ಪೇಧರ್ಸ್ ಇಂಡೂರ್ ಸ್ಟೇಡಿಯಂನಲ್ಲಿ ನಡೆದ ಬೇಸಿಗೆ ಶಿಬಿರದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ೮೫ ಮಕ್ಕಳು ಭಾಗವಹಿಸಿದ್ದರು. ಈ ಸಮಾರೋಪ ಕಾರ್ಯಕ್ರಮದಲ್ಲಿ ಮಕ್ಕಳು ಹಾಗೂ ಪಾಲಕರು ಪಾಲ್ಗೊಂಡಿದ್ದರು.
ವಿಜೇತ ಮಕ್ಕಳಿಗೆ ಫಲಕ ಹಾಗೂ ಪ್ರಶಸ್ತಿ ಪತ್ರವನ್ನು ಗಂಗಾವತಿಯ ಹಿರಿಯ ವೈದ್ಯರಾದ ಡಾ|| ಮಾಣಿಕಪ್ಪ ಹಾಗೂ ಗಂಗಾವತಿ ಟ್ರಾಫಿಕ್ ಇನ್ಸ್‌ಪೆಕ್ಟರ್ ಗುರುಚಂದ್ರ ಯಾದವ್ ವಿತರಿಸಿದರು.
ನಂತರ ಹಿರಿಯ ವೈದ್ಯರಾದ ಡಾ|| ಮಾಣಿಕಪ್ಪ ಮಾತನಾಡಿ, ಗಂಗಾವತಿ ಹೃದಯ ಭಾಗದಲ್ಲಿ ಇಂತಹ ಅದ್ಭುತ ಇಂಡೂರ್ ಸ್ಟೇಡಿಯಂನ್ನು ಸಮಾನ ಮನಸ್ಕರ ತಂಡ ನಿರ್ಮಿಸಿ, ಮಕ್ಕಳಿಗೆ ಇಂತಹ ಬೇಸಿಗೆ ಪಂದ್ಯಾವಳಿ ನಡೆಸಿದ್ದು ಶ್ಲಾಘನೀಯ ಕಾರ್ಯ ಎಂದರು.
ಟ್ರಾಫಿಕ್ ಇನ್ಸ್‌ಪೆಕ್ಟರ್ ಗುರುಚಂದ್ರ ಯಾದವ್ ಮಾತನಾಡಿ ಆರೋಗ್ಯ ಕಾಪಾಡಲು ಮಕ್ಕಳಿಗೆ ಕ್ರೀಡೆಗಳು ಅವಶ್ಯಕ, ಇಂತಹ ಕ್ರೀಡೆಗಳ ಪಂದ್ಯಾವಳಿಯಲ್ಲಿ ಗೆಲ್ಲುವುದು ಮುಖ್ಯ ಅಲ್ಲ, ಭಾಗವಹಿಸುವುದು ಮುಖ್ಯ. ಸೋಲು ಗೆಲುವುಗಳನ್ನು ಮಕ್ಕಳು ಸಮಾನವಾಗಿ ತೆಗೆದುಕೊಳ್ಳಬೇಕೆಂದು ಮಕ್ಕಳಿಗೆ ಮಾರ್ಗದರ್ಶನ ಕೊಟ್ಟರು.
ಮೊದಲ ಪಂದ್ಯಾವಳಿ ನಡೆಸಿದ ಪಬ್ಲಿಕ್ ಸ್ಪೋರ್ಟ್ಸ್ ಅಕಾಡೆಮಿ, ೮೫ ಮಕ್ಕಳಿಗೆ ತರಬೇತಿ ನೀಡಿ ದಾಖಲೆಯನ್ನು ನಿರ್ಮಿಸಿದೆ ಎಂದು ಕ್ಲಬ್‌ನ ಅಧ್ಯಕ್ಷ ಡಾ|| ಸತೀಶ್ ರಾಯಕರ್ ಸಂತೋ? ವ್ಯಕ್ತಪಡಿಸಿದರು.
ನಿರ್ದೇಶಕರಾದ ಡಾ|| ಶಿವಕುಮಾರ್ ಮಾಲಿಪಾಟೀಲ, ಡಾ|| ಶರಣಬಸವ ಸಂಕನೂರ್, ಸುರೇಶ ಸಿಂಗನಾಳ, ಅಶೋಕ ಗನ್ನಮನಿ, ತರಬೇತಿದಾರ ಜೀವನ, ಉಪಾಧ್ಯಕ್ಷರಾದ ರಮೇಶ ವಲ್ಕಂದಿನ್ನಿ, ಕಾರ್ಯದರ್ಶಿ ಹರಿಕೃ? ನೆಕ್ಕಂಟಿ, ಖಜಾಂಚಿ ಡಾ|| ಪ್ರಶಾಂತ ದೇಸಾಯಿ, ಸಹ ಕಾರ್ಯದರ್ಶಿ ನಾಗೇಶ ಗುನ್ನಾಳ, ಡಾ|| ವಿವೇಕ ಪಾಟೀಲ್, ಸಂಜಯ ಸುರಾನ ಸೇರಿದಂತೆ ಇತರರು ಇದ್ದರು.
Comments are closed.