ಗಂಗಾವತಿ ನಗರದ ಪ್ರಮುಖ ರಸ್ತೆಗಳ ದುರಸ್ಥಿಗೆ ಆಗ್ರಹ

Get real time updates directly on you device, subscribe now.

ಗಂಗಾವತಿ: ಗಂಗಾವತಿಯ ಪ್ರಮುಖ ರಸ್ತೆಗಳಲ್ಲಿ ಹಾಗೂ ವೃತ್ತಗಳಲ್ಲಿ ಅಲ್ಲದೇ ಜನನಿಬಿಡ ಸ್ಥಳಗಳಲ್ಲಿ ಅಂದರೆ ಬಸ್‌ಸ್ಟ್ಯಾಂಡ್ ಎದುರಿಗೆ, ಆನೆಗುಂದಿ ರಸ್ತೆ ಹಾಗೂ ಅಂಬೇಡ್ಕರ್ ಸರ್ಕಲ್, ತಾತನ ಮಠದಿಂದ ಜುಲೈನಗರವರೆಗೆ, ಬೈಪಾಸ್ ರಸ್ತೆ, ಕನಕದಾಸ ವೃತ್ತ ಹೀಗೆ ಬೇರೆ ಬೇರೆ ರಸ್ತೆಗಳ ಮಧ್ಯದಲ್ಲಿ ಬಹಳಷ್ಟು ತೆಗ್ಗುಗಳು, ಗುಂಡಿಗಳು ಬಿದ್ದಿವೆ. ಈ ಸಮಸ್ಯೆಯನ್ನು ೨-೩ ವರ್ಷಗಳಿಂದ ಸಾರ್ವಜನಿಕರು ಎದುರಿಸುತ್ತಿದ್ದಾರೆ ಎಂದು ಡಾ|| ಶಿವಕುಮಾರ ಮಾಲಿಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಗಂಗಾವತಿ ಸುತ್ತಮುತ್ತಲಿನ ಅಂಜನಾದ್ರಿ ಬೆಟ್ಟ, ಪಂಪಾಸರೋವರ, ಹಂಪಿ, ಇನ್ನಿತರ ಐತಿಹಾಸಿಕ ಪ್ರದೇಶಗಳನ್ನು ನೋಡಲು ಗಂಗಾವತಿಗೆ ಹೆಚ್ಚಿನ ಪ್ರವಾಸಿಗರು ಬರುತ್ತಿದ್ದು, ಇದರಿಂದ ಗಂಗಾವತಿಯ ಹದಗೆಟ್ಟ ರಸ್ತೆಗಳಿಂದ ಪ್ರವಾಸಿಗರು ತೊಂದರೆ ಅನುಭವಿಸುತ್ತಿದ್ದಾರೆ. ಪ್ರಸ್ತುತ ಮಳೆಗಾಲ ಪ್ರಾರಂಭವಾಗಿದ್ದರಿಂದ ಇಂತಹ ರಸ್ತೆಗಳಲ್ಲಿ ಸಂಚರಿಸುವಾಗ ಅಪಘಾತಗಳು ಸಂಭವಿಸುವ ಭೀತಿ ಇದೆ. ಕಾರಣ ಇದಕ್ಕೆ ಸಂಬಂಧಪಟ್ಟ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ರಸ್ತೆಗಗಳಲ್ಲಿನ ತೆಗ್ಗುಗಳನ್ನು ಕೂಡಲೇ ಮುಚ್ಚಬೇಕು, ಕೆಂಪು ಮಣ್ಣಿನಿಂದ ಮುಚ್ಚಿದರೆ ಸಾಲದು, ಇದರಿಂದ ಸಾರ್ವಜನಿಕರ ವಾಹನಗಳು ಸ್ಕಿಡ್ ಆಗುವ ಸಂಭವವಿರುತ್ತದೆ. ಕಾರಣ ಡಾಂಬರ್ ಹಾಕುವ ಮೂಲಕ ರಸ್ತೆಗಳಲ್ಲಿನ ತೆಗ್ಗುಗುಂಡಿಗಳನ್ನು ಮುಚ್ಚಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಶಾಶ್ವತ ಪರಿಹಾರ ಮಾಡಿಕೊಡಬೇಕೆಂದು ಆಗ್ರಹಿಸಿದರು.

Get real time updates directly on you device, subscribe now.

Comments are closed.

error: Content is protected !!