ಸಾಮಾಜಿಕ-ಆರ್ಥಿಕ ಪ್ರಜಾಪ್ರಭುತ್ವ ಇರದ ರಾಜಕೀಯ ಪ್ರಜಾಪ್ರಭುತ್ವಕ್ಕೆ ಮಹತ್ವವಿಲ್ಲ -ಶಿವಸುಂದರ್
ಕೊಪ್ಪಳ ಮೇ : ಪ್ರಜಾಪ್ರಭುತ್ವವೆಂದರೆ ಎಂದರೆ ಕೇವಲ ರಾಜಕೀಯ ಪ್ರಭುತ್ವ ಮಾತ್ರವಲ್ಲ,ಸಾಮಾಜಿಕ ಹಾಗೂ ಆರ್ಥಿಕ ಪ್ರಜಾಪ್ರಭುತ್ವವೂ ಹೌದು.ಇವು ಜಾರಿಯಾಗದ ಹೊರತು ಪ್ರಜಾಪ್ರಭುತ್ವಕ್ಕೆ ಮಹತ್ವವಿಲ್ಲ ಎಂದು ಚಿಂತಕ ,ಹೋರಾಟಗಾರ ಶಿವಸುಂದರ್ ಹೇಳಿದರು.
ಇಲ್ಲಿನ ಶಿವಶಾಂತವೀರ ಮಂಗಲ ಭವನದಲ್ಲಿ ಜರುಗುತ್ತಿರುವ ಮೇ ಸಾಹಿತ್ಯ ಮೇಳದಲ್ಲಿಂದು ನಾವು ಮತ್ತು ನಾಳೆ ಗೋಷ್ಟಿಯಲ್ಲಿ ,ಚುನಾವಣೋತ್ತರ ಸರ್ಕಾರ ಎದುರಿಸುವ ಬಗೆ -ಐಕ್ಯತೆ ಅಗತ್ಯ ಕುರಿತು ಶಿವಸುಂದರ್ ಮಾತನಾಡಿ, ರಾಜಕೀಯವಾಗಿ ಸಮಾನವಾಗಿದ್ದರೂ ಆರ್ಥಿಕವಾಗಿ,ಸಾಮಾಜಿಕವಾಗಿ ಅಸಮಾನರಾಗಿಯೇ ಮುಂದುವರೆಯುತ್ತೇವೆ. ಅಂಬೇಡ್ಕರ್ ಹಾಗೂ ಕಾರ್ಲ್‌ಮಾರ್ಕ್ಸ್ ಕೊಟ್ಟ ವಿವೇಕ ಮರೆತಿದ್ದೇವೆ.ಒಂದು ವೇಳೆ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರದಿದ್ದರೆ ಅದು ಇತರೆ ಪಕ್ಷಗಳ ನೆರವು ಮತ್ತೆ ಅಧಿಕಾರದ ಗದ್ದುಗೆ ಹಿಡಿಯುವ ಸರ್ವ ಪ್ರಯತ್ನಗಳನ್ಜು ಮಾಡುತ್ತದೆ.ಈ ಹಿಂದೆ ಉತ್ತರ ಭಾರತದಲ್ಲಿ ರಾಮನ ಹೆಸರಿನಲ್ಲಿ ರಥಯಾತ್ರೆ ಕೈಗೊಂಡು ದಲಿತ,ಆದಿವಾಸಿ,ಹಿಂದುಳಿದ ವರ್ಗಗಳ .ಮತಗಳನ್ನು ತನ್ನ ಬುಟ್ಟಿಗೆ ಸೇರಿಸಿಕೊಂಡ ಬಿಜೆಪಿ ಬಹುಸಂಖ್ಯಾತರನ್ನು ಮತ ಧರ್ಮಗಳ ಉನ್ಮಾದಕ್ಕೊಳಪಡಿಸಿ ಮತಗಳಿಕೆ ಪ್ರಮಾಣ ಹೆಚ್ಚಿಸಿಕೊಂಡು ಅಧಿಕಾರಕ್ಕೇರಿದ್ದು ಈಗ ಇತಿಹಾಸ.ಬಹುರಾಷ್ಟ್ರೀಯ ಕಂಪನಿಗಳು ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಶತಾಯ ಗತಾಯ ಪ್ರಯತ್ನ ಮಾಡುತ್ತಿವೆ.ಆಕಸ್ಮಿಕವಾಗಿ ಎನ್‌ಡಿಎ ಗೆ ಬಹುಮತ ಸಾಧ್ಯವಾಗದಿದ್ದರೆ ಅದು ಸುಲಭವಾಗಿ ಅಧಿಕಾರ ಹಸ್ತಾಂತರ ಮಾಡಲು ಸಾಧ್ಯವೇ ಎಂಬ ಸಂದೇಹಗಳಿವೆ.ಪವಾಡ ಸಂಭವಿಸಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರುವ ಅವಕಾಶ ತಡೆಯಲು ಅವರು ಈಗಲೇ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟರು. ನಂತರ ನೆರೆದ ಸಭಿಕರೊಂದಿಗೆ ಸಂವಾದ ನಡೆಯಿತು. ಡಾ.ಕೆ.ಬಿ.ಬ್ಯಾಳಿ, ಗುಂಜಳ್ಳಿ ನರಸಿಂಹ,ಬಿ.ಎಂ.ಹನುಮಂತಪ್ಪ, ಭಾರತಿ ಮೂಲಿಮನಿ,ಸಂಜಯದಾಸ್ ಕೌಜಗೇರಿ ಉಪಸ್ಥಿತರಿದ್ದರು. ಮುತ್ತು ಬಿಳೇಯಲಿ ಸಂಯೋಜಿಸಿದರು.
Comments are closed.