ಮೇ ಸಾಹಿತ್ಯ ಮೇಳಕ್ಕೆ ಸಕಲ ಸಿದ್ಧತೆ ಪೂರ್ಣ

Get real time updates directly on you device, subscribe now.

ಸಂವಿಧಾನ ಭಾರತ ಹಾಗೂ ಧರ್ಮ ರಾಜಕಾರಣ :

ಕೊಪ್ಪಳ : ಸಂವಿಧಾನ ಭಾರತ ಹಾಗೂ ಧರ್ಮ ರಾಜಕಾರಣ ಶೀರ್ಷಿಕೆಯಡಿಯಲ್ಲಿ ನಡೆಯುತ್ತಿರುವ ಹತ್ತನೇ ಮೇ ಸಾಹಿತ್ಯ ಮೇಳಕ್ಕೆ ಸಿದ್ಧತೆಗಳು ಸಂಪೂರ್ಣಗೊಂಡಿದೆ. ಮೇ 25 ಹಾಗೂ 26ರಂದು ಶಿವ ಶಾಂತವೀರ ಮಂಗಳ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ಲಡಾಯಿ ಪ್ರಕಾಶನ ಗದಗ , ಕವಿ ಪ್ರಕಾಶನ ಕವಲಕ್ಕಿ , ಚಿತ್ತಾರ ಕಲಾಬಳಗ ಧಾರವಾಡ , ಮೇ ಸಾಹಿತ್ಯ ಮೇಳ ಬಳಗ ಕೊಪ್ಪಳ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ದೇಶದ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಸಾಹಿತಿಗಳು ಹೋರಾಟಗಾರರು ಪ್ರಗತಿಪರ ಚಿಂತಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ 800 ರಿಂದ ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. ನಾಡಿನ ಸಾಹಿತ್ಯ-ಸಾಂಸ್ಕೃತಿಕ ಚಳುವಳಿಯಲ್ಲಿ ತನ್ನದೇ ಆದ ಮಹತ್ವದ ಪಾತ್ರ ನಿರ್ವಹಿಸುತ್ತಿರುವ,ಸರ್ಕಾರದಿಂದ ಯಾವ ನೆರವೂ ಪಡೆಯದೇ ಜನರಿಂದಲೇ ನಡೆಯುವ ಮೇ ಸಾಹಿತ್ಯ ಮೇಳಕ್ಕೆ ಈಗ ದಶಕದ ಉತ್ಸಾಹವಿದೆ. ರಾಜ್ಯದ ವಿವಿಧ ಭಾಗಗಳಿಂದ ಈಗಾಗಲೇ ಅತಿಥಿಗಳು ಆಗಮಿಸಿದ್ದು ಅವರಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ . ನಗರದ ವಿವಿಧ ವಸತಿ ಗೃಹಗಳಲ್ಲಿ ಹಾಗೂ ಮನೆಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ.

ವೇದಿಕೆ-ಆವರಣ-ದ್ವಾರಗಳು-
1958 ರ ಸ್ವಾತಂತ್ರ್ಯ ಹೋರಾಟ ಕೊಪ್ಪಳ ಹುತಾತ್ಮರ ಹೆಸರಿನಲ್ಲಿ ವೇದಿಕೆ ನಿರ್ಮಾಣವಾಗಿದೆ.ಡಾ.ವಿ.ಎನ್.ಲಕ್ಷ್ಮೀನಾರಾಯಣ,ಪ್ರಕಾಶ ಹಿಟ್ನಳ್ಳಿ,ರಾಜು ಬಾಗಲಿ,ಆನಂದ ಭಂಡಾರಿ ಅವರ ಹೆಸರುಗಳನ್ನು ಆವರಣಕ್ಕೆ ನಾಮಕರಣ ಮಾಡಲಾಗಿದೆ. ವಿಠ್ಠಪ್ಪ ಗೋರಂಟ್ಲಿ ಹಾಗೂ ಗವಿಸಿದ್ಧ ಎನ್ ಬಳ್ಳಾರಿ ಅವರ ಹೆಸರಿನಲ್ಲಿ ದ್ವಾರ ನಿರ್ಮಿಸಲಾಗಿದೆ.

೧೨ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳು, ಚಿತ್ರಕಲಾ ಮಳಿಗೆಗಳು ಸಿದ್ದಗೊಂಡಿವೆ. ರಾಜ್ಯದ ವಿವಿಧ ಭಾಗಗಳಿಂದ ಪುಸ್ತಕ ಮಾರಾಟಗಾರರು ಹಾಗೂ ಪ್ರಕಾಶಕರು ಭಾಗವಹಿಸಲಿದ್ದಾರೆ.

ಕೊಪ್ಪಳದಲ್ಲಿ ಪುಸ್ತಕ ಹಾಗೂ ಓದುವ ಸಂಸ್ಕೃತಿ ಬೆಳಸಲು ಶ್ರಮಿಸಿದ ಶಿಕ್ಷಕ ಬಿ.ಆರ್.ತುಬಾಕಿ ಹಾಗೂ ನಿವೃತ್ತ ಗ್ರಂಥಪಾಲಕ ದೇವೇಂದ್ರಪ್ಪ ಎನ್.ಡೊಳ್ಳಿನ ಅವರ ಹೆಸರಿನಲ್ಲಿ ನಿರ್ಮಿಸಲಾಗಿರುವ ಪುಸ್ತಕ ಮಳಿಗೆಗಳನ್ನು ಮೇ 25 ರಂದು ಬೆಳಿಗ್ಗೆ 10 ಗಂಟೆಗೆ ಸಿ.ಚನ್ನಬಸವಣ್ಣ ,ಈರಪ್ಪ ಕಂಬಳಿ,ರವಿತೇಜ ಅಬ್ಬಿಗೇರಿ ಉದ್ಘಾಟಿಸುವರು.ಶರಣು ಶೆಟ್ಟರ್ ಕಾರ್ಯಕ್ರಮ ಸಂಯೋಜಿಸುವರು.

ಕಾಳಪ್ಪ ಪತ್ತಾರ ಚಿತ್ರಕಲಾ ಪ್ರದರ್ಶನ ಮಳಿಗೆಯನ್ನು ಏಕಪ್ಪ ಚಿತ್ರಗಾರ,ಪ್ರಕಾಶ ಕಂದಕೂರ ಹಾಗೂ ಶರಣಪ್ಪ ವಡಿಗೇರಿ ಉದ್ಘಾಟಿಸುವರು.ರುದ್ರಪ್ಪ ಭಂಡಾರಿ ಸಂಯೋಜಿಸುವರು.

ಹೋರಾಟದ ಹಾಡುಗಳು
ಆರ್ ಸಿ ಎಫ್ ಕಲಾತಂಡ ಸಿಂಧನೂರು,ದಲಿತ ಕಲಾ ಮಂಡಳಿ ,ಇಪ್ಟಾ ಕರ್ನಾಟಕ,ಅರುಣೋದಯ ಕಲಾ ತಂಡ ಕೊತಬಾಳ,ಶರಣ ಕಲಾಬಳಗ ಗಂಗಾವತಿ,ಸಾಂಬಯ್ಯ ಹಿರೇಮಠ ಮತ್ತು ತಂಡ ಹರ್ಲಾಪುರ-ಕುಂದಗೋಳ,ಡಿಂಗ್ರಿ ಭರತ್,ಮರಿಯಮ್ಮ ಚೂಡಿ,ಗೌರಿ ಗೋನಾಳ,ನಾದ ಮಣಿನಾಲ್ಕೂರು ಮತ್ತಿತರ ಕಲಾವಿದರಿಂದ ಹೋರಾಟದ ಹಾಡುಗಳು,ಜನಪರ ಗೀತೆಗಳು ಮೊಳಗಲಿವೆ.

ಜನಸಾಮಾನ್ಯರಿಂದ ಉದ್ಘಾಟನೆ
ಬೆಳಿಗ್ಗೆ 10.30 ಕ್ಕೆ ಮೇಳವನ್ನು ಜನಸಾಮಾನ್ಯರಾದ ಬಸಮ್ಮ,ಜಂಬವ್ವ, ದುರ್ಗವ್ವ,ಶೋಭಾ ಮಠ ,ನಿಂಗಜ್ಜ ಮತ್ತು ಮಕ್ಕಳಿಂದ ಮೇಳ ಉದ್ಘಾಟನೆಯಾಗಲಿದೆ.

ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅಧ್ಯಕ್ಷತೆ ವಹಿಸುವರು,ನವದೆಹಲಿಯ ರೈತ ಹೋರಾಟಗಾರ ರಾಕೇಶ್ ಟಿಕಾಯತ್,ಪಣಜಿಯ ಕೊಂಕಣಿ ಕವಿ,ಹೋರಾಟಗಾರ ದಾಮೋದರ್ ಮೌಜೋ,ತೆಲಂಗಾಣದ ಕವಿ,ಹೋರಾಟಗಾರ್ತಿ ಜೂಪಕ ಸುಭದ್ರ ದಿಕ್ಸೂಚಿ ಮಾತುಗಳನ್ನಾಡುವರು.ರಮೇಶ ಗಬ್ಬೂರ ಸಂವಿಧಾನದ ಪ್ರಸ್ತಾವನೆ ಓದುವರು.ಡಿ.ಎಂ.ಬಡಿಗೇರ ಸ್ವಾಗತಿಸುವರು,ಕೆ.ಪಿ.ಸುರೇಶ ಪ್ರಾಸ್ತಾವಿಕ ಮಾತನಾಡುವರು.

ಕಾಶಪ್ಪ ಚಲವಾದಿ,ಅನಿಲ ಹೊಸಮನಿ ನಿರ್ಣಯಗಳನ್ನು ಮಂಡಿಸುವರು.ಟಿ.ರತ್ನಾಕರ್ ,ಜೆ.ಭಾರದ್ವಾಜ,ಕೆ.ವೆಂಕಟರಾಜು,ಮೆಹಮೂದ್ ಬೇಗಂ ಉಪಸ್ಥಿತರಿರುವರು.ಸಂಗಮೇಶ ಮೆಣಸಿನಕಾಯಿ,ಅಖಿಲಾ ವಿದ್ಯಾಸಂದ್ರ ಕಾರ್ಯಕ್ರಮ ಸಂಯೋಜಿಸುವರು.

ಗೋಷ್ಟಿ 1- ಸಂವಿಧಾನ ಭಾರತ
ಮಧ್ಯಾಹ್ನ 2 ಗಂಟೆಗೆ

ಸಂವಿಧಾನ ಪೀಠಿಕಾ ಭಾಗ ಆದರ್ಶ-ಅವಲೋಕನ ಕುರಿತು ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯವಾದಿ ಮೋಹನ್ ಕಾತರಕಿ ಮಾತನಾಡುವರು, ಭಾರತದಲ್ಲಿ ಕೋಮುರಾಜಕಾರಣ ಇತಿಹಾಸ ಕುರಿತು ಉಡುಪಿಯ ಕೆ.ಫಣಿರಾಜ್ ,ಸಂವಿಧಾನ ಎದುರಿಸಿದ ಪ್ರತಿರೋಧಗಳ ಕುರಿತು ನಿವೃತ್ತ ಜಿಲ್ಲಾ ನ್ಯಾಯಾಧೀಶ ನಬಿ ರಸೂಲ್ ಮಮದಾಪೂರ ಮಾತನಾಡುವರು.
ಎಚ್.ಎಸ್.ಪಾಟೀಲ,ಡಾ.ರಾಜಶೇಖರ ನಾರಿನಾಳ,ಡಾ.ಈರಣ್ಣ,ಸವಿತಾ ಅಂಗಡಿ ಉಪಸ್ಥಿತರಿರುವರು.ಶರಣಪ್ಪ ಬಾಚಲಾಪುರ ಸಂಯೋಜಿಸುವರು.

ಗೋಷ್ಟಿ -2- ವರ್ತಮಾನದಲ್ಲಿ ಧರ್ಮ ರಾಜಕಾರಣ ಇಳಿಹೊತ್ತು 3.45 ಕ್ಕೆ

ನ್ಯಾಯ ವ್ಯವಸ್ಥೆ ಕುರಿತು ಎಸ್.ಬಾಲನ್, ಚುನಾವಣಾ ಪ್ರಜಾಪ್ರಭುತ್ವ ಕುರಿತು ಸುಧೀರ್ ಕುಮಾರ್ ಮುರೊಳ್ಳಿ,ಕಾರ್ಯಾಂಗ ಕುರಿತು ನಿವೃತ್ತ ಕೆಎಎಸ್ ಅಧಿಕಾರಿ ನೂರ್ ಮನ್ಸೂರ್,ಶಿಕ್ಷಣ ವ್ಯವಸ್ಥೆ ಕುರಿತು ವಿ.ಪಿ.ನಿರಂಜನಾರಾಧ್ಯ,ಸಿನೆಮಾ ಮಾಧ್ಯಮ ಕುರಿತು ಕೇಸರಿ ಹರವೂ ಮಾತನಾಡುವರು. ಡಾ.ಮಹಾಂತೇಶ ಮಲ್ಲನಗೌಡರ್,ರಾಜಾಭಕ್ಷಿ,ಆನಂದ ಸಿಂಗಾಡಿ,ಸಲೀಮಾ ಜಾನ್ ಉಪಸ್ಥಿತರಿರುವರು.
ಬಸವರಾಜ ಪೂಜಾರ್ ,ಜೀವನ್‌ಸಾಬ ವಾಲೀಕಾರ ಸಂಯೋಜಿಸುವರು.

ಗೋಷ್ಟಿ-3- ಬದುಕು-ಹಾಡು
ಸಂಜೆ 6.15 ಕ್ಕೆ
ರಹಿಮಾನವ್ವ ಕಲ್ಮನಿ,ಪಿ.ಬಿ.ಧುತ್ತರಗಿ ಸಾಂಸ್ಕೃತಿಕ ವೇದಿಕೆಯಲ್ಲಿ

ಹಾಡು-ಮಾತು- ಮೈಸೂರಿನ ಜನಾರ್ದನ(ಜನ್ನಿ) ಅವರಿಂದ, ಫಕ್ಕೀರಪ್ಪ ವಜ್ರಬಂಡಿ,ಮಹಾಂತೇಶ ಕೊತಬಾಳ,ಹೊನ್ನಪ್ಪ ಮರಿಯಮ್ಮನವರ,ಜ್ಯೋತಿ ಹಿಟ್ನಾಳ ಉಪಸ್ಥಿತರಿರುವರು. ಬಾಳಪ್ಪ ವೀರಾಪುರ,ಮಂಜುಳಾ ಸೋಮನಾಳ ಸಂಯೋಜಿಸುವರು.

ಕವಿಗೋಷ್ಟಿ -1- ಸಂಜೆ 7.30 ಕ್ಕೆ
ಅರುಣಾ ನರೇಂದ್ರ ಅಧ್ಯಕ್ಷತೆವಹಿಸುವರು,ಸಿರಾಜ್ ಬಿಸರಳ್ಳಿ ಆಶಯ ಮಾತುಗಳನ್ನಾಡುವರು. ಡಾ.ಜಾಜಿ ದೇವೇಂದ್ರಪ್ಪ,ವಿಜಯಲಕ್ಷ್ಮಿ ಕೊಟಗಿ ಮುಖ್ಯ ಅತಿಥಿಗಳಾಗಿ ಆಗಮಿಸುವರು.

ಮೈಲಾರಪ್ಪ ಬೂದಿಹಾಳ,ಶರಣಪ್ಪ ತಳ್ಳಿ,ನಾಗಭೂಷಣ ಅರಳಿ,ಶಕುಂತಲಾ ನಾಯಕ,ಶೈಲಜಾ ಹಿರೇಮಠ,ಅಜಮೀರ್ ನಂದಾಪುರ,ಲಕ್ಷ್ಮಿ ಮಾನಸ,ಅಶೋಕ ಹೊಸಮನಿ,ಅಮೀರ್‌ಸಾಬ ಒಂಟಿ,ಪಾರ್ವತಿ ಕನಕಗಿರಿ,ಡಾ.ಮಮ್ತಾಜ್ ಬೇಗಂ,ಡಾ.ನಾಗೇಶ್ ಪೂಜಾರಿ,ಮೌನೇಶ್ ನವಲಹಳ್ಳಿ,ಜಹರಾನಾ ಕೋಳೂರು,ಶ್ರೀನಿವಾಸ ದೇಸಾಯಿ,ಅಲ್ಲಾವುದ್ದೀನ್ ಯಮ್ಮಿ,ಡಾ.ಪ್ರವೀಣ್ ಪೊಲೀಸ್‌ಪಾಟೀಲ,ಮೌನೇಶ್ ಬಡಿಗೇರ,ನಿಂಗು ಬೆಣಕಲ್ ,ವಸುಧಾ ಪಾಟೀಲ,ವಿರೇಶ ಮೇಟಿ ಕವಿತೆಗಳನ್ನು ವಾಚಿಸುವರು.
ಶೀಲಾ ಹಾಲ್ಕುರಿಕೆ ಹಾಗೂ ನಾಗರಾಜನಾಯಕ ಡೊಳ್ಳಿನ ಸಂಯೋಜಿಸುವರು.

ಎರಡು ದಿನಗಳ ಕಾಲ ನಡೆಯುವ ಮೇ ಸಾಹಿತ್ಯ ಮೇಳವನ್ನು ಬಸವರಾಜ ಸೂಳಿಭಾವಿ ಅವರ ನೇತೃತ್ವದಲ್ಲಿ ಕೊಪ್ಪಳ ಹಾಗೂ ನಾಡಿನ ವಿವಿಧ ಜನಪರ ಸಂಘಟನೆಗಳು ಆಯೋಜಿಸುತ್ತಿವೆ. ಬಂಡಾಯದ ನೆಲ ಕೊಪ್ಪಳದಲ್ಲಿ ನಾಡಿನ ,ದೇಶದ ಹಲವಾರು ಚಿಂತಕರು ನೆರೆದು ಚಿಂತನೆಯ ಹೊಳೆ ಹರಿಸಿ,ಅರಿವನ್ನು ವಿಸ್ತರಿಸುವ,ಎಚ್ಚರಿಸುವ ಮಹತ್ವದ ಚಿಂತನ ಮಂಥನಗಳನ್ನು ನಡೆಸುವರು.
ಕೊಪ್ಪಳ ಹಾಗೂ ಸುತ್ತಲಿನ ವಿದ್ಯಾರ್ಥಿಗಳು,ಯುವಜನರು ಈ ಅಪರೂಪದ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಂಘಟಕರು ಕೋರಿದ್ದಾರೆ.

ವೇದಿಕೆ-ಆವರಣ-ದ್ವಾರಗಳು-
1958 ರ ಸ್ವಾತಂತ್ರ್ಯ ಹೋರಾಟ ಕೊಪ್ಪಳ ಹುತಾತ್ಮರ ಹೆಸರಿನಲ್ಲಿ ವೇದಿಕೆ ನಿರ್ಮಾಣವಾಗಿದೆ.ಡಾ.ವಿ.ಎನ್.ಲಕ್ಷ್ಮೀನಾರಾಯಣ,ಪ್ರಕಾಶ ಹಿಟ್ನಳ್ಳಿ,ರಾಜು ಬಾಗಲಿ,ಆನಂದ ಭಂಡಾರಿ ಅವರ ಹೆಸರುಗಳನ್ನು ಆವರಣಕ್ಕೆ ನಾಮಕರಣ ಮಾಡಲಾಗಿದೆ. ವಿಠ್ಠಪ್ಪ ಗೋರಂಟ್ಲಿ ಹಾಗೂ ಗವಿಸಿದ್ಧ ಎನ್ ಬಳ್ಳಾರಿ ಅವರ ಹೆಸರಿನಲ್ಲಿ ದ್ವಾರ ನಿರ್ಮಿಸಲಾಗಿದೆ.

ಪುಸ್ತಕ,ಚಿತ್ರಕಲಾ ಮಳಿಗೆಗಳು

Comments are closed.

error: Content is protected !!