ರೈತ ಮಕ್ಕಳಿಗೆ ತೋಟಗಾರಿಕೆ ತರಬೇತಿ : ಅರ್ಜಿ ಆಹ್ವಾನ

Get real time updates directly on you device, subscribe now.

ಕೊಪ್ಪಳ,: 2024-25ನೇ ಸಾಲಿಗೆ ಕೊಪ್ಪಳ ಜಿಲ್ಲೆಯ ಆಸಕ್ತ ಅರ್ಹ ರೈತ ಮಕ್ಕಳಿಂದ ಕೊಪ್ಪಳ ತಾಲೂಕಿನ  ಮುನಿರಾಬಾದಿನ  ತೋಟಗಾರಿಕೆ ತರಬೇತಿ  ಕೇಂದçದಲ್ಲಿ 09  ತಿಂಗಳ ತೋಟಗಾರಿಕೆ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.  
2024 ರ ಜೂನ್ 15 ರಿಂದ 2025ರ ಮಾರ್ಚ್ 31 ರವರೆಗೆ 09 ತಿಂಗಳುಗಳ ಕಾಲ ತರಬೇತಿಯನ್ನು ನೀಡಲಾಗುತ್ತದೆ. ತರಬೇತಿಗಾಗಿ ಸಾಮಾನ್ಯ ಅಭ್ಯರ್ಥಿ-17, ಪರಿಶಿಷ್ಠ ಜಾತಿ-03 ಗಳಂತೆ ಒಟ್ಟು  20 ಅಭ್ಯರ್ಥಿಗಳ ಗುರಿ ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದವರಿಗೆ  ಕನಿಷ್ಠ 18 ವರ್ಷ ಗರಿಷ್ಠ 33 ವರ್ಷ, ಇತರರಿಗೆ ಕನಿಷ್ಠ  18 ವರ್ಷ  ಗರಿಷ್ಠ 30 ವರ್ಷ ವಯೀಮಿತಿ ನಿಗದಿಪಡಿಸಲಾಗಿದೆ.
ಅಭ್ಯರ್ಥಿಗಳು ಕನ್ನಡ ವಿಷಯಗಳೊಂದಿಗೆ 10ನೇ ತರಗತಿ ಪರೀಕ್ಷೆಯಲ್ಲಿ  ತೇರ್ಗಡೆಯಾಗಿರಬೇಕು. ಚೆನ್ನಾಗಿ  ಕನ್ನಡ ಓದುವುದು, ಬರೆಯುವುದು  ಮತ್ತು ಮಾತನಾಡುವುದನ್ನು ಬಲ್ಲವರಾಗಿರಬೇಕು. ಈ ತರಬೇತಿಯು  ರೈತರ ಮಕ್ಕಳಿಗಾಗಿ ಇರುವುದರಿಂದ ಅಭ್ಯರ್ಥಿಯ ತಂದೆ/ತಾಯಿ  ಅಥವಾ  ಪೋಷಕರು (ತಂದೆ/ತಾಯಿ ಇಲ್ಲದ ಪಕ್ಷದಲ್ಲಿ)  ಕಡ್ಡಾಯವಾಗಿ  ಜಮೀನು ಹೊಂದಿರಬೇಕು  ಹಾಗೂ  ಸ್ವಂತ ಸಾಗುವಳಿ ಮಾಡುತ್ತಿರಬೇಕು.  ಈ ಬಗ್ಗೆ  ಪಹಣಿಯನ್ನು  ನೀಡುವುದು  ಕಡ್ಡಾಯವಾಗಿರುತ್ತದೆ . ಅಭ್ಯರ್ಥಿಗಳು  ತೋಟದ ಕೆಲಸಗಳನ್ನು  ಮಾಡುವಷ್ಟು  ದೃಢಕಾಯರಾಗಿರಬೇಕು.
ಸಾಮಾನ್ಯ ಆಭ್ಯರ್ಥಿಗಳಿಗೆ ರೂ. 30,  ಪರಿಶಿಷ್ಠ ಜಾತಿ ಮತ್ತು  ಪರಿಶಿಷ್ಠ ಪಂಗಡದವರಿಗೆ     ರೂ.15 ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದ್ದು, ಪೋಸ್ಟಲ್ ಆರ್ಡರ್(ಐಪಿಒ) ಅಥವಾ ಡಿಮ್ಯಾಂಡ್ ಡಾçಫ್ಟ್ (ಡಿಡಿ)  ಯನ್ನು ತೋಟಗಾರಿಕೆ ಉಪನಿರ್ದೇಶಕರು(ಜಿ.ಪಂ), ಕೊಪ್ಪಳ ರವರ ಹೆಸರಿನಲ್ಲಿ ಪಡೆದು ಅರ್ಜಿ ಜೊತೆಗೆ ಲಗತ್ತಿಸಬೇಕು.
ಈಗಾಗಲೇ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಹೊರತುಪಡಿಸಿ ಹೊಸದಾಗಿ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ಮೇ 23 ರಿಂದ ಜೂನ್ 03 ರವರೆಗೆ ತೋಟಗಾರಿಕೆ ಉಪನಿರ್ದೇಶಕರು(ಜಿ.ಪಂ), ಕೊಪ್ಪಳ, ಸಹಾಯಕ ತೋಟಗಾರಿಕೆ ನಿರ್ದೇಕರು (ರಾ.ವ) ಕೊಪ್ಪಳ ರವರ ಕಛೇರಿಯಲ್ಲಿ  ಪಡೆಯಬಹುದು ಅಥವಾ ಇಲಾಖಾ ವೆಬ್‌ಸೈಟ್  www.horticulture.kar.nic.in     ಮುಖಾಂತರ ಡೌನ್‌ಲೋಡ್ ಮಾಡಿಕೊಳ್ಳಬಹುದು. ನಿಗದಿತ ಅರ್ಜಿಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಜೂನ್ 03 ರ ಸಂಜೆ 05.30 ಗಂಟೆಯೊಳಗಾಗಿ ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ)ಕೊಪ್ಪಳ   ಅಥವಾ ಸಹಾಯಕ ತೋಟಗಾರಿಕೆ ನಿರ್ದೇಕರು (ರಾವ) ಕೊಪ್ಪಳ ರವರ ಕಛೇರಿಗೆ ಸಲ್ಲಿಸಬೇಕು.
ಜೂನ್ 06 ರಂದು ಬೆಳಿಗ್ಗೆ 10 ಗಂಟೆಗೆ ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ) ಕೊಪ್ಪಳ ಕಛೇರಿಯಲ್ಲಿ ಸಂದರ್ಶನಕ್ಕೆ  ಎಲ್ಲಾ  ಮೂಲ ದಾಖಾಲಾತಿಗಳೊಂದಿಗೆ ಹಾಜರಾಗಬೇಕು. ಇದಕ್ಕಾಗಿ ಪçತ್ಯೇಕ  ಸಂದರ್ಶನ ಪತçವನ್ನು ಕಳುಹಿಸಲಾಗುವುದಿಲ್ಲ ಎಂದು ತೋಟಗಾರಿಕೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: