ಹೊಸ ಪದವಿ ಮಹಾವಿದ್ಯಾಲಯ ಆರಂಭಿಸಲು ನೋಂದಾಯಿತ ಸಂಘ ಸಂಸ್ಥೆಗಳಿAದ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ-
ಕೊಪ್ಪಳ,): ಕೊಪ್ಪಳ ವಿಶ್ವವಿದ್ಯಾಲಯದಿಂದ 2024-25 ನೇ ಸಾಲಿಗೆ ಕೊಪ್ಪಳ ವಿಶ್ವವಿದ್ಯಾಲಯದ ಅಧೀನ ಕಾಲೇಜುಗಳಿಂದ ಮತ್ತು ನೋಂದಾಯಿತ ಸಂಘ ಸಂಸ್ಥೆ/ಸಾರ್ವಜನಿಕ ಟ್ರಸ್ಟ್ ಗಳಿಂದ ಕಲಾ, ವಿಜ್ಞಾನ, ವಾಣಿಜ್ಯ ಹಾಗೂ ಇನ್ನಿತರ ಸಾಂಪ್ರದಾಯಿಕ ವಿಷಯಗಳಲ್ಲಿ ಹೊಸ ಪದವಿ ಮಹಾವಿದ್ಯಾಲಯಗಳನ್ನು ಆರಂಭಿಸಲು UUCMS ತಂತ್ರಾAಶದ ಮೂಲಕ ದಂಡ ರಹಿತ ಶುಲ್ಕದೊಂದಿಗೆ ಅರ್ಜಿ ಸಲ್ಲಿಕೆ ಅವಧಿಯನ್ನು ಮೇ 24 ರವರೆಗೆ ಹಾಗೂ ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಮೇ 28 ರವರೆಗೆ ಅವಧಿ ವಿಸ್ತರಿಸಲಾಗಿದೆ.
ಆಸಕ್ತ ನೋಂದಾಯಿತ ಸಂಘ ಸಂಸ್ಥೆ/ಟ್ರಸ್ಟ್ಗಳ ಸಂಯೋಜಕರು ಮೂಲ ದಾಖಲೆಗಳೊಂದಿಗೆ ದಂಡ ರಹಿತ ಶುಲ್ಕದೊಂದಿಗೆ ಮೇ 24 ರವರೆಗೆ ಮತ್ತು ದಂಡ ಶುಲ್ಕದೊಂದಿಗೆ ಮೇ 28 ರ ಸಂಜೆ 5 ಗಂಟೆಯೊಳಗೆ ನಿಗದಿತ ಯೋಜನಾ ಶುಲ್ಕ ಪಾವತಿಸಿ ಯೋಜನೆಗಳಿಗೆ http://uucms.Karnataka.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಸ್ತುತ ಸಂಯೋಜನೆ ಹೊಂದಿರುವ ಮಹಾವಿದ್ಯಾಲಯಗಳಿಂದ ಸ್ನಾತಕ/ಸ್ನಾತಕೋತ್ತರ ಕೋರ್ಸ್ಗಳಿಗೆ ಮುಂದುವರಿಕೆ/ವಿಸ್ತರಣೆ/ಹೊಸ ಕೋರ್ಸ್/ಹೊಸ ವಿಷಯ/ಸ್ನಾತಕೋತ್ತರ ಸಂಯೋಜನೆ/ಶಾಶ್ವತ ಸಂಯೋಜನೆ ನವೀಕರಣ/ಮಹಾವಿದ್ಯಾಲಗಳ ಹೆಸರು ಬದಲಾವಣೆ/ಮಹಾವಿದ್ಯಾಲಯ ಸ್ಥಳಾಂತರ/ಆಡಳಿತ ಮಂಡಳಿ ಹೆಚ್ಚಳ/ಶಾಶ್ವತ ಬದಲಾವಣೆ ಹಾಗೂ ಇತ್ಯಾದಿ ವಿಷಯಗಳಿಗೆ ಸಂಬAಧಿಸಿದ ವಿವರ, ಸಂಯೋಜಿತ ಶುಲ್ಕಗಳ ವಿವರ ಹಾಗೂ ಸಂಯೋಜನೆಗೆ ಅರ್ಜಿ ಸಲ್ಲಿಸುವ ಮಾಹಿತಿಯನ್ನು ತಳಕಲ್ ಹತ್ತಿರದ ಸರಕಾರಿ ಇಂಜಿನಿಯರಿAಗ್ ಕಾಲೇಜು ಆವರಣದಲ್ಲಿರುವ ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಖುದ್ದಾಗಿ ಭೇಟಿ ನೀಡಿ ತಿಳಿದುಕೊಳ್ಳಬಹುದು ಅಥವಾ ವಿಶ್ವವಿದ್ಯಾಲಯದ ಜಾಲತಾಣ www.koppaluniversity.ac.in ದಿಂದ ಮಾಹಿತಿ ಪಡೆಯಬಹುದು ಎಂದು ವಿವಿ ಕುಲಸಚಿವರಾದ ಪ್ರೊ.ಕೆ.ವಿ. ಪ್ರಸಾದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.