ಅಂಜಲಿ ಅಂಬಿಗೇರ ಕೊಲೆ : ಆರೋಪಿಯ ಕಠಿಣ ಶಿಕ್ಷೆಗೆ ಒತ್ತಾಯ
ಗಂಗಾವತಿ. ಹುಬ್ಬಳ್ಳಿಯ ವೀರಾಪೂರ ಓಣಿಯ ಅಂಜಲಿ ಅಂಬಿಗೇರ ಎನ್ನುವ ಯುವತಿಯನ್ನು ಕೊಲೆ ಮಾಡಿ ಹೋಗಿರುವ ಆರೋಪಿಯನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಗಂಗಾಮತ ಸಮಾಜದ ಜಿಲ್ಲಾ ಉಪಾಧ್ಯಕ್ಷ ಮತ್ತು ನಗರಸಭೆ ಸದಸ್ಯರು ಪರಶುರಾಮ ಮಡ್ಡೇರ ಒತ್ತಾಯಿಸಿದ್ದಾರೆ.
ನಂತರ ಮಾತನಾಡಿ, ನೇಹಾ ಹತ್ಯೆ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಪ್ರೀತಿ ನಿರಾಕರಿಸಿದಕ್ಕೆ ಮತ್ತೊಮ್ಮೆ ಗಂಗಾಮತ ಸಮಾಜದ ಯುವತಿ ಕೊಲೆ ನಡೆದಿದೆ. ಹುಬ್ಬಳ್ಳಿ ನಗರದ ವೀರಾಪುರ ಓಣಿ ಗುಡಿಓಣಿ ನಿವಾಸಿಯಾದ ಅಂಜಲಿ ಅಂಬಿಗೇರ (20) ಎಂಬಾಕೆಯೇ ಸಾವಿಗೀಡಾದ ಯುವತಿಯಾಗಿದ್ದಾಳೆ. ಈಕೆಗೆ ಅದೇ ಏರಿಯಾದ ಗಿರೀಶ್ ಸಾವಂತ (21) ಎಂಬ ಯುವಕ ಚಾಕುವಿನಿಂದ ಚುಚ್ಚಿ ಕೊಲೆಮಾಡಿದ್ದಾನೆ. ಗಿರೀಶ್ ಸಾವಂತ ಎಂಬಾತ ಕಳೆದ ಹಲವಾರು ದಿನಗಳಿಂದ ಅಂಜಲಿಗೆ ಪ್ರೀತಿಸು ಎಂದು ಪೀಡಿಸುತ್ತಿದ್ದನಂತೆ, ಆದರೆ ಅಂಜಲಿ ಪ್ರೀತಿ ನಿರಾಕರಿಸಿದಕ್ಕೆ ಬುಧವಾರ ಬೆಳಂಬೆಳ್ಳಗ್ಗೆ ಗುಡಿ ಓಣಿಯಲ್ಲಿನ ಅಂಜಲಿ ನಿವಾಸಕ್ಕೆ ನುಗ್ಗಿದ್ದಾನೆ. ಮನೆಯ ಬಾಗಿಲು ಬಡಿದು ಏಕಾಏಕಿ ಅಂಜಲಿ ಹೊಟ್ಟೆಗೆ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ಕೃತ್ಯದಿಮದ ಸಮಾಜವೇ ತಲೆ ಬಾಗಿಸುವಂತೆ ಆಗಿದೆ. ಅಷ್ಟೆ ಅಲ್ಲದೆ ತಂದೆ, ತಾಯಿಯನ್ನು ಕಳೆದುಕೊಂಡಿದ್ದ ಅಂಜಲಿ ಅಜ್ಜಿಯ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಳು. ಅಂಜಲಿಗೆ ಇಬ್ಬರು ಸಹೋದರಿಯರು ಇದ್ದಿದ್ದು, ಅಂಜಲಿಯೇ ಕುಟುಂಬ ನಡೆಸುತ್ತಿದ್ದಳು. ಅವಳ ಹತ್ಯೆಯಿಂದ ಕುಟುಂಬ ಬೀದಿಗೆ ಬರಬೇಕಾದ ಪರಿಸ್ಥಿತಿ ನಿಮಾ೯ಣವಾಗಿದೆ. ಕೂಡಲೇ ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರಕಾರ ಎಚ್ಚೇತ್ತುಕೊಂಡು ಆರೋಪಿಯನ್ನು ಬಂಧನ ಮಾಡಿ, ಕಠಿಣ ಶಿಕ್ಷೆಗೆ ಒಳ ಪಡಿಸಬೇಕು. ಅಷ್ಟೇ ಅಲ್ಲದೆ ಹತ್ಯೆಯಾಗಿರುವ ಯುವತಿಯ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದರು..
Comments are closed.