ಸಿ.ಬಿ.ಎಸ್.ಇ ಮಂಡಳಿಯ ೧೦ ನೇ ತರಗತಿಯ ಫಲಿತಾಂಶ -ಶ್ರೀಶಿವಶಾಂತವೀರ ಪಬ್ಲಿಕ್ ಶಾಲೆ ಸಾಧನೆ
ಕೊಪ್ಪಳ- ಸಿಬಿಎಸ್‌ಇ ಮಂಡಳಿಯು ೧೩-೦೫-೨೦೨೪ ರಂದು ೧೦ ನೇ ತರಗತಿಯ ಫಲಿತಾಂಶವನ್ನು ಪ್ರಕಟಿಸಿದ್ದು ನಗರದ ಗವಿವಟ್ರಸ್ಟ ನ ಶ್ರೀಶಿವಶಾಂತವೀರ ಪಬ್ಲಿಕ್ ಶಾಲೆಯ ಪರೀಕ್ಷೆಗೆ ಹಾಜರಾದ ಒಟ್ಟು ೪೪ ವಿದ್ಯಾರ್ಥಿಗಳಲ್ಲಿ ೦೪ ಡಿಸ್ಟಿಂಕ್ಷನ್, ೨೭ ಪ್ರಥಮ, ೦೭ ದ್ವಿತೀಯ ಹಾಗೂ ೫ ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಕು. ಅನುಶ್ರೀ.ಎ.ಎನ್. ಪ್ರತಿಶತ ೯೪.೪% (೪೭೨/೫೦೦) ರಷ್ಟು ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ, ಕು. ಮಧು ಹಿರೇಮಠ ಪ್ರತಿಶತ ಶೇ.೯೧.೦೮ % (೪೫೯/೫೦೦) ರಷ್ಟು ಅಂಕಗಳನ್ನು ಪಡೆದು ದ್ವೀತಿಯ ಸ್ಥಾನ ಹಾಗೂ ಕು. ವರ್ಷಿಣಿ ನಾಲ್ವಾಡ್ ಶೇ. ೮೭.೦೬% (೪೩೮/೫೦೦) ರಷ್ಟು ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಆಡಳಿತ ಮಂಡಳಿಯ ಕಾರ್ಯದರ್ಶಿಗಳು, ಸರ್ವ ಸದಸ್ಯರು, ಹಾಗೂ ಸಕಲ ಸಿಬ್ಬಂದಿ ವರ್ಗ ಶಿಕ್ಷಕರು ಶುಭ ಕೋರಿದ್ದಾರೆ ಎಂದು ಪ್ರಾಚಾರ್ಯರಾದ ಪ್ರವೀಣ ಯರಗಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.