ಲೋಕಸಭಾ ಚುನಾವಣೆ: ವಿಧಾನಸಭಾ ಕ್ಷೇತ್ರವಾರು ವಿವರ- 13,24,898 ಮತದಾರರಿಂದ ಹಕ್ಕು ಚಲಾವಣೆ

Get real time updates directly on you device, subscribe now.

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಶೇ 70.99 ರಷ್ಟು ಮತದಾನ
ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಹಿನ್ನಲೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮೂರನೇ ಹಂತದಲ್ಲಿ ಮಂಗಳವಾರ (ಮೇ 7ರಂದು) ನಡೆದ ಮತದಾನದಲ್ಲಿ ಶೇ 70.99 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ನಲಿನ್ ಅತುಲ್ ಅವರು ಹೇಳಿದರು.

ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರಗಳು ಸೇರಿ ಒಟ್ಟು 2045 ಮತಗಟ್ಟೆಗಳ ಪೈಕಿ 9,19,499 ಪುರುಷ, 9,46,763 ಮಹಿಳೆಯರು ಹಾಗೂ ಇತರೆ 135 ಸೇರಿ ಒಟ್ಟು 18,66,397 ಮತದಾರರಿದ್ದು, ಇದರಲ್ಲಿ 6,69,583 ಪುರುಷ, 6,55,275 ಮಹಿಳೆಯರು ಹಾಗೂ ಇತರೆ 40 ಸೇರಿ 13,24,898 ಮತದಾರರು ಮತ ಚಲಾಯಿಸಿದ್ದಾರೆ.

ವಿಧಾನಸಭಾ ಕ್ಷೇತ್ರವಾರು ಮತದಾನ:
ಕೊಪ್ಪಳ ಜಿಲ್ಲೆಯ 60-ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 268 ಮತಗಟ್ಟೆ, 1,21,526 ಪುರುಷರು, 1,20,747 ಮಹಿಳೆಯರು, 10 ಇತರೆ ಸೇರಿ ಒಟ್ಟು 2,42,283 ಮತದಾರರಿದ್ದು, ಇದರಲ್ಲಿ 85,312 ಪುರುಷರು, 82,561 ಮಹಿಳೆಯರು, 2 ಇತರೆ ಒಳಗೊಂಡಂತೆ ಒಟ್ಟು 1,67,875 ಮತದಾರರು ಮತದಾನ ಮಾಡಿ ಶೇ 69.29 ರಷ್ಟು ಮತದಾನವಾಗಿದೆ.

61-ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 266 ಮತಗಟ್ಟೆ, 1,13,268 ಪುರುಷರು, 1,17,408 ಮಹಿಳೆಯರು, 12 ಇತರೆ ಸೇರಿ ಒಟ್ಟು 2,30,688 ಮತದಾರರಿದ್ದು, ಇದರಲ್ಲಿ 85,335 ಪುರುಷರು, 84,009 ಮಹಿಳೆಯರು, 4 ಇತರೆ ಒಳಗೊಂಡಂತೆ ಒಟ್ಟು 1,69,348 ಮತದಾರರು ಮತದಾನ ಮಾಡಿ ಶೇ 73.41 ರಷ್ಟು ಮತದಾನವಾಗಿದೆ.

62-ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ 235 ಮತಗಟ್ಟೆ, 1,02,986 ಪುರುಷರು, 1,06,250 ಮಹಿಳೆಯರು, 14 ಇತರೆ ಸೇರಿ ಒಟ್ಟು 2,09,250 ಮತದಾರರಿದ್ದು, ಇದರಲ್ಲಿ 79,998 ಪುರುಷರು, 78,074 ಮಹಿಳೆಯರು, 4 ಇತರೆ ಒಳಗೊಂಡಂತೆ ಒಟ್ಟು 1,58,076 ಮತದಾರರು ಮತದಾನ ಮಾಡಿ ಶೇ 75.54 ರಷ್ಟು ಮತದಾನವಾಗಿದೆ.

63-ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ 256 ಮತಗಟ್ಟೆಗಳಲ್ಲಿ 1,14,805 ಪುರುಷರು, 1,15,463 ಮಹಿಳೆಯರು, 6 ಇತರೆ ಸೇರಿ ಒಟ್ಟು 2,30,274 ಮತದಾರರಿದ್ದು, ಇದರಲ್ಲಿ 86,955 ಪುರುಷರು, 82,817 ಮಹಿಳೆಯರು, 3 ಇತರೆ ಒಳಗೊಂಡಂತೆ ಒಟ್ಟು 1,69,775 ಮತದಾರರು ಮತದಾನ ಮಾಡಿ ಶೇ 73.73 ರಷ್ಟು ಮತದಾನವಾಗಿದೆ.

64-ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ 292 ಮತಗಟ್ಟೆಗಳಲ್ಲಿ 1,30,831 ಪುರುಷರು, 1,34,617 ಮಹಿಳೆಯರು, 17 ಇತರೆ ಸೇರಿ ಒಟ್ಟು 2,65,465 ಮತದಾರರಿದ್ದು, ಇದರಲ್ಲಿ 1,00,006 ಪುರುಷರು, 96,367 ಮಹಿಳೆಯರು, 3 ಇತರೆ ಒಳಗೊಂಡಂತೆ ಒಟ್ಟು 1,96,376 ಮತದಾರರು ಮತದಾನ ಮಾಡಿ ಶೇ 73.97 ರಷ್ಟು ಮತದಾನವಾಗಿದೆ.

ರಾಯಚೂರು ಜಿಲ್ಲೆಯ 58-ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ 269 ಮತಗಟ್ಟೆಗಳು, 1,20,300 ಪುರುಷರು, 1,26,958 ಮಹಿಳೆಯರು, 24 ಇತರೆ ಸೇರಿ ಒಟ್ಟು 2,47,282 ಮತದಾರರಿದ್ದು, ಇದರಲ್ಲಿ 81,783 ಪುರುಷರು, 81,714 ಮಹಿಳೆಯರು, 4 ಇತರೆ ಒಳಗೊಂಡಂತೆ ಒಟ್ಟು 1,63,501 ಮತದಾರರು ಮತದಾನ ಮಾಡಿ ಶೇ 66.12 ರಷ್ಟು ಮತದಾನವಾಗಿದೆ.

59-ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ 231 ಮತಗಟ್ಟೆ, 1,05,516 ಪುರುಷ, 1,10,302 ಮಹಿಳೆಯರು, 8 ಇತರೆ ಸೇರಿ ಒಟ್ಟು 2,15,826 ಮತದಾರರಿದ್ದು, ಇದರಲ್ಲಿ 69,930 ಪುರುಷರು, 69,615 ಮಹಿಳೆಯರು, 2 ಇತರೆ ಒಳಗೊಂಡಂತೆ ಒಟ್ಟು 1,39,547 ಮತದಾರರು ಮತದಾನ ಮಾಡಿ ಶೇ 64.66 ರಷ್ಟು ಮತದಾನವಾಗಿದೆ.

ಬಳ್ಳಾರಿ ಜಿಲ್ಲೆಯ 92-ಸಿರಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿ 228 ಮತಗಟ್ಟೆಗಳಲ್ಲಿ 1,10,267 ಪುರುಷರು, 1,15,018 ಮಹಿಳೆಯರು ಹಾಗೂ 44 ಇತರೆ ಸೇರಿ ಒಟ್ಟು 2,25,329 ಮತದಾರರಿದ್ದಾರೆ. ಈ ಪೈಕಿ 80,264 ಪುರುಷರು, 80,118 ಮಹಿಳೆಯರು, 18 ಇತರೆ ಒಳಗೊಂಡಂತೆ ಒಟ್ಟು 1,60,400 ಮತದಾರರು ಮತದಾನ ಮಾಡಿ ಶೇ 71.18 ರಷ್ಟು ಮತದಾನವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Get real time updates directly on you device, subscribe now.

Comments are closed.

error: Content is protected !!