ಕುಷ್ಟಗಿ ವಿಧಾನ ಸಭಾ ಕ್ಷೇತ್ರದಲ್ಲಿ ಶೇ 5.65 ರಷ್ಟು ವೋಟಿಂಗ್ ಹೆಚ್ಚಳ
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಶೇ 70.94 ರಷ್ಟು ಮತದಾನ: ನಲಿನ್ ಅತುಲ್
ಕಳೆದ ಬಾರಿಗಿಂತ ಶೇ 2.53ರಷ್ಟು ಮತದಾನ ಹೆಚ್ಚಳ
ಕೊಪ್ಪಳ,: ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಹಿನ್ನಲೆಯಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಮೂರನೇ ಹಂತದಲ್ಲಿ ಮಂಗಳವಾರ (ಮೇ 7ರಂದು) ನಡೆದ ಮತದಾನದಲ್ಲಿ ಶೇ 70.94 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ನಲಿನ್ ಅತುಲ್ ಅವರು ಹೇಳಿದರು.
ವಿಧಾನಸಭಾ ಕ್ಷೇತ್ರವಾರು ಮತದಾನ:
ಕೊಪ್ಪಳ ಜಿಲ್ಲೆಯ 60-ಕುಷ್ಟಗಿ ವಿಧಾನಸಭಾ ಕ್ಷೇತ್ರದ 268 ಮತಗಟ್ಟೆ ಗಳಲ್ಲಿ ಶೇ 69.24 ರಷ್ಟು ಮತದಾನವಾಗಿದೆ. ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಶೇ 63.59 ರಷ್ಟು ವೋಟಿಂಗ್ ಆಗಿತ್ತು, ಈ ಬಾರಿ ಶೇ 69.24 ರಷ್ಟು ಮತದಾನವಾಗಿದ್ದು, ಮತದಾನ ಪ್ರಮಾಣವು ದಾಖಲೆಯ ಶೇ 5.65 ರಷ್ಟು ಹೆಚ್ಚಾಗಿದೆ.
61-ಕನಕಗಿರಿ ವಿಧಾನಸಭಾ ಕ್ಷೇತ್ರದ 266 ಮತಗಟ್ಟೆಗಳಲ್ಲಿ ಶೇ 73.36 ರಷ್ಟು ಮತದಾನವಾಗಿದೆ
62-ಗಂಗಾವತಿ ವಿಧಾನಸಭಾ ಕ್ಷೇತ್ರದ 235 ಮತಗಟ್ಟೆ ಗಳಲ್ಲಿ ಶೇ 75.34 ರಷ್ಟು ಮತದಾನವಾಗಿದೆ.
63-ಯಲಬುರ್ಗಾ ವಿಧಾನಸಭಾ ಕ್ಷೇತ್ರದ 256 ಮತಗಟ್ಟೆಗಳಲ್ಲಿ ಶೇ 73.72 ರಷ್ಟು ಮತದಾನವಾಗಿದೆ.
64-ಕೊಪ್ಪಳ ವಿಧಾನಸಭಾ ಕ್ಷೇತ್ರದ 292 ಮತಗಟ್ಟೆಗಳಲ್ಲಿ ಶೇ 73.94 ರಷ್ಟು ಮತದಾನವಾಗಿದೆ.
ರಾಯಚೂರು ಜಿಲ್ಲೆಯ 58-ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ 269 ಮತಗಟ್ಟೆಗಳಲ್ಲಿ ಶೇ 66.11 ರಷ್ಟು ಮತದಾನವಾಗಿದೆ.
59-ಮಸ್ಕಿ ವಿಧಾನಸಭಾ ಕ್ಷೇತ್ರದ 231 ಮತಗಟ್ಟೆ ಗಳಲ್ಲಿ ಶೇ 64.64 ರಷ್ಟು ಮತದಾನವಾಗಿದೆ.
ಬಳ್ಳಾರಿ ಜಿಲ್ಲೆಯ 92-ಸಿರಗುಪ್ಪ ವಿಧಾನಸಭಾ ಕ್ಷೇತ್ರದ 228 ಮತಗಟ್ಟೆಗಳಲ್ಲಿ ಶೇ 71.18 ರಷ್ಟು ಪ್ರಗತಿಯಾಗಿದೆ.
ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಕ್ಷೇತ್ರಗಳು ಸೇರಿ ಒಟ್ಟು 2045 ಮತಗಟ್ಟೆಗಳಲ್ಲಿ ಶೇ 70.94 ರಷ್ಟು ಮತದಾನವಾಗಿದೆ.
Comments are closed.