ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ

Get real time updates directly on you device, subscribe now.

ಕೊಪ್ಪಳ : ಜೆಡಿಎಸ್ ಪಕ್ಷದ ವಕ್ತಾರ ಕರಾಟೆ ಮೌನೇಶ್, ವಕೀಲರಾದ ವೆಂಕಟೇಶ್ ಬೆಲ್ಲದ್, ಜೆಡಿಎಸ್ ಮುಖಂಡ ಮಂಜುನಾಥ್ ಹುರಕಡ್ಲಿ ಸೇರಿ ಅನೇಕರು ಜೆಡಿಎಸ್ ಪಕ್ಷವನ್ನು ತೊರೆದು ಮಾಜಿ ಸಂಸದ ಸಂಗಣ್ಣ ಕರಡಿ ನೇತೃತ್ವದಲ್ಲಿ ಶನಿವಾರ ನಗರದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.

ನಂತರ ಕಾಂಗ್ರೆಸ್ ಸೇರ್ಪಡೆಗೊಂಡ ಮೌನೇಶ್ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ನುಡಿದಂತೆ ನಡೆದಿದ್ದಾರೆ, ರಾಜ್ಯದ ಜನತೆಗೆ ಜನಪರ ಆಡಳಿತ ನೀಡುತ್ತಿರುವುದು ಸಂತಸ ತಂದಿದೆ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವನ್ನು ಮೆಚ್ಚಿ ಪಕ್ಷ ಸೇರ್ಪಡೆಗೊಂಡಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕ ಹಾಗೂ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಕೆ.ಎಂ.ಸೈಯದ್, ಮಹಿಳಾ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ಕಿಶೋರಿ ಬೂದನೂರು, ಎಸ್. ಟಿ. ಘಟಕ ತಾಲೂಕು ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಪಕ್ಷದ ಮುಖಂಡರಾದ ರಾಜಶೇಖರಗೌಡ  ಆಡೂರು, ಶಿವರೆಡ್ಡಿ ಭೂಮಕ್ಕನವರ್, ಯುವ ಮುಖಂಡ ಮಂಜುನಾಥ್ ಗಡ್ಡದ್, ವಿಜಯ್ ಕುಮಾರ್ ಕವಲೂರು, ಫಕ್ರುಸಾಬ್ ನದಾಫ್, ಶಿವು ಕೋಣಂಗಿ, ಮುತ್ತುಸ್ವಾಮಿ ನರೇಗಲ್ ಮಠ, ದತ್ತಣ್ಣ ವೈದ್ಯ, ಅಮರ್ ಕಲಾಲ್, ಅಜ್ಜಪ್ಪಸ್ವಾಮಿ ಚೆನ್ನವಡೆಯರಮಠ ಅನೇಕರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!