ಕಾರ್ಮಿಕ ವರ್ಗದ ಪಕ್ಷವಾದ ಎಸ್ ಯು ಸಿ ಐ (ಕಮ್ಯುನಿಸ್ಟ್ )ಪಕ್ಷವನ್ನು ಬಲಪಡಿಸಿ -ಶರಣು ಗಡ್ಡಿ
ಇಲ್ಲಿಯವರೆಗೂ ನಮ್ಮನ್ನಾಳಿದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಬಡ ಜನರಿಗೆ ದ್ರೋಹ ಬಗೆದು ಶ್ರೀಮಂತರ ಉದ್ದಾರವನ್ನೇ ಮಾಡಿದ್ದಾರೆ. ಹತ್ತಿರದಲ್ಲೇ ಡ್ಯಾಮ್ ಇದ್ದರು ಶುದ್ಧ ಕುಡಿಯುವ ನೀರು ಹಾಗೂ ಶಾಶ್ವತ ನೀರಾವರಿ ಯೋಜನೆ ಮಾಡುವಲ್ಲಿ ವಿಫಲರಾಗಿದ್ದಾರೆ. ಆದರೆ ತುಂಗಭದ್ರ ಡ್ಯಾಮ್ ನೀರನ್ನ ರೈತರಿಗೆ ನೀಡದ ಸರಕಾರಗಳು ಕಾರ್ಖಾನೆಗಳಿಗೆ ಹಗಲು ರಾತ್ರಿ ಹರಿಸುತ್ತಿವೆ ಎಂದು ಎಸ್ ಯು ಸಿ ಐ (ಕಮ್ಯುನಿಸ್ಟ್ ) ಪಕ್ಷದ ಅಭ್ಯರ್ಥಿಯಾದ ಶರಣಪ್ಪ ಅವರು ಹುಲಿಗಿ ಗ್ರಾಮದಲ್ಲಿ ಮತಯಾಚನೆ ಮಾಡಿ, ಆಕ್ರೋಶ ವ್ಯಕ್ತ ಪಡಿಸಿದರು..
ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ ಬಿ.ಜೆ.ಪಿ ನೇತೃತ್ವದ ಮೋದಿ ಸರ್ಕಾರ ಹೊಸ ಉದ್ಯೋಗ ಸೃಷ್ಟಿ ಮಾಡುವ ಮಾತು ದೂರ ಹೋಯಿತು, ರೈಲ್ವೆ ಇಲಾಖೆಯಲ್ಲಿ 90,000 ಉದ್ಯೋಗಗಳನ್ನು ಸರ್ವನಾಶ ಮಾಡಿದರೆ ಬಿಎಸ್ಎನ್ಎಲ್ ನಲ್ಲಿ 54000 ಉದ್ಯೋಗಿಗಳನ್ನು ವಿ ಆರ್ ಎಸ್ ಕೊಟ್ಟು ಕಳಿಸಿದ್ದಾರೆ. ಇದು ಮೋದಿ ಸರ್ಕಾರ ತಂದ ಅಚ್ಚೆದಿನ ಆಗಿದೆ ಎಂದು ಸರ್ಕಾರವನ್ನು ಕಟುವಾಗಿ ಟೀಕಿಸಿದರು.
ಇಂದು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಚುನಾವಣಾ ಖರ್ಚಿಗೆ ದೊಡ್ಡ ದೊಡ್ಡ ಕಾರ್ಪೊರೇಟ್ ಮನೆತನಗಳಿಂದ ಚುನಾವಣಾ ಬಾಂಡ್ ಮೂಲಕ ಸಂಗ್ರಹ ಮಾಡಿ ಜನಗಳಿಗೆ ಹಂಚುವುದನ್ನು ನೋಡುತ್ತಿದ್ದೇವೆ ಇದರಿಂದಲೇ ಗೊತ್ತಾಗುತ್ತದೆ ನಮಗೆ ಇವು ಬಂಡವಾಳಶಾಹಿ ಪಕ್ಷಗಳೆಂದು. ಈ ಕಾರಣದಿಂದಾಗಿ ಈ ಪಕ್ಷಗಳೆಲ್ಲವೂ ಶ್ರೀಮಂತರಿಂದ ಹುಟ್ಟಿಸಲ್ಪಟ್ಟ ಪಕ್ಷಗಳಾಗಿವೆ. ಅವುಗಳು ಶ್ರೀಮಂತರ ಹಿತಾಸಕ್ತಿಯನ್ನೇ ಕಾಯುತ್ತವೆ. ಎಷ್ಟೇ ಚುನಾವಣೆಗಳ ನಡೆದು ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಹ ದುಡಿಯುವ ಜನಗಳ ಪರ ನೀತಿಯನ್ನು ಈ ಪಕ್ಷಗಳು ಅನುಷ್ಠಾನಕ್ಕೆ ತರುವುದು ಸಾಧ್ಯವಿಲ್ಲ.
ಆದ್ದರಿಂದಲೇ ದುಡಿಯುವ ಜನಗಳು ಕ್ರಾಂತಿಕಾರಿ ಪಕ್ಷವಾದ, ಕಾರ್ಮಿಕರ ಹಿತವನ್ನು ತನ್ನ ಗುರಿಯಾಗಿಸಿಕೊಂಡಿರುವ ಎಸ್ ಯು ಸಿ ಐ (ಕಮ್ಯುನಿಸ್ಟ್) ಪಕ್ಷವನ್ನು ಬೆಂಬಲಿಸುವ ಮೂಲಕ ದುಡಿಯುವ ಜನರ ಧ್ವನಿಯನ್ನು ಗಟ್ಟಿಗೊಳಿಸಬೇಕೆಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಪಕ್ಷದ ನಾಯಕರಾದ ಕೃಷ್ಣ ಬೆಂಗಳೂರು, ಸದಸ್ಯರಾದ, ಶರಣು ಪಾಟೀಲ್, ಗಂಗರಾಜ, ಕಿರಣ್, ಮಂಜುಳಾ, ಕಟ್ಟಡ ಕಾರ್ಮಿಕರ ಮುಖಂಡರಾದ ಕುಮಾರ್ ಹುಲಿಗಿ , ನಾಗರಾಜ್ ಹುಲಿಗಿ, ಶರಣಪ್ಪ ಗೋರ್ಪಡೆ, ದೇವರಾಜ್ ಗಂಗಾವತಿ ಮುಂತಾದವರು ಇದ್ದರು.
Comments are closed.