ಅನ್ಸಾರಿ ಆದೇಶ ಪಾಲಿಸಿ: ಮುಸ್ಲಿಂ ಸಮಾಜ ಕಾಂಗ್ರೆಸ್ ಬೆಂಬಲಿಸಿ -ಶೇಖ್ ನಬಿ

Get real time updates directly on you device, subscribe now.


ಅಬ್ದುಲ್ ನಯೀಮ್ ಮಾತಿಗೆ ಕಿವಿಗೊಡಬೇಡಿ : ಶೇಖರ್ ನಬೀ
ಗಂಗಾವತಿ: ಕೊಪ್ಪಳ ಲೋಕಸಭಾ ವ್ಯಾಪ್ತಿಗೆ ಸಂಬಂಧಿಸಿದಂತೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಸಮಾಜದ ನಾಯಕರಾಗಿದ್ದು ಅವರ ತೀರ್ಮಾನವೇ ಅಂತಿಮವಾಗಿದ್ದು ಅನ್ಸಾರಿಯವರೇ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ವೇದಿಕೆಗಳಲ್ಲಿ ಮನವಿ ಮಾಡಿದ್ದಾರೆ, ಆದ್ದರಿಂದ ಮುಸ್ಲಿಂ ಸಮಾಜ ಬಾಂಧವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಅಬ್ದುಲ್ ನಯಿಮ್ ಮಾತಿಗೆ ಕಿವಿಗೊಡಬೇಡಿ ಎಂದು ನಗರಸಭೆ ಮಾಜಿ ಸದಸ್ಯ ಹಾಗು ಮುಸ್ಲಿಂ ಸಮಾಜದ ಪ್ರಮುಖ ಶೇಖ್‌ನಬೀ ಹೇಳಿದರು. ಅವರು ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ಮುಸ್ಲಿಂಮರು ತಟಸ್ಥರಾಗಿ ಎಂದು ಹೇಳಿಕೆ ನೀಡಿದ್ದ ನಯಿಮ್ ಅವರಿಗೆ ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಜರುಗಿದ ಪತ್ರಿಕಾಗೋಷ್ಟಿಯಲ್ಲಿ ಶೇಖ್ ನಬಿ ತಿರುಗೇಟು ನೀಡಿದರು.
ಕುಷ್ಟಗಿಯಲ್ಲಿ ನಯಿಮ್ ಮತದಾನ ಮಾಡದೆ ಮುಸ್ಲಿಂ ಸಮಾಜ ತಟಸ್ಥವಾಗಿರಬೇಕು ಎಂದು ಹೇಳಿಕೆ ನೀಡಿರುವುದು ಖಂಡನೀಯ, ಸ್ವಯಂ ಘೋಷಿತ ಸಂಘಟಕರಾಗಿರುವ ಇವರು ಚುನಾವಣೆ ಸಂದರ್ಭ ದಿಢೀರ್ ಪ್ರತ್ಯಕ್ಷರಾಗಿದ್ದಾರೆ. ಸಮುದಾಯಕ್ಕೆ ಯಾವುದೇ ಕೊಡುಗೆ ನೀಡದೆ. ಗಮನಾರ್ಹ ಕಾರ್ಯಕ್ರಮ ಮಾಡದೆ ಗೊತ್ತು ಗುರಿ ಇಲ್ಲದ ವ್ಯಕ್ತಿ, ತಮ್ಮಷ್ಟಕ್ಕೆ ತಾವೇ ಹಿತ ರಕ್ಷಕರು ಎಂದು ಹೇಳಿಕೊಳ್ಳುತ್ತಿರುವುದು ಹಾಸ್ಯಸ್ಪದ, ಸಮುದಾಯವನ್ನು ತಮ್ಮ ಹೆಗಲಿಗೆ ಹಾಕಿಕೊಂಡು ನಡೆಯುತ್ತಿರುವ ಅನ್ಸಾರಿಯವರ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಕಳೆದು ಹೋದ ಘಟನೆಗಳ ಕುರಿತು ನಾವು ಚಿಂತಿಸದೆ ಮುಂದೆ ಸಮದಾಯಕ್ಕೆ ಅಧಿಕಾರ ಕೊಡಿಸಲು ಗಮನ ಕೇಂದ್ರೀಕರಿಸಬೇಕಿದೆ. ಕಾಂಗ್ರೆಸ್ ಒಂದೇ ಮುಸ್ಲಿಂರ ರಕ್ಷಣೆಗೆ ಸೂಕ್ತ ಪಕ್ಷವಾಗಿದ್ದು, ಇಂಥ ಕಿಡಿಗೇಡಿಗಳು ಆಡುವ ಮಾತುಗಳಿಗೆ ಗಮನ ನೀಡದೆ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಬಹುಮತದಿಂದ ಆಯ್ಕೆ ಮಾಡುವ ಮೂಲಕ ರಾಜಶೇಖರ್ ಹಿಟ್ನಾಳ್ ಅವರನ್ನು ಸಂಸದರನ್ನಾಗಿ ಮಾಡಬೇಕಿದೆ ಇದಕ್ಕಾಗಿ ಸಮುದಾಯ ಒಗ್ಗಟ್ಟಿನಿಂದ ಮತ ಚಲಾಯಿಸಬೇಕು ಎಂದು ಕೋರಿದರು.
ಸಂಸದ ಕರಡಿ ಸಂಗಣ್ಣ ಅವರ ಆಗಮನದಿಂದ ಪಕ್ಷಕ್ಕೆ ಆನೆ ಬಲ ಬಂದಿದೆ, ಕಾಂಗ್ರೆಸ್ ಪಕ್ಷ ಜಯಭೇರಿ ಭಾರಿಸುವುದು ಖಚಿತ ಎಂದು ಹಲವು ಸಮೀಕ್ಷೆಗಳು ಹೇಳುತ್ತಿದ್ದು ಇದರಿಂದಾಗಿ ಕೆಲವರು ಮಾಜಿ ಸಚಿವ ಅನ್ಸಾರಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಂಧವ್ಯ ಕೆಡಿಸುವ ಹುನ್ನಾರದಿಂದ ಇಂಥ ಹೇಳಿಕೆ ಕೊಡಿಸಲಾಗುತ್ತಿದೆ. ಸಮುದಾಯದ ದಿಕ್ಕು ತಪ್ಪಿಸುವ ಕೆಲಸ ಮಾಡುವವರಿಗೆ ಬೆಲೆ ಕೊಡಬೇಡಿ, ದೇಶದ ಹಿತ ದೃಷ್ಟಿಯಿಂದ, ಸಮಾಜದ ಒಳಿತಿಗಾಗಿ ಮೇ ಏಳ ರಂದು ನೆಡೆಯುವ ಚುನಾವಣೆಯ ಮತದಾದನಲ್ಲಿ ಸಕ್ರೀಯವಾಗಿ ಭಾಗವಹಿಸಿ ಒಟ್ಟಾಗಿ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯರಾದ ಇಬ್ರಾಹಿಂ, ಕಾಂಗ್ರೆಸ್ ಯುವ ಪ್ರಮುಖರಾದ ಅಯ್ಯುಬ್ ಸಗರಿ, ಮೆಹಬೂಬ್ ಪಾಶಾ ಹಾಗು ಎಸ್.ಎ.ತಾರೀಖ್ ಪಟೇಲ್ ಇದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: