ಕುರಿ ಮತ್ತು ದನ ಸಾಕಾಣಿಕೆದಾರರ ಹಿತವನ್ನು ಕಾಪಾಡಲು ವೈಜ್ಞಾನಿಕ ನೀತಿಯ ಅವಶ್ಯಕತೆ ಇದೆ – ಶರಣು ಗಡ್ಡಿ

Get real time updates directly on you device, subscribe now.

   ಕೊಪ್ಪಳದ  ಕುಕನಪ್ಪಳ್ಳಿಯಲ್ಲಿ ಕುರಿ ಸಂತೆಯಲ್ಲಿ  ಎಸ್ ಯು ಸಿ ಐ (ಕಮ್ಯುನಿಸ್ಟ್ ) ಪಕ್ಷದ ಅಭ್ಯರ್ಥಿ ಶರಣಪ್ಪ ನರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು. ಕುರಿ ಮತ್ತು ದನ ಸಾಕಾಣಿಕೆ ಮಾಡುತ್ತಾ ತಮ್ಮ ಜೀವನ ಕಟ್ಟಿಕೊಂಡ ಕುಟುಂಬಗಳು ನಮ್ಮ ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಅವರಿಗೆ ಅವರದೇ ಆದ ಸಮಸ್ಯೆಗಳು ಇವೆ. ಈ ಸಮಸ್ಯೆಗಳ ಬಗ್ಗೆ ಇಂದು ಯಾವುದೇ ಪಕ್ಷಗಳು ಮಾತಾಡುತ್ತಿಲ್ಲ.
ಕುರಿ ಮತ್ತು ದನಗಳು ಸಾಕಾಣಿಕೆ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗದಿಂದ ಅಥವಾ ಪ್ರಕೃತಿ ವಿಕೋಪದಿಂದ ಸಾವನಪ್ಪಿದರೆ, ಅವುಗಳಿಗೆ ಪರಿಹಾರ ನೀಡುತ್ತಿದ್ದದ್ದನ್ನು ಸರಕಾರಗಳು ಇಂದು ನಿಲ್ಲಿಸಿವೆ. ಜಾನವಾರುಗಳ ಮೇಲೆ ಬ್ಯಾಂಕುಗಳಲ್ಲಿ ಸಾಲವನ್ನು ನೀಡುತ್ತಿಲ್ಲ. ಪಶು ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಔಷಧಿ ವಿತರಣೆಯಲ್ಲಿನ ಭ್ರಷ್ಟಾಚಾರ ನಿಂತಿಲ್ಲ ಮತ್ತು ಸಮರ್ಪಕವಾಗಿ ಔಷಧಿಗಳು ಸಿಗುತ್ತಿಲ್ಲ, ಪಶು ವೈದ್ಯರ ಕೊರೆತೆ ಇದೆ ಎಂದು ದೂರಿದರು.
 ಬರಗಾಲ ಬಂದು ನಾಲ್ಕು ತಿಂಗಳು ಕಳೆದರೂ ಕೂಡ ಯಾವುದೇ ಹೋಬಳಿಯಲ್ಲಿ ಗೋಶಾಲೆಗಳನ್ನು ತೆರೆದಿಲ್ಲ, ಕೇವಲ ವೋಟಿಗಾಗಿ ರೈತರ ಬಗ್ಗೆ ಮಾತನಾಡುವ ಕಾಂಗ್ರೆಸ್ ಮತ್ತು ಬಿ. ಜೆ. ಪಿ ಪಕ್ಷಗಳು ನಿರಂತರವಾಗಿ ರೈತ ವಿರೋಧಿ ಕಾನೂನುಗಳನ್ನೇ ಜಾರಿ ಮಾಡಿದ್ದಾರೆ ಎಂದರು..
 ಇಂತಹ ಸಮಸ್ಯೆಗಳ ವಿರುದ್ಧ  ಸಂಘಟಿತ ಹೋರಾಟ ಒಂದೇ ಪರ್ಯಾಯ. ಈ ಹಿಂದೆ ನಾವು ಕುರಿ ಮತ್ತು ದನ ಸಾಕಾಣಿಕೆಕಾರರ ಸಂಘಟನೆಯನ್ನು  ಕೊಪ್ಪಳ ಜಿಲ್ಲೆಯಲ್ಲಿ ಸಂಘಟಿಸಿದ್ದೆವು,  ಆ ಹೋರಾಟದ ಫಲವಾಗಿ ಅಲ್ಪಸಲ್ಪ ಸೌಲಭ್ಯಗಳಾದರೂ ಸಿಗುತ್ತಿವೆ.  ಮುಂದಿನ ದಿನಗಳಲ್ಲಿ ನಾವೆಲ್ಲರೂ ಸಂಘಟಿತರಾದರೆ ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದರು. ಎಸ್ ಯು ಸಿ ಐ (ಕಮ್ಯುನಿಸ್ಟ್ ) ಇಂಥ ಹೋರಾಟಗಳನ್ನು ಮುನ್ನಡೆಸುತ್ತದೆ, ಚುನಾವಣೆಯು ಸಹ ನಮಗೆ ಹೋರಾಟದ ಭಾಗ ಎಂದರು.
ಈ ಈ ಸಂದರ್ಭದಲ್ಲಿ ಪಕ್ಷದ ನಾಯಕರಾದ ಕೃಷ್ಣ ಬೆಂಗಳೂರು, ಸದಸ್ಯರಾದ ಶರಣು ಪಾಟೀಲ್ , ಕಿರಣ್ ಬೆಂಗಳೂರು,ಗಂಗರಾಜ ಅಳ್ಳಳ್ಳಿ, ಶಾರದಾ ಗಡ್ಡಿ ಮತ್ತಿತರರು ಇದ್ದರು

Get real time updates directly on you device, subscribe now.

Comments are closed.

error: Content is protected !!
%d bloggers like this: