ಗ್ಯಾರಂಟಿ ಒಂದೇ ಅಲ್ಲ ಕಾಂಗ್ರೆಸ್ ಗೆಲುವಿಗೆ ಸಾಕಷ್ಟು ಕಾರಣಗಳಿವೆ : ಜ್ಯೋತಿ

Get real time updates directly on you device, subscribe now.

ಕೊಪ್ಪಳ : ಇಲ್ಲಿನ ನಗರಸಭೆ ೯ ನೇ ವಾರ್ಡು ಮತ್ತು ಭಾಗ್ಯನಗರದ ವಾರ್ಡ ನಂಬರ್ ೨ ರಲ್ಲಿ ಪ್ರಚಾರ ನಡೆಸಿದ ಜಿಲ್ಲಾ ಕಾಂಗ್ರೆಸ್ ಮುಖಂಡೆ ಮತ್ತು ಗ್ಯಾರಂಟಿ ಪ್ರಾಧಿಕಾರದ ಸದಸ್ಯೆ ಜ್ಯೋತಿ ಎಂ. ಗೊಂಡಬಾಳ ಅವರು ಗ್ಯಾರಂಟಿ ಒಂದೇ ಅಲ್ಲ ಕಾಂಗ್ರೆಸ್ ಗೆಲುವಿಗೆ ಸಾಕಷ್ಟು ಶಕ್ತಿ ಇವೆ ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಅಭ್ಯರ್ಥಿ ಕೆ. ರಾಜಶೇಖರ್ ಹಿಟ್ನಾಳ ಅವರು ಎರಡು ಬಾರಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾಗಿ ಯಾವುದೇ ಲೋಪವಿಲ್ಲದ ಆಡಳಿತ ನೀಡಿದ ಅನುಭವವಿದೆ, ಜನರೊಂದಿಗೆ ಬೆರೆಯುವ ಮನಸ್ಸಿದೆ, ಅಣ್ಣ ಶಾಸಕರಾಗಿದ್ದಾರೆ, ಕುಟುಂಬಕ್ಕೆ ತೀರಾ ಆಪ್ತರಾಗಿರುವ ಸಿದ್ದರಾಮಯ್ಯ ಅವರಿದ್ದಾರೆ, ಆದ್ದರಿಂದ ಕೊಪ್ಪಳ ಲೋಕಸಭೆ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಸ್ಲ್ಲಿ ಆರು ಜನ ಶಾಸಕರು ಕಾಂಗ್ರೆಸ್‌ನವರಾಗಿದ್ದು ಉಳಿದ ಎರಡು ಕಡೆಗೂ ಕಾಂಗ್ರೆಸ್ ಬಲವಿದೆ ಒಟ್ಟಾರೆಯಾಗಿ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲ್ಲುವ ಎಲ್ಲಾ ಸಾಧ್ಯತೆಗಳಿವೆ ಎಂದು ಹೇಳಿದರು.
ಗ್ಯಾರಂಟಿ ಒಂದೇ ಕಾಂಗ್ರೆಸ್ ಗೆಲುವಿಗೆ ಕಾರಣ ಎನ್ನುವ ರೀತಿಯಲ್ಲಿ ಜನರಲ್ಲಿ ತಪ್ಪು ಭಾವನೆ ಮೂಡುವಂತೆ ಮಾಡುತ್ತಿದ್ದಾರೆ, ಬಿಜೆಪಿ ಅವರು ಟಿವಿಗಳಲ್ಲಿ ಸಹ ನಾಚಿಕೆ ಇಲ್ಲದೇ ಸುಳ್ಳು ಜಾಹೀರಾತುಗಳನ್ನು ಪ್ರಕಟಿಸಿ ಜನರ ದಾರಿ ತಪ್ಪಿಸುತ್ತಿದ್ದು ಚುನಾವಣೆ ಆಯೋಗ ಸುಮ್ಮನೇ ಕುಳಿತಿರುವದು ಸರಿಯಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಯೇ ಸಮಸ್ಯೆಯ ಸುಳಿಯಲ್ಲಿದೆ.
ಬಿಜೆಪಿಯ ಪ್ರಧಾನಿ, ಶಾ ಸೇರಿ ಎಲ್ಲರೂ ಸುಳ್ಳು ಹೇಳುವದು ಅದನ್ನೇ ಸತ್ಯ ಮಾಡಲು ಹೊರಡುವದು ತೀರಾ ಅಸಯ್ಯತರಿಸಿದೆ, ಪ್ರಜ್ವಲ್ ರೇವಣ್ಣ ಕೇಸ್ ಕಾಂಗ್ರೆಸ್ ರಾಜಕೀಯಕ್ಕೆ ಬಳಸಿದೆ ಎನ್ನುತ್ತಿರುವ ಬಿಜೆಪಿಗರು ನೇಹಾ ಕೇಸಲ್ಲಿ ಹೇಗೆ ನಡೆದುಕೊಂಡರು ಎನ್ನುವದನ್ನು ನೆನಪಿಸಿಕೊಳ್ಳಲಿ ಎಂದಿದ್ದಾರೆ. ಸೋಲುವ ಭಯದಲ್ಲಿ ಶಾಸಕ ಜನಾರ್ಧನ ರಡ್ಡಿ ಕಾಂಗ್ರೆಸ್ ಮಂತ್ರಿ, ಶಾಸಕರ ಬಗ್ಗೆ ಅಪಪ್ರಚಾರ ಮಾಡುತ್ತ್ತಿರುವದು ಬಾಲಿಶತನ ಎಂದಿದ್ದಾರೆ.
ನುಡಿದಂತೆ ನಡೆಯುವ ಕಾಂಗ್ರೆಸ್ ಹಾಗೂ ಮೋಸ ಮಾಡಿ ಸುಳ್ಳು ಹೇಳುವ ಬಿಜೆಪಿಯಲ್ಲಿ ಯಾರು ಬೇಕು ಎಂಬುದನ್ನು ನಿರ್ಧರಿಸಿ ಎಂದು ಮನೆ ಮನೆಗೆ ತೆರಳಿ ಜನರಿಗೆ ಮನವರಿಕೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ.ಪಂ. ಸದಸ್ಯ ಹೊನ್ನೂರಸಾಬ್ ಭೈರಾಪೂರ, ಕಾಂಗ್ರೆಸ್ ಮುಖಂಡರುಗಳಾದ ಜಾಫರ್ ತಟ್ಟಿ, ಶ್ರೀನಿವಾಸ ಪಂಡಿತ, ಅಂಬಿಕಾ ನಾಗರಾಳ, ಸುಮಂಗಲಾ ನಾಯಕ್, ರೂಪಾ ಬಂಗಾರಿ, ಶ್ರೀದೇವಿ ಶೆಟ್ಟರ್, ಸುಮಿತ್ರಾ ಕಲಾಲ್, ಮಲ್ಲಪ್ಪ ಮುರಡಿ, ಪ್ರಕಾಶ ಗುದಗಿ, ವಿಶ್ವನಾಥ ಅರಕೇರಿ, ವೀರಣ್ಣ ಟಾಂಗ, ಮೌಲಾಹುಸೇನ, ರಬ್ಬಾನಿ ಹುಳ್ಳಿ, ವಿಜಯಕುಮಾರ ಗುದಗಿ, ಜಾಫರ್, ಮಂಜುನಾಥ ಜಿ. ಗೊಂಡಬಾಳ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: