ವಾತಾವರಣ ನಮ್ಮ ಪರವಾಗಿದೆ: ಸಿವಿಸಿ
ಕೊಪ್ಪಳ ತಾಲೂಕಿನ ಹಂದ್ರಾಳ, ಕವಲೂರ, ಅಳವಂಡಿ, ಬೆಟಗೇರಿ, ಹಾಲವರ್ತಿ ಗ್ರಾಮಗಳಲ್ಲಿ ಕೊಪ್ಪಳ ಲೋಕಸಭಾ ಚುನಾವಣೆಯ ಪ್ರಚಾರಾರ್ಥವಾಗಿ ನಿಕಟ ಪೂರ್ವ ಕೇಂದ್ರ ಸಚಿವರಾದ ನಾರಾಯಣಸ್ವಾಮಿ ಹಾಗೂ ಜೆಡಿಎಸ್ ರಾಜ್ಯ ಕೋರ್ಡಿ ಕಮಿಟಿ ಸದಸ್ಯರಾದ ಸಿ.ವಿ ಚಂದ್ರಶೇಖರ ಹಾಗೂ ಜೆಡಿಎಸ್- ಬಿಜೆಪಿ ಪ್ರಮುಖರು ಭಾಗಿಯಾದರು
ಈ ಸಂದರ್ಭದಲ್ಲಿ ನವ ಭಾರತದ ನಿರ್ಮಾಣಕ್ಕಾಗಿ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಭದ್ರ ಬುನಾದಿ ಹಾಕಿದ್ದಾರೆ. ಮುಂದಿನ ಕೆಲವು ವರ್ಷಗಳು ನಮ್ಮ ದೇಶಕ್ಕೆ ನಿರ್ಣಾಯಕ. ಹೀಗಾಗಿ ನಾವು ಮತ್ತೊಮ್ಮೆ ಮೋದಿಜಿಯವರನ್ನು ಪ್ರಧಾನಿಯನ್ನಾಗಿಸಲೇಬೇಕು, ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರಾದ ಶ್ರೀ ಸಿವಿ ಚಂದ್ರಶೇಖರ್ ಹೇಳಿದರು.
ನಿಕಟಪೂರ್ವ ಕೇಂದ್ರ ಸಚಿವರಾದ ನಾರಾಯಣ ಸ್ವಾಮಿ ಅವರು ಮೈತ್ರಿ ಅಭ್ಯರ್ಥಿ ಡಾಕ್ಟರ್ ಬಸವರಾಜ್ ಕ್ಯಾವಟರ್ ಅವರ ಪರವಾಗಿ ಮತಯಾಚನೆ ಮಾಡಿದರು. ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್, ಹಾಗೂ ಮೇಕ್ ಇನ್ ಇಂಡಿಯಾ ಯೋಜನೆಗಳು ಭಾರತದ ಭವಿಷ್ಯವನ್ನು ಭದ್ರ ಗೊಳಿಸಿವೆ. ಭಾರತ ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ಇಡೀ ಪ್ರಪಂಚವೇ ನಮ್ಮೆಡೆಗೆ ನೋಡುತ್ತಿದೆ. ಇದು ಮುಂದುವರೆಯಲು ಮೋದಿಜಿಯವರು ಪ್ರಧಾನಿ ಆಗಲೇಬೇಕು. ಹೀಗಾಗಿ ನಾವೆಲ್ಲರೂ ಡಾಕ್ಟರ್ ಬಸವರಾಜ್ ಕ್ಯಾವಟರ್ ಅವರನ್ನು ಗೆಲ್ಲಿಸಬೇಕು, ಎಂದು ಕರೆಕೊಟ್ಟರು.
ಕೊಪ್ಪಳ ಕ್ಷೇತ್ರದಲ್ಲಿ ವಾತಾವರಣ ನಮ್ಮ ಪರವಾಗಿಯೇ ಇದೆ. ಈಗಾಗಲೇ ಡಾಕ್ಟರ್ ಬಸವರಾಜ್ ಗೆದ್ದಿದ್ದಾರೆ ಎಂಬ ಭಾವನೆ ನಮ್ಮಲ್ಲಿದೆ. ಕನಿಷ್ಠ ಪಕ್ಷ ಒಂದು ಲಕ್ಷಕ್ಕಿಂತ ಹೆಚ್ಚಿನ ಮತಗಳ ಲೀಡ್ ಕೊಟ್ಟು ಅವರನ್ನು ಗೆಲ್ಲಿಸಿಕೊಂಡು ಬರಲು ಎಲ್ಲರೂ ಹಗಲಿರುಳು ಶ್ರಮಿಸೋಣ, ಎಂದರು.
ಉರಿ ಬಿಸಿಲನ್ನು ಲೆಕ್ಕಿಸದೆ ನಾವೆಲ್ಲ ಮತದಾನದಲ್ಲಿ ಪಾಲ್ಗೊಳ್ಳಬೇಕು. ಅತಿಹೆಚ್ಚಿನ ಮತದಾನ ಆಗುವಂತೆ ನೋಡಿಕೊಳ್ಳಬೇಕು. ನಮ್ಮ ವಿರೋಧಿಗಳು ಹರಡುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಬಾರದು, ಎಂದು ಹೇಳಿದರು.
ಪಕ್ಷದ ಪ್ರಮುಖರಾದ ಮಹಾಂತೇಶ ಮೈನಳ್ಳಿ, ಗಣೇಶ ಹೊರತ್ನಾಳ ಸೇರಿದಂತೆ ಪಕ್ಷದ ಮುಖಂಡರು ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ಹಾಜರಿದ್ದರು.
Comments are closed.