ಮತ ಚಲಾಯಿಸಿ ಪ್ರಜಾತಂತ್ರದ ಆಶಯ ಉಳಿಸಿ: ಜಿಲ್ಲಾಧಿಕಾರಿ ನಲಿನ್ ಅತುಲ್ ಕರೆ
: ನಗರದ ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗ ಕಚೇರಿ ಆವರಣದಲ್ಲಿ ಲೋಕಸಭಾ ಚುನಾವಣೆ ಅಂಗವಾಗಿ ನಡೆಯುತ್ತಿರುವ ನಮ್ಮ ನಡೆ, ಮತಗಟ್ಟೆ ಕಡೆ ಅಭಿಯಾನದ ಧ್ವಜಾರೋಹಣವನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ನಲಿನ್ ಅತುಲ್ ಅವರು ನೆರವೇರಿಸಿದರು.
ನಂತರ ಅವರು ಮಾತನಾಡಿ ಮೇ 7ರಂದು ನಡೆಯುವ ಲೋಕಸಭಾ ಚುನಾವಣೆ ಅಂಗವಾಗಿ ಉತ್ತಮ ಭವಿಷ್ಯಕ್ಕಾಗಿ ಮತದಾನ ನಮಗಿರುವ ಅಮೂಲ್ಯವಾದ ಮತದಾನದ ಹಕ್ಕನ್ನು ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು. ದೇಶದ ಅಭಿವೃದ್ಧಿಯಲ್ಲಿ ಸಹಭಾಗಿತ್ವ ಮತದಾನ ಪ್ರಜಾಪ್ರಭುತ್ವದ ಮೂಲಭೂತ ಹಕ್ಕು. ಅದಕ್ಕಾಗಿ ನಮ್ಮ ನಡೆ, ಮತಗಟ್ಟೆ ಕಡೆ ಅಭಿಯಾನವನ್ನು ಜಿಲ್ಲೆಯ 1317 ಬೂತ್ ಗಳಲ್ಲಿ ನಡೆಸಲಾಗುತ್ತಿದೆ. ಮತಗಟ್ಟೆಗಳ ಮೇಲೆ ಮೇ 7ರ ವರೆಗೆ ಧ್ವಜ ಏರಿಸಿಬೇಕು. ನಮ್ಮ ನಡೆ, ಮತಗಟ್ಟೆ ಕಡೆ ಅಭಿಯಾನವನ್ನು ಆಚರಿಸಿ ಪ್ರಜಾಪ್ರಭುತ್ವವನ್ನು ಉಳಿಸಿ ಬೆಳೆಸಿ ಗಟ್ಟಿಗೊಳಿಸಲು ಪ್ರಜೆಗಳ ಪ್ರತ್ಯಕ್ಷ ಪಾಲ್ಗೊಳ್ಳುವಿಕೆ ನಿರಂತರವಾಗಿ ಇರಬೇಕು ಎಂದರು.
ಚುನಾವಣೆ ನಡೆದಾಗ ಮತಗಟ್ಟೆಗೆ ಬಂದು ಮತದಾನ ಮಾಡುವುದು ಅದರಲ್ಲಿ ಕಣ್ಣಿಗೆ ಕಾಣುವ ಒಂದು ಸಣ್ಣ ಸಂಕೇತ, ಇದರ ಪರಿಣಾಮ ಮಾತ್ರ ಬಹಳ ದೊಡ್ಡದು. ಚುನಾವಣೆ ಕೆಲಸದಲ್ಲಿ ಬಿಎಲ್ ಓ ಗಳ ಕಾರ್ಯ ಅತೀ ಮುಖ್ಯವಾಗಿರುತ್ತದೆ. ಎಲ್ಲರೂ ಮತಗಟ್ಟೆಗಳನ್ನು ಮತದಾರರಿಗೆ ಪರಿಚಯಿಸಬೇಕು. ಶೇ.100 ರಷ್ಟು ಮತದಾನ ಆಗಲು ಕಾರ್ಯನಿರ್ವಹಿಸಬೇಕು . ಎಲ್ಲ ಮತಗಟ್ಟೆಗಳಲ್ಲಿ ಧ್ವಜಾರೋಹಣ ನಡೆಸಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.
ಪ್ರತಿಜ್ಞಾ ವಿಧಿ ಸ್ವೀಕಾರ: ಕಾರ್ಯಕ್ರಮದ ಅಂಗವಾಗಿ ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಅವರು ಮತದಾನ ಜಾಗೃತಿ ಪ್ರತಿಜ್ಞಾ ವಿಧಿ ಬೋಧಿಸಿದರು. ಇದೆ ವೇಳೆ ನೆರೆದಿದ್ದ ಎಲ್ಲರೂ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಚುನಾವಣಾ ಜಿಲ್ಲಾ ರಾಯಭಾರಿಗಳಾದ ಪೂರ್ಣಿಮ ಏಳುಭಾವಿ ಅವರು ಮಾತನಾಡಿ, ವಿಶೇಷಚೇನತರ ಪ್ರತಿನಿಧಿಯಾಗಿ ನನ್ನನ್ನು ರಾಯಭಾರಿಯಾನ್ನಾಗಿ ಮಾಡಲಾಗಿರುತ್ತದೆ. ಚಲನ ವಲನದ ತೊಂದರೆ ಇರುವವರು ಈಗಾಗಲೇ ಮನೆಯಿಂದ ಮತದಾನ ಮಾಡಿರುತ್ತಾರೆ. ಉಳಿದ ವಿಶೇಷ ಚೇತನರು ಮತಗಟ್ಟೆಗೆ ಹೋಗಿ ಮತ ಹಾಕಲು ಬಹಳ ಉತ್ಸುಕರಾಗಿರುತ್ತಾರೆ. ಅವಿದ್ಯಾವಂತರಿಗಿAತ ವಿದ್ಯಾವಂತ ವರ್ಗವೇ ಮತದಾನದಿಂದ ದೂರ ಉಳಿಯುತ್ತಾರೆ ಎಂಬ ಅಪವಾದ ಇದೆ. ಇದನ್ನು ತೆಗೆದುಹಾಕಿ ಮೇ 7 ರಂದು ಕೇವಲ ಐದು ನಿಮಿಷ ಮತಗಟ್ಟೆಗೆ ಬಂದು ನಿರ್ಭೀತಿಯಿಂದ, ಪ್ರಾಮಾಣಿಕವಾಗಿ ಮತ ಚಲಾಯಿಸೋಣ. ಯಾವುದೇ ಆಸೆ ಆಮಿಷಕ್ಕೆ ಒಳಗಾಗದೇ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡೋಣ. ಈ ಮೂಲಕ ನಮ್ಮ ದೇಶದ ಬಹುದೊಡ್ಡ ವ್ಯವಸ್ಥೆಯಾದ ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿಹಿಡಿಯೋಣ ಎಂದರು.
ಜಿಲ್ಲೆಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಜಲಪದ ಕಲಾವಿದರಾದ & ಜಿಲ್ಲಾ ಸ್ವೀಪ್ ಐಕಾನ್ ರಾದ ಮೆಹಬೂಬ್ ಕಿಲ್ಲೆದಾರ್ ರವರು ಇದೀಗ ದೇಶ ಸೇವೆ ಮಾಡುವ ಅವಕಾಶ ಒದಗಿ ಬಂದಿದೆ. ಮತದಾರರು ಯಾವುದೇ ಆಸೆ, ಆಮೀಷಕ್ಕೆ ಬಲಿಯಾಗದೆ ಮತದಾನ ಮಾಡಬೇಕು. ಮತದಾನ ಪ್ರಕ್ರಿಯೆಯಿಂದ ದೂರ ಉಳಿಯಬಾರದು. ಮತದಾನ ಪ್ರಮಾಣ ಹೆಚ್ಚಳವಾಗಲು ಶ್ರಮಿಸುವಂತೆ ಮತದಾನ ಜಾಗೃತ ಗೀತೆಯನ್ನು ಪ್ರಸ್ತುತಪಡಿಸಿದರು.
ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮದ ವಿಶೇಷತೆ: ಕೊಪ್ಪಳ ನಗರದ ಪಂ.ರಾಜ್ ವಿಭಾಗದ ಮಹಿಳೆಯರ ಸಂಖ್ಯೆ ಹೆಚ್ಚಿರುವ ಬೂತ್ ಸಂಖ್ಯೆ- 113ರಲ್ಲಿ ಸಖಿ ಮತಗಟ್ಟೆ ಯನ್ನು ಮದುವಣಗಿತ್ತಿಯಂತೆ ಸಿಂಗಾರಗೊಳಿಸಲಾಗಿತ್ತು.
ಚಿತ್ತಾರ್ಕಷಕವಾಗಿ ವರ್ಲಿ ಆರ್ಟ್ ನಿಂದ ಕಂಗೋಳಿಸಿತು. ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ಸಿಬ್ಬಂದಿಗಳಿAದ ಮತದಾನ ಜಾಗೃತಿಯ ರಂಗೋಲಿಯನ್ನು ಬಿಡಿಸಲಾಗಿತ್ತು.ಬೂತ್ ನಿಂದ ಗಡಿಯಾರ ಕಂಬದವರೆಗೆ ಮತದಾನ ಜಾಗೃತಿಯ ವಾಹನದೊಂದಿಗೆ ಪೌರಕಾರ್ಮಿಕರು ವಾಕಥಾನ್ ಮಾಡಿ ಮೇ 7ರಂದು ತಪ್ಪದೇ ಮತದಾನ ಮಾಡುವಂತೆ ಘೋಷಣೆ ಮುಖಾಂತರ ಮತದಾರರಿಗೆ ಜಾಗೃತಿ ಮೂಡಿಸಿದರು. ಅಧಿಕಾರಿಗಳಿಂದ & ಮತದಾರರಿಂದ ಸಹಿ ಸಂಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ದುಂಡಪ್ಪ ತುರಾದಿ,ನಗರಸಭೆ ಪೌರಾಯುಕ್ತರಾದ ಗಣಪತಿ ಪಾಟೀಲ್ ಅಆPಔ ಜಯಶ್ರೀ, ತಾ.ಪಂ./ನಗರ ಸಭೆ/ಪಂ.ರಾಜ್ ಇಲಾಖೆ ಅಧಿಕಾರಿಗಳು & ಸಿಬ್ಬಂದಿಗಳು & ಪೌರಕಾರ್ಮಿಕರು ಹಾಜರಿದ್ದರು.

Comments are closed.