ಗಂಗಾವತಿ: ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ವಕ್ಫ್ ಆಸ್ತಿಗಳ ಆಡಳಿತ ಮಂಡಳಿ ಅವಧಿ ಮುಕ್ತಾಯವಾಗಿದ್ದರೂ ಸಹ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಇಶಾರೆ ಮೇರೆಗೆ ಇರುವ ಪದಾಧಿಕಾರಿಗಳನ್ನು ಮುಕ್ತಗೊಳಿಸಿ ವಕ್ಫ್ ಇಲಾಖೆ ಪಾರದರ್ಶಕ ಚುನಾವಣೆ ನಡೆಸಬೇಕು ಎಂದು ಕೆಆರ್‌ಪಿಪಿ ಮುಖಂಡ ಸೈಯ್ಯದ್ ಅಲಿ ಒತ್ತಾಯಿಸಿದರು.
ಅವರು, ಭಾನುವಾರ ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು. ಗಂಗಾವತಿ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಒಟ್ಟಾರೆ ೨೧ ವಕ್ಫ್ ಆಸ್ತಿಗಳಿದ್ದು ಬಹುತೇಕ ಮಸೀದಿಗಳಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಪರಮಾಪ್ತರು ಅಧಿಕಾರದಲ್ಲಿದ್ದಾರೆ, ಅವಧಿ ಮುಗಿದರೂ ಚುನಾವಣೆ ನೆಡೆಸಿಲ್ಲ, ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನೆಡೆಸದೆ ಏಕ ಪಕ್ಷೀಯ ನಿರ್ಧಾರದಿಂದಾಗಿ ಮುಸ್ಲಿಂ ಸಮುದಾಯದ ಸಾಕಷ್ಟು ಜನರಲ್ಲಿ ಅಸಮಾಧಾನವಿದ್ದು ಕೂಡಲೆ ವಕ್ಫ್ ಇಲಾಖೆ ಕ್ರಮಕ್ಕೆ ಮುಂದಾಗಬೇಕೆಂದರಲ್ಲದೆ, ಇನ್ನೂ ಕೆಲವೆ ದಿನಗಳಲ್ಲಿ ಇಲ್ಲಿನ ಈದ್ಗಾ ಮೈದಾನದಲ್ಲಿ ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿಯವರು ವಕ್ಫ್ ಆಸ್ತಿ ಆಡಳಿತ ಮಂಡಳಿಯಲ್ಲಿರುವವರ ಸಭೆ ಕರೆದು ಕುಂದು ಕೊರೆತೆ ಆಲಿಸಲಿದ್ದು ಅಭಿವೃದ್ದಿಗೆ ಅಗತ್ಯ ಕ್ರಮ ಜರುಗಿಸಲಿದ್ದಾರೆ ಎಂದು ವಿವರಿಸಿದರು.
ತ್ಯಾಗ ಬಲಿದಾನದ ಸಂಕೇತವಾಗಿರುವ ಬಕ್ರಿದ್ ಹಬ್ಬದ ದಿನದಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರು, ಏಕ ಪಕ್ಷೀಯವಾಗಿ ನಡೆದುಕೊಂಡು ಈದ್ಗಾ ಪ್ರಾರ್ಥನೆಯ ಸ್ಥಳವನ್ನು ಓಟ್ ಆಫ್ ಥ್ಯಾಂಕ್ಸ್ ಹೇಳುವ ಮೂಲಕ ರಾಜಕೀಯ ತಾಣವನ್ನಾಗಿ ಮಾಡಿದರು, ನಿಯಮನುಸಾರ ಶಾಸಕರು ಈದ್ಗಾ ಮೈದಾನದಲ್ಲಿ ಜನಸ್ತೋಮವನ್ನುದ್ದೇಶಿಸಿ ಮಾತನಾಡುವುದು ವಾಡಿಕೆ ಆದರೆ, ಶಾಸಕ ರೆಡ್ಡಿಯವರಿಗೆ ಅವಕಾಶ ನೀಡದೆ ಮಾಜಿ ಸಚಿವ ಅನ್ಸಾರಿಗೆ ಮಾತನಾಡಲು ಸಮಿತಿ ವೇದಿಕೆ ಒದಗಿಸಿದ್ದು ಅತ್ಯಂತ ದುರ್ದೈವದ ಸಂಗತಿ, ಇದು ಖಂಡನೀಯ ಅನ್ಸಾರಿಯವರು ಕೀಳು ರಾಜಕಾರಣ ಮಾಡಿದ್ದಾರೆ ತಾವು ಇತರ ಧರ್ಮಗಳ ಸಭೆ, ಸಮಾರಂಭಗಳಿಗೆ ತೆರಳಿ ಮಾತನಾಡಬಹುದು ಆದರೆ, ನಮ್ಮ ಧರ್ಮದ ಸಭೆಗಳಿಗೆ ಇತರರು ಆಗಮಿಸದಂತೆ ನಿರ್ಭಂಧ ಹೇರುವುದು ಎಷ್ಟು ಸರಿ..? ಅನ್ಸಾರಿ ಇಂಥ ನಡೆಯನ್ನು ತಿದ್ದಿಕೊಂಡು ಮುನ್ನಡೆಯಲಿ ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಪಾಠ ಕಲಿಯಲಿದ್ದಾರೆ ಎಂದು ಕೆಆರ್‌ಪಿಪಿ ಮಹಿಳಾ ಪ್ರಮುಖರಾದ ಶಾಹೀನ್ ಕೌಸರ್ ಎಚ್ಚರಿಕೆ ನೀಡಿದರು.
ಯುವ ಮುಖಂಡರಾದ ಗೌಸ್ ದಫೆದಾರ್ ಮಾತನಾಡಿ, ಈದ್ಗಾ ಸಮಿತಿ ಕಾರ್ಯದರ್ಶಿಗಳಿಗೆ ಶಾಸಕರಾದ ಜನಾರ್ದನರೆಡ್ಡಿಯವರು ಬಕ್ರೀದ್ ಹಬ್ಬದ ಪ್ರಾರ್ಥನೆಯ ವೇಳೆ ಭಾಷಣ ಮಾಡುವ ಕುರಿತು ಹಿಂದಿನ ದಿನವೇ ಮೌಖಿಕವಾಗಿ ತಿಳಿಸಲಾಗಿತ್ತು ಆದರೆ ಅವರು ಮುಸ್ಲಿಂಮೇತರರಿಗೆ ಭಾಷಣಕ್ಕೆ ಅವಕಾಶ ನೀಡುವುದಿಲ್ಲ ಎಂದು ನುಣಿಚಿಕೊಂಡರು. ವಾಸ್ತವವಾಗಿ ಸಮಿತಿಯ ಅಧ್ಯಕ್ಷರು ಹಾಗು ಪದಾಧಿಕಾರಿಗಳು ಶಾಸಕರನ್ನು ಸ್ವಾಗತಿಸುವುದು ನಿಯಮ ಆದರೆ ಇದರ ಪಾಲನೆಯಾಗಿಲ್ಲ. ಇಡೀ ರಾಜ್ಯದಲ್ಲಿ ಎಲ್ಲ ವಿಧಾನ ಸಭಾ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯವನುದ್ದೇಶಿಸಿ ಅಲ್ಲಿನ ಶಾಸಕರು ಮಾತನಾಡುವುದು ವಾಡಿಕೆ, ರಾಜ್ಯಮಟ್ಟದಲ್ಲಿ ಸಿಎಂ ಸಿದ್ದರಾಮಯ್ಯಾದಿಯಾಗಿ ಅನೇಕು ಮಾತನಾಡಿದ್ದಾರೆ. ಗಂಗಾವತಿಯಲ್ಲಿ ಯಾಕೆ ಅವಕಾಶ ನೀಡಿಲ್ಲ ಇದು ಪ್ರೊಟೋಕಾಲ್ ಉಲ್ಲಂಘನೆಯ ಕ್ರಮವಾಗಿದ್ದು ಮುಂದಿನ ದಿನಗಳಲ್ಲಿ ಸರಿ ಹೋಗದಿದ್ದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ದಫೆದಾರ್ ಕಿಡಿಕಾರಿದರು.
Sign in
Sign in
Recover your password.
A password will be e-mailed to you.
Get real time updates directly on you device, subscribe now.
Next Post
Comments are closed.