ವಿರೋಧ ಪಕ್ಷಗಳು ಇಲ್ಲದಂತೆ ಮಾಡುವುದೆಂದರೆ, ಪ್ರಜಾಪ್ರಭುತ್ವ ಇಲ್ಲದಂತೆ ಮಾಡುವುದೆಂದು ಅರ್ಥ-ಶಿವಸುಂದರ
ಕೊಪ್ಪಳ : ಮಂಗಳವಾರ ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಪ್ರಜಾ ಪ್ರಭತ್ವ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಕೋಮುವಾದಿ ಬಿಜೆಪಿ ಸೋಲಿಸಿ ದೇಶ ಉಳಿಸಿ ಘೋಷವಾಕ್ಯದ ಚುನಾವಣೆ ಜಾಗೃತಿ ಸಮಾವೇಶ ನಡೆಯಿತು.
ಎಡ ಚಿಂತಕ ಮೈಸೂರಿನ ಡಾಕ್ಟರ್ ಲಕ್ಷ್ಮೀ ನಾರಾಯಣ ಅವರಿಗೆ ಗೌರವ ನಮನ ಸಲ್ಲಿಸಿ ಮೌನಾಚರಣೆ ನಡಡೆಸಲಾಯಿತು. ಖ್ಯಾತ ಚಿಂತಕ ಶಿವಸುಂದರವರು ಸಮಾವೇಶ ಉದ್ಘಟಿಸಿ ಮಾತನಾಡಿದರು.
ನಾವು ಬಿಜೆಪಿಯನ್ನು ಯಾಕೆ ಸೋಲಿಸಬೇಕೆಂದರೆ, ಅವರು ಪ್ರಜಾಪ್ರಭುತ್ವವನ್ನು ಮಾರಾಟ ಮಾಡಿ ಸರ್ವಧಿಕಾರವನ್ನು ಸ್ಥಾಪಿಸುತ್ತಾರೆ ಅದಕ್ಕೆ.ಸಂವಿಧಾನ, ಎಲ್ಲರೂ ಸಮಾನರು ಮತ್ತು ಸ್ವಾತಂತ್ರ್ಯ ಸಮಾನತೆ ಭ್ರಾತೃತ್ವ- ಬಂದುತ್ವವನ್ನು ಬೋಧಿಸುತ್ತದೆ. ಬಿಜಿಪಿಯವರು ಇದರ ಕಡು ವೈರಿಗಳು. ಇಂತಹ ಲಕ್ಷಾಂತರ ಪ್ರಗತಿಪರ ಅಂಶಗಳಿರುವ ಸಂವಿಧಾನವನ್ನು ಬದಲಿಸಲು ತಯಾರಾಗಿದ್ದಾರೆ. ಈ ಕಾರಣಕ್ಕಾಗಿಯೇ ಅವರು 400 ಸಿಟುಗಳನ್ನು ಗಲ್ಲಬೇಕೆನ್ನುವ ಮಾತನಾಡುತ್ತಿದ್ದಾರೆ. ಬಿಜೆಪಿ ಸೋತರೆ ದೇಶದ ಜನರು ಗೆದ್ದಂತೆ. ಕಾರ್ಪೋರೇಟ್ ಕಂಪನಿಗಳು, ತಮ್ಮ ಹಿತ ಕಾಯುವ ಸರ್ವಾಧಿಕಾರಿ ಪಕ್ಷಗಳನ್ನು ಗೆಲ್ಲಿಸಿಕೊಳ್ಳುತ್ತವೆ. ಅಧಿಕೃತ್ ವಿರೋಧ ಪಕ್ಷಗಳು ಇಲ್ಲದಂತೆ ಮಾಡುವುದೆಂದರೆ, ಪ್ರಜಾಪ್ರಭುತ್ವ ಇಲ್ಲದಂತೆ ಮಾಡುವುದೆಂದು ಅರ್ಥ. ಮೊನ್ನೆ ರಾಜಿಸಸ್ತಾನದಲ್ಲಿ ಮೊತನಾಡಿ ಮೋದಿಯವರು, ಕಾಂಗ್ರೆಸ್ಸಿನವರು ಬಡವರಿಗೆ ಸಂಪತ್ತನ್ನು ಹಂಚಿಕೆ ಮಾಡುವ ಮಾತನಾಡುತ್ತಾರೆ/ ಅಂದರೆ ನಿಮ್ಮಲ್ಲಿರುವ ಬಂಗಾರ, ಬೆಳ್ಳಿ,ತಾಳಿಗನ್ನು ಕಿತ್ತಿಕೊಂಡು ಮುಸ್ಲಿಂ ಭಯ್ಪೋದಕರಿಗೆ ಕೊಡುತ್ತಾರೆಂದು ಕೀಳುಮಟ್ಟದ ಟಿಕೆ ಮೊಡುತ್ತಾರೆ. ಇಂತಹ ದುಷ್ಪತನದ ಕೊಳಕು ಮಾತನಾಡುವ ಪ್ರಧಾನಿಯನ್ನು ದೇಶ ಎಂದು ಕಂಡಿರಲಿಲ್ಲ.ಇವರ ಮಾತುಗಳಿಂದ ಪ್ರಪಂಚದಲ್ಲಿ ತಲೆ ತಗ್ಗಿಸುಂತಾಗಿದೆ ಎದು ಶಿವಸುಂದರವರು ವಾಗ್ದಾಳಿ ನಡೆಸಿದರು.
ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಅಧ್ಯಕ್ಷತೆ ವಹಿಸಿದ್ದರು., CPIML ಮಾಸ ಲೈನ್ ರಾಜ್ಯ ಕಾರ್ಯದರ್ಶಿ ಡಿ.ಹೆಚ್.ಪೂಜಾರ ಪ್ರಸ್ತಾವಿಕ ಮಾತನಾಡಿದರು.SS ಪಾಟೀಲ್,ಬಸವರಾಜ ಶೀಲವಂತ, ಬರಹಗಾರರಾದ ಸಾವಿತ್ರಿ ಮಜುಮದಾರ, ಶೈಲಜಾ ಹಿರಿಮಠ, WPI ಜಿಲ್ಲಾಧ್ಯಕ್ಷರಾ ಆದಿಲ್ ಪಟೇಲ್ ವೆದಿಕೆ ಮೇಲಿದ್ದರು. TUCU ರಾಜ್ಯ ಕಾರ್ಯದರ್ಶಿ ಕೆ.ಬಿ.ಗೋನಾಳ ಕಾರ್ಯಕ್ರಮದ ನಿರೂಪಣ ಮಾಡಿದರು ಕಾಶಪ್ಪ ಚಲುವಾದಿ ವಂದಾರ್ಪಣೆ ಮಾಡಿದರು.
Comments are closed.