ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ: ಹಾಲಪ್ಪ ಆಚಾರ್
ಕೊಪ್ಪಳ: ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡಿ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಿರೇಸಿಂಧೋಗಿಯಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ನಡೆದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತಕ್ಕೆ ದೇಶವೇ ತಲೆ ಬಾಗಿದೆ. ಭ್ರಷ್ಟಾಚಾರ ರಹಿತ ಆಡಳಿತ ನೀಡಿದ ಮೋದಿ ಅವರನ್ನು ಮತ್ತೊಮ್ಮ ಪ್ರಧಾನಮಂತ್ರಿ ಮಾಡಲು ಬಿಜೆಪಿ ಚಿಹ್ನೆಗೆ ಮತ ನೀಡಬೇಕು ಎಂದರು.
ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕೆ. ಶರಣಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೇಂದ್ರ ಸರಕಾರದ ಯೋಜನೆ ದೊರೆತಿವೆ. ಅವರ ಬದುಕನ್ನು ಹಸನಾಗಿಸುವ ಮತ್ತು ದೇಶದ ಅಭಿವೃದ್ಧಿಯ ಓಟವನ್ನು ಇನ್ನು ಹೆಚ್ಚಿನ ವೇಗ ಪಡೆಯುವಂತೆ ಕಳೆದ ಹತ್ತು ವರ್ಷಗಳಿಂದ ಮೋದಿಜೀಯವರು ಮಾಡುತ್ತಾ ಬಂದಿದ್ದಾರೆ ಎಂದು ಕೇಂದ್ರ ಸರ್ಕಾರದ ಸಾಧನೆಗಳನ್ನು ಪರಿಚಯಿಸಿದರು.
ಈ ಸಂದರ್ಭದಲ್ಲಿ ಜೆ.ಡಿ.ಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಸಂಚಾಲಕ ಪ್ರದೀಪ ಹಿಟ್ನಾಳ, ಪ್ರಮುಖರಾದ ಮಹಾಂತೇಶ ಮೈನಳ್ಳಿ, ಈಶಪ್ಪ ಮಾದಿನೂರ, ಗುರುಮೂರ್ತಿ ಸ್ವಾಮಿಗಳು, ಅಶೋಕ, ವೆಂಕಟೇಶ ಹಾಲವರ್ತಿ, ಹನುಮಂತಗೌಡ ಪಾಟೀಲ, ಶರಣಪ್ಪ, ಚಂದ್ರಶೇಖರ ಕವಲೂರು, ನಜೀರ ಸಾಬ್, ಮಹಾಂತೇಶ ಸಂಗತಿ, ಕರಿಯಪ್ಪ ಮೇಟಿ, ಅಜಯ ಅಂಗಡಿ, ನಾಗನಗೌಡ, ಗಣೇಶ ಹೊರ್ತಟ್ನಾಳ, ಮಹಿಳಾ ಮೋರ್ಚಾದ ವಾಣಿ, ಶೋಭಾ ನಗರಿ, ಮಹಾಲಕ್ಷ್ಮಿ ಕಂದಾರಿ ಹಾಗೂ ಉಭಯ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.
ಸುಭದ್ರ ಆಡಳಿತಕ್ಕೆ ಮೋದಿ ನೇತೃತ್ವದ ಕೇಂದ್ರ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯಬೇಕು. ಆದ್ದರಿಂದ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯನ್ನು ಗೆಲ್ಲಿಸಿ ಕಳುಹಿಸಬೇಕು. ಪ್ರತಿಯೊಬ್ಬರು ಬಿಜೆಪಿಗೆ ಮತ ನೀಡಿ.
ಗಾಲಿ ಜನಾರ್ದನ ರೆಡ್ಡಿ, ಶಾಸಕ.
ಭಾರತದ ರಕ್ಷಣೆ ವ್ಯವಸ್ಥೆ ಬಲ ಪಡಿಸಿದ್ದು, ವಿಶ್ವದಲ್ಲೇ ಬಲಿಷ್ಠ ಸೇನೆ ನಮ್ಮದಾಗಿದೆ. ಪ್ರತಿ ವರ್ಷ ದೀಪಾವಳಿ ಯನ್ನು ಸೈನಿಕರ ಜತೆ ಆಚರಿಸುವ ಮೂಲಕ ಆತ್ಮಸ್ಥೈರ್ಯ ತುಂಬಿದ್ದಾರೆ. ಅವರು ಮತ್ತೊಮ್ಮ ಪ್ರಧಾನಮಂತ್ರಿ ಆಗಬೇಕು. ಆದ್ದರಿಂದ ಮತದಾರರು ಬಿಜೆಪಿಗೆ ಮತ ಹಾಕಿ.
ಹೇಮಲತಾ ನಾಯಕ, ವಿಧಾನ ಪರಿಷತ್ ಸದಸ್ಯೆ.
Comments are closed.