ಹಿಟ್ನಾಳ್ ಗೆ 2 ಲಕ್ಷ ಮತಗಳ ಅಂತರದ ಗೆಲುವು ನಿಶ್ಚಿತ: ಅಮರೇಶ್ ಕರಡಿ
ಕೊಪ್ಪಳ: ಕರಡಿ- ಹಿಟ್ನಾಳ್ ಕುಟುಂಬಗಳು ಎದುರಾಳಿಗಳಾಗಿ ಅನೇಕ ಚುನಾವಣೆ ಎದುರಿಸಿದ್ದೇವೆ. ಈ ಬಾರಿ ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ್ 2 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಕಾಂಗ್ರೆಸ್ ಯುವ ನಾಯಕ ಅಮರೇಶ್ ಕರಡಿ ವಿಶ್ವಾಸ ವ್ಯಕ್ತಪಡಿಸಿದರು.
ಕೊಪ್ಪಳ ಲೋಕಸಭಾ ಚುನಾವಣೆ ಹಿನ್ನೆಲೆ ನಗರದ ಮೌಲಾನ ಆಜಾದ್ ಶಾಲೆ ಹತ್ತಿರ ಏರ್ಪಡಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕರಡಿ ಸಂಗಣ್ಣ ಅವರು ಎರಡು ಅವಧಿಯಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿ ಮಾಡಿದ್ದಾರೆ. ಕೊಪ್ಪಳ ಮುಖ್ಯರಸ್ತೆಗೆ ಸಿಸಿ ರಸ್ತೆ ಮಾಡಲಾಗಿದೆ. ಚುನಾವಣೆಯಲ್ಲಿ ಎದುರಾಳಿಗಳಾಗಿದ್ದ ನಾವು ಒಗ್ಗಾಟಾಗಿ ಚುನಾವಣೆ ಎದುರಿಸುತ್ತಿರುವುದರಿಂದ ಅಭಿಮಾನಿಗಳು, ಬೆಂಬಲಿಗರು, ಕಾರ್ಯಕರ್ತರಿಗೆ ಶಕ್ತಿ ಹೆಚ್ಚಾಗಿದೆ ಎಂದರು.
ಕೊಪ್ಪಳದಲ್ಲಿ 25 ಸಾವಿರ ಮನೆ ನಿರ್ಮಾಣ ಕನಸು ಕಂಡಿದ್ದೆವು. ಆದರೆ ನಮ್ಮ ಅವಧಿಯಲ್ಲಿ ಪ್ರಯತ್ನಿಸಿದೆವು. ಆದರೆ, ಆಗಲಿಲ್ಲ. ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಇದನ್ನು ಪೂರ್ಣಗೊಳಿಸಬೇಕು. ಇನ್ನು ಹುಲಿಕೆರೆ ಪ್ರದೇಶವನ್ನು ಸುಂದರ ತಾಣ ಮಾಡಬೇಕು ಎಂದರು.
ರಾಜ್ಯದಲ್ಲಿ ಐದು ಗ್ಯಾರೆಂಟಿ ಯೋಜನೆ ಯನ್ನು ಒಂದೇ ವರ್ಷದಲ್ಲಿ ಜಾರಿತಂದ ಸಿದ್ದರಾಮಯ್ಯ ಅವರ ಆಡಳಿತಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಹಿರೇಹಳ್ಳ ಜಲಾಶಯ ಅಭಿವೃದ್ಧಿ ಪಡಿಸಿ ಕೆರೆಗಳಿಗೆ ನೀರು ತುಂಬಿಸಲು ಶ್ರಮಿಸಲಾಗುವುದು.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗ್ಯಾರೆಂಟಿ ಯೋಜನೆ ವಿಸ್ತರಣೆಯಾಗಲಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಗೆ 25 ಸಾವಿರ ಲೀಡ್ ಬರಲಿದೆ ಎಂದರು.
ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಮಾತನಾಡಿ, ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ನಿರುದ್ಯೋಗ ದಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಕೋಟ್ಯಾಂತರ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದರು.
ಕಾಂಗ್ರೆಸ್ ಮುಖಂಡರಾದ ಬಸವರಾಜ ಬೋವಿ, ಕಾಟನ್ ಪಾಷಾ, ಅಮ್ಜದ್ ಪಟೇಲ್, ಜ್ಯೋತಿ ಗೊಂಡಬಾಳ ಸೇರಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
Comments are closed.