ಮಾರ್ಗಸೂಚಿ ಅನುಸಾರ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಗೊಳಿಸಿ: ಪವನ ಕುಮಾರ್ ಮಾಲಪಾಟಿ

Get real time updates directly on you device, subscribe now.

ನರೇಗಾ ಯೋಜನೆಯ ಮಾರ್ಗಸೂಚಿಯನುಸಾರ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಹಾಗೂ ವಿಳಂಬ ಮಾಡದೆ ಅನುಷ್ಠಾನಗೊಳಿಸಿ ಎಂದು ಗ್ರಾಮೀಣಾಭಿವೃದ್ಧಿ ಆಯುಕ್ತರಾದ ಪವನ ಕುಮಾರ ಮಾಲಪಾಟಿ ಅವರು ತಿಳಿಸಿದರು.ಶನಿವಾರದಂದು ಜಿಲ್ಲಾ ಪಂಚಾಯತಿಯ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯೋಜನೆಯ ಮಾರ್ಗಸೂಚಿ ನಿಯಮಾನುಸಾರ ಕಾಮಗಾರಿಗಳನ್ನು ವಿಳಂಬ ಮಾಡದೇ ಆದ್ಯತೆಯ ಮೇರೆಗೆ ಅನುಷ್ಟಾನಗೊಳಿಸಿ ಎಂದು ತಿಳಿಸಿದ ಅವರು, ಪ್ರತ್ಯೇಕವಾಗಿ ತಾಲೂಕುವಾರು ಪ್ರಗತಿ ಪರಿಶೀಲನೆ ನಡೆಸಿ ಗುಣಮಟ್ಟದ ಕಾಮಗಾರಿಗಳು ಹಾಗೂ ಕಡತಗಳನ್ನು ಸರಿಯಾಗಿ ನಿರ್ವಹಿಸುವುದು, ಕಾಮಗಾರಿ ಸ್ಥಳದಲ್ಲಿ ಮಾಹಿತಿ ಫಲಕ ಕಡ್ಡಾಯವಾಗಿ ಅಳವಡಿಸುವುದು ಮತ್ತು ನರೇಗಾ ಯೋಜನೆಯ ಏಕೀಕೃತ ಸಹಾಯವಾಣಿ 8277506000 ಗೆ ದೂರು ಅಥವಾ ಕೆಲಸದ ಬೇಡಿಕೆಗಾಗಿ ಕರೆ ಮಾಡಬಹುದು. ಇದನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ಪ್ರಚುರಪಡಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಹಾಗೂ ಅನುಷ್ಟಾನ ಇಲಾಖೆಯಡಿ ಅನುಷ್ಟಾನಗೊಳ್ಳುವ ಕಾಮಗಾರಿಗಳ ಕಡತಗಳಲ್ಲಿ 21 ಅಂಶಗಳನ್ನು ಒಳಗೊಂಡ ಕಾಮಗಾರಿ ಕಡತಗಳನ್ನು ನಿರ್ವಹಿಸಬೇಕು. ಕಾಮಗಾರಿಗಳಲ್ಲಿ ಪ್ರತಿದಿನ 7 ವಹಿಗಳು(ಸೆವೆನ್ ರೆಜಿಸ್ಟರ್) ಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕು ಹಾಗೂ ಸಂಬAಧಿಸಿದ ಮೇಲಾಧಿಕಾರಿಗಳು ಭೇಟಿ ನೀಡಿದ ವೇಳೆ ವಹಿಗಳನ್ನು ಪ್ರಸ್ತುತಪಡಿಸಬೇಕು ಎಂದು ತಿಳಿಸಿದರು. ಕಡಿಮೆ ಮಾನವ ದಿನಗಳನ್ನು ಸೃಜಿಸಿದ ಗ್ರಾಮ ಪಂಚಾಯತಿ ಹಾಗೂ ಅನುಷ್ಠಾನ ಇಲಾಖೆಗಳು ಮಾಸಿಕವಾರು ಮಾನವ ದಿನಗಳ ಪ್ರಗತಿ ಸಾಧಿಸುವಂತೆ ಸೂಚಿಸಿದರು. ಒಂದು ಕುಟುಂಬಕ್ಕೆ ಕಡ್ಡಾಯವಾಗಿ 100 ಮಾನವ ದಿನಗಳನ್ನು ಸೃಜಿಸುವಂತೆ ಕ್ರಮವಹಿಸಬೇಕು. ಗ್ರಾಮ ಪಂಚಾಯತಿಗಳು ಕೂಲಿಕಾರರಿಗೆ ಕೆಲಸದ ಕೊಡದ ಬಗ್ಗೆ ದೂರುಗಳು ಬರದಂತೆ ನೋಡಿಕೊಳ್ಳಲು ಸೂಚಿಸಿದರು. ಈ ಸಂದರ್ಭದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೇಯ, ಜಂಟಿ ನಿರ್ದೇಶಕರು(ತೋಟಗಾರಿಕೆ) ಇಲಾಖೆ ಶ್ರೀಶೈಲ್ ದಿಡ್ಡಿಮನಿ, ಉಪ ಕಾರ್ಯದರ್ಶಿಗಳು ಜಿಲ್ಲಾ ಪಂಚಾಯತ್ ಕೊಪ್ಪಳ ಮಲ್ಲಿಕಾರ್ಜುನ್ ತೊದಲಬಾಗಿ, ಸಹಾಯಕ ಸಹಾಯಕ ಕಾರ್ಯದರ್ಶಿಗಳಾದ ಶಿವಪ್ಪ ಸುಬೇದಾರ್, ಸಹಾಯಕ ನಿರ್ದೇಶಕರಾದ ತ್ಯಾಗರಾಜ್, ತಾಂತ್ರಿಕ ಇಂಜಿನಿಯರ್ ಯಶವಂತ್, ತೋಟಗಾರಿಕೆ ಉಪ ನಿರ್ದೇಶಕರು, ಯೋಜನಾ ಅಭಿಯಂತರರು, ತಾಪಂನ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಅನುಷ್ಠಾನ ಇಲಾಖೆ ಅಧಿಕಾರಿಗಳು, ಜಿಪಂ, ತಾಪಂ ನರೇಗಾ ಸಿಬ್ಬಂದಿಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಎಡಿಪಿಸಿ ಮಹಾಂತಸ್ವಾಮಿ, ಮೈನುದ್ದಿನಿಲ್, ಡಿಐಇಸಿ ಶ್ರೀನಿವಾಸ್ ಚಿತ್ರಗಾರ್ ತಾಲೂಕ ಮಟ್ಟದ ತಾಂತ್ರಿಕ ಸಂಯೋಹಕರು, ತಾಂತ್ರಿಕ ಸಹಾಯಕರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!