DCC ಜಿಲ್ಲಾ ಅಧ್ಯಕ್ಷರು ಹಾಗೂ ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಅವರಿಗೆ ಸನ್ಮಾನ
.
ಕಾಂಗ್ರೇಸ್ ಕಛೇರಿಯಲ್ಲಿ ನೂತನ ಜಿಲ್ಲಾ ಕಾಂಗ್ರೇಸ್ ಸಮಿತಿ ಜಿಲ್ಲಾ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಅಮರೇಗೌಡ ಬಯ್ಯಾಪುರ ಇವರಿಗೆ ಜಿಲ್ಲಾ ಕಾಂಗ್ರೇಸ್ ಕಾರ್ಮಿಕ ವಿಭಾಗದಿಂದ ಶ್ರೀನಿವಾಸ ಪಂಡಿತ ಅವರು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಅಶೋಕ ಗೋರಂಟ್ಲಿ, ಪರಶುರಾಮ ಕೆರಳ್ಳಿ, ಜ್ಯೋತಿ ಗೊಂಡಬಾಳ, ಕೊಪ್ಪಳ ಕಾರ್ಮಿಕ ವಿಭಾಗದ ಬ್ಲಾಕ್ ಅಧ್ಯಕ್ಷ ಚಾಂದಪಾಷಾ ಕಿಲ್ಲೇದಾರ ಮತ್ತು ಮುಖಂಡರು ಉಪಸ್ಥಿತರಿದ್ದರು. ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪಂಡಿತ ಮಾತನಾಡಿ ಇದೂ ವರೆಗೂ ನಮ್ಮ ಕಾರ್ಮಿಕ ವಿಭಾಗದ ಅಧ್ಯಕ್ಷರು ವೆಂಕಟೇಶ ಎಮ್. ಆರ್ ಹಾಗೂ ಎಲ್ಲಾ ಪದಾಧಿಕಾರಿಗಳು ಎಲ್ಲಾ ರೀತಿಯ ಸಹಕಾರ ನಿಡುತ್ತಾ ಬಂದಿದ್ದೇವೆ. ಮತ್ತು ಪಕ್ಷ ಸಂಘಟನೆಗೆ, ಯಾವುದೇ ಪ್ರತಿಭಟನೆ, ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಇರುತ್ತೇವೆ ಹಾಗೂ ಕೆಪಿಸಿಸಿ ಕಾರ್ಮಿಕ ವಿಭಾಗ, ಡಿಸಿಸಿ ನೀಡಿದ ಎಲ್ಲಾ ಜವಾಬ್ದಾರಿಗಳನ್ನು ನಾವುಗಳು ಚಾಚು ತಪ್ಪದೇ ಪಾಲಿಸಿದ್ದೇವೆ. ಮುಂದೆಯೂ ಕೂಡಾ ನಾವೆಲ್ಲರೂ ಕ್ರಿಯಾಶೀಲರಾಗಿ ತಮ್ಮ ಜೊತೆಗಿದ್ದೇವೆ ಮತ್ತು ನಿಮ್ಮ ಆದೇಶಗಳನ್ನು ಕಾಯುತ್ತಿದ್ದೇವೆ ಸರ್ ಎಂದು ಮಾತನಾಡಿದರು. ಪಕ್ಷ ನಿಷ್ಠಗೆ ಮತ್ತು ಕಾಂಗ್ರೇಸ್ ಪಕ್ಷದ ಸಂಘಟನಾತ್ಮಕ ಹೋರಾಟಗಳಲ್ಲಿ ಯಾವತ್ತೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಕ್ಕಾಗಿ ನನಗೆ ಕೊಪ್ಪಳ ನಗರ ಸಭೆ ಆಶ್ರಯ ಸಮಿತಿ ಸದಸ್ಯ ಸ್ಥಾನ ನೀಡಿದ ಮಾನ್ಯ ಜನಪ್ರಿಯ ಶಾಸಕರಾದ ರಾಘವೇಂದ್ರ ಕೆ.ಹಿಟ್ನಾಳ ಹೃದಯ ಪೂರ್ವಕ ಧನ್ಯವಾದಗಳನ್ನು ತಿಳಿಸಿ, ಕೊಪ್ಪಳ ಬ್ಲಾಕ್ ಅಧ್ಯಕ್ಷರಾದ ಕೃಷ್ಣರಡ್ಡಿ ಗಲಿಬಿ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಕೊಪ್ಪಳ ನಗರ ಅಧ್ಯಕ್ಷ ಕಾಟನ್ ಪಾಷಾ ಮತ್ತು ಎಂಟು ವರ್ಷಗಳ ಹಿಂದೆ ಕಾಂಗ್ರೇಸ್ ಪಕ್ಷಕ್ಕೆ ಕರೆದುಕೊಂಡು ಬಂದು ಜನಸೇವೆ ಮಾಡಲು ಸಹಕರಿಸಿದ ಮಂಜುನಾಥ ಗೊಂಡಬಾಳ ಅವರಿಗೆ ಶ್ರೀನಿವಾಸ ಪಂಡಿತ ಸನ್ಮಾನಿಸಿ ಗೌರವಿಸುವ ಮೂಲಕ ಧನ್ಯವಾದಗಳನ್ನು ತಿಳಿಸಿದರು.
Comments are closed.