ಯಲಬುರ್ಗಾ: ಬಾಲ್ಯವಿವಾಹದಿಂದ ಬಾಲಕಿಯ ರಕ್ಷಣೆ

Get real time updates directly on you device, subscribe now.

ಯಲಬುರ್ಗಾ ತಾಲ್ಲೂಕಿನ ಗಾಣದಾಳದಲ್ಲಿ ಏ.14 ರಂದು ನಡೆಯಬೇಕಿದ್ದ ಅಪ್ರಾಪ್ತ ಬಾಲಕಿಯ ವಿವಾಹವನ್ನು ತಹಶೀಲ್ದಾರರರ ನೇತೃತ್ವದ ತಂಡದಿAದ ತಡೆಯಲಾಗಿದ್ದು, ಬಾಲಕಿಯ ರಕ್ಷಣೆ ಹಾಗೂ ಪೋಷಣೆಯ ಹಿತದೃಷ್ಠಿಯಿಂದ ಬಾಲಕಿಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು ಪಡಿಸಲಾಗಿದೆ.
ಯಲಬುರ್ಗಾ ತಾಲ್ಲೂಕಿನ ಗಾಣದಾಳ ಗ್ರಾಮದಲ್ಲಿ ಏಪ್ರಿಲ್ 14 ರಂದು ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳಿಗೆ ಬಾಲ್ಯ ವಿವಾಹವನ್ನು ಮಾಡಲಾಗುತ್ತಿದೆ ಎಂದು ಮಕ್ಕಳ ಸಹಾಯವಾಣಿ-1098/112ಗೆ ಮಾಹಿತಿಯು ಲಭ್ಯವಾದ ಹಿನ್ನೆಲೆಯಲ್ಲಿ ಬಾಲಕಿಯ ಶಾಲೆ ದಾಖಲಾತಿ ಪಡೆದು ಪರಿಶೀಲಿಸಲಾಗಿ ಬಾಲಕಿಯು ಅಪ್ರಾಪ್ತಳೆಂದು ಕಂಡುಬAತು. ಏಪ್ರಿಲ್ 13 ರಂದು ಕನಕಗಿರಿ ತಾಲೂಕಿನ ಸೋಮಸಾಗರದಲ್ಲಿರುವ ಬಾಲಕಿಯ ಮನೆಗೆ ಭೇಟಿ ಮಾಡಿ ವಿಚಾರಿಸಲಾಗಿ ಮನೆಯಲ್ಲಿ ವಯೋವೃದ್ದ ಅಜ್ಜಿಯನ್ನು ಹೊರತುಪಡಿಸಿ ಬೇರೆ ಯಾರೂ ಇಲ್ಲದೇ ಇರುವುದನ್ನು ಗಮನಿಸಿ, ಬಾಲಕಿ ಹಾಗೂ ಮನೆಯವರು ಗ್ರಾಮದ ಹೆಸರು ಹೇಳಲು ಇಚ್ಛಿಸದೇ  ಬೇರೆ ಗ್ರಾಮಕ್ಕೆ ಜಾತ್ರೆಗೆ ಹೋಗಿರುವುದಾಗಿ ತಿಳಿಸಿದಾಗ, ಬಾಲಕಿಯ ವಿವಾಹ ಮಾಡದೇ ಪೋಷಕರೊಂದಿಗೆ ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿ, ಕೊಪ್ಪಳಕ್ಕೆ ಹಾಜರುಪಡಿಸುವಂತೆ ಅಜ್ಜಿಗೆ ನೊಟೀಸ್ ನೀಡಲಾಯಿತು.
ಸ್ಥಳೀಯವಾಗಿ ವಿಚಾರಿಸಿದಾಗ ಬಾಲಕಿಯ ವಿವಾಹ ಮಾಡುವ ಕಾರಣದಿಂದಾಗಿಯೇ ವರನ ಊರಿಗೆ ಬಾಲಕಿಯನ್ನು ಕಳುಹಿಸಿರುವ ಬಗ್ಗೆ ಸ್ಥಳೀಕರು ನೀಡಿದ ಮಾಹಿತಿಯ ಮೇರೆಗೆ ತಹಶೀಲ್ದಾರರು ಯಲಬುರ್ಗಾ, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಯಲಬುರ್ಗಾ, ಅಂಗನವಾಡಿ ಮೇಲ್ವಿಚಾರಕಿಯರು, ಗ್ರಾಮ ಪಂಚಾಯತ ಸದಸ್ಯರು/ಸಿಬ್ಬಂದಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಸಿಬ್ಬಂದಿಗಳು ಮತ್ತು ಪೊಲೀಸ್ ಇಲಾಖೆಯ 112 ಸಿಬ್ಬಂದಿಗಳನ್ನೊಳಗೊAಡ ತಂಡ ತಡರಾತ್ರಿಯಾಗಿದ್ದರೂ ಹೇಗಾದರೂ ಮಾಡಿ ಬಾಲ್ಯವಿವಾಹವನ್ನು ತಡೆಯಬೇಕೆಂಬ ಉದ್ದೇಶದಿಂದ ವರನ ಮನೆಗೆ ದಿಢೀರ್ ಭೇಟಿ ನೀಡಿ ವರನ ಕುಟುಂಬದವರನ್ನು ಬಾಲಕಿಯ ಕುರಿತು ವಿಚಾರಿಸಿದಾಗ ಅಲ್ಲಿಯೂ ಬಾಲಕಿ ಇಲ್ಲದೇ ಇರುವುದು ಗಮನಕ್ಕೆ ಬಂದಿರುತ್ತದೆ.
ಆದರೆ ಅಲ್ಲಿ ಮದುವೆಯ ಎಲ್ಲಾ ಸಿದ್ದತೆಗಳು ನಡೆದಿರುವುದು ಗಮನಿಸಿದಾಗ ಬಾಲಕಿಯನ್ನು ಅಜ್ಞಾತ ಸ್ಥಳದಲ್ಲಿಟ್ಟು ಗೌಪ್ಯವಾಗಿ ವಿವಾಹ ಮಾಡುವ ಉದ್ದೇಶವಿರಬಹುದೆಂದು ತಿಳಿದು, ಬಾಲಕಿ ಅಥವಾ ಬಾಲಕಿ ಇರುವ ಸ್ಥಳದ ಕುರಿತು ವರ ಹಾಗೂ ವರನ ಕುಟುಂಬದವರಿಗೆ ಮಾಹಿತಿ ನೀಡುವಂತೆ ಕೇಳಿದಾಗ ಹಾರಿಕೆ ಉತ್ತರ ನೀಡಿ ಯಾವುದೇ ರೀತಿಯ ಸುಳಿವು ನೀಡಿರುವುದಿಲ್ಲ. ಆಗ ವರ ಹಾಗೂ ವರನ ಕುಟುಂಬದವರಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಹಾಗೂ ತಿದ್ದುಪಡಿ 2016ರ ಬಗ್ಗೆ ಮತ್ತು ಬಾಲ್ಯ ವಿವಾಹದಿಂದ ಆಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿ ಎಚ್ಚರಿಕೆ ನೀಡಲಾಯಿತು. ಬಾಲ್ಯ ವಿವಾಹ ತಡೆಯುವ ಉದ್ದೇಶದಿಂದ ಮದುವೆ ನಡೆಯುವ ಸ್ಥಳದಲ್ಲಿ ಗ್ರಾಮ ಪಂಚಾಯತ್ ಸದಸ್ಯರಿಗೆ ಅದೇ ರೀತಿ ಬಾಲಕಿಯ ಮನೆಯ ಕಡೆಗೆ ಕಂದಾಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿಗಳಿಗೆ ತೀಕ್ಷ÷್ಣ ನಿಗಾವಹಿಸಿ ಮಾಹಿತಿ ನೀಡುವಂತೆ ತಹಶೀಲ್ದಾರರು ಯಲಬುರ್ಗಾರವರು ಜವಾಬ್ದಾರಿ ವಹಿಸಿಕೊಟ್ಟು ಬಂದರು.
ಬಳಿಕ ಮರುದಿನ ಏ.14 ರಂದು  ಬೆಳಿಗ್ಗೆ 5:30ಕ್ಕೆ ಬಾಲಕಿಯ ಮನೆಯಲ್ಲಿ ಪೋಷಕರೊಂದಿಗೆ ಬಾಲಕಿ ಪ್ರತ್ಯಕ್ಷವಾದಾಗ ಅಲ್ಲಿಯೇ ಇದ್ದ ಬಾಲ್ಯ ವಿವಾಹ ನಿಷೇಧ ತಂಡದವರು ಬಾಲಕಿಗೆ 18 ವರ್ಷ ಪೂರ್ಣಗೊಳ್ಳದ ಕಾರಣ ಬಾಲಕಿಯನ್ನು ರಕ್ಷಿಸಿ, ಪೋಷಣೆ ಮತ್ತು ರಕ್ಷಣೆ ಹಿತದೃಷ್ಠಿಯಿಂದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಕೊಪ್ಪಳಕ್ಕೆ ಹಾಜರುಪಡಿಸಿಲು ಕ್ರಮವಹಿಸಿದರು. ಇಲ್ಲಿ ಬಾಲ್ಯವಿವಾಹದಿಂದ ಬಾಲಕಿಯನ್ನು ರಕ್ಷಣೆ ಮಾಡುವಲ್ಲಿ ತಹಶೀಲ್ದಾರ ಯಲಬುರ್ಗಾ, ಶಿಶುಅಭಿವೃದ್ದಿ ಯೋಜನಾಧಿಕಾರಿ ಯಲಬುರ್ಗಾ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ಹಾಗೂ ತಾಲೂಕು ಮತ್ತು ಗ್ರಾಮ ಮಟ್ಟದ ಬಾಲ್ಯವಿವಾಹ ನಿಷೇದಾಧಿಕಾರಿಗಳ ತಂಡ ಚುನಾವಣಾ ಕರ್ತವ್ಯದ ಜೊತೆಗೆ ಸಾಂದರ್ಭಿಕವಾಗಿ ಕೈಗೊಂಡ ಕಾರ್ಯಾಚರಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: