ರೈಲು ಓಡಾಟ ಪ್ರಾರಂಭಿಸಿ -ರೈಲ್ವೆ ಸಚಿವರಲ್ಲಿ ಮುಖಂಡ ಡಾ. ಬಸವರಾಜ ಎಸ್ ಕ್ಯಾವಟರ್ ಮನವಿ

0

Get real time updates directly on you device, subscribe now.

ಕೊಪ್ಪಳ: ಸುಮಾರು ವಷ೯ಗಳಿಂಧ ನಡೆಯುತ್ತಿರುವ ಗದಗ-ವಾಡಿ ಹೊಸ ರೈಲು ಮಾಗ೯ದ ಕಾಮಗಾರಿ ಕುಷ್ಟಗಿಯವರೆಗೆ ಮುಗಿದಿದ್ದು, ಕುಷ್ಟಗಿವರೆಗೆ ರೈಲು ಓಡಿಸಲು ಒತ್ತಾಯಿಸಿ, ಬಿಜೆಪಿ ಕಾಯ೯ಕಾರಣಿ ಸದಸ್ಯರಾದ ಡಾ. ಬಸವರಾಜ ಎಸ್ ಕ್ಯಾವಟರ್ ಅವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ್ ಅವರು ಕೇಂದ್ರ ರೈಲ್ವೆ ಸಚಿವರಾದ ವಿ.ಸೋಮಣ್ಣ ಅವರಿಗೆ ಗುರುವಾರ  ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದ್ದಾರೆ.

ಈ ವೇಳೆ ಮಾತನಾಡಿರುವ ಅವರು,  ಗದಗ ವಾಡಿ ರೈಲ್ವೆ ಕಾಮಗಾರಿಯು ಕುಷ್ಟಗಿಯವರೆಗೆ ಪೂಣ೯ಗೊಂಡಿದೆ. ಅಲ್ಲಿಯವರೆಗೆ ರೈಲು ಓಡಿಸಲು ಮುಂದಾಗಬೇಕು.
ಜದರಿಂದ ಕುಷ್ಟಗಿ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ, ಎಪಿಎಂಸಿ ಮಾರುಕಟ್ಟೆಗೆ, ವ್ಯಾಪಾರಕ್ಕೆಂದು ಕುಷ್ಟಗಿ ಭಾಗದ ರೈತರು, ವ್ಯಾಪಾರಿಗಳು , ಸಾವ೯ಜನಿಕರು ಹುಬ್ಬಳ್ಳಿ, ಗದಗ ಜಿಲ್ಲೆಗಳಿಗೆ ದುಬಾರಿ ವೆಚ್ಚವನ್ನು ಮಾಡಿ ಹೋಗಬೇಕಾಗಿದೆ. ರೈಲು ಓಡಿಸುವುದರಿಂದ ಅಲ್ಲಿನ ವ್ಯಾಪಾರಿಗಳಿಗೆ, ರೈತರಿಗೆ, ಸಾವ೯ಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ.
ಕಾಮಾಗಾರಿ ಪೂಣ೯ಗೊಂಡಿರುವ ಕಾರಣಕ್ಕೆ ರೈಲು ಓಡಿಸಿದರೆ ಜನರಿಗೆ ಇದರಿಂದ ಪ್ರಯೋಜನವಾಗಲಿದೆ. ಇನ್ನೂ 2025-26ನೇ ಸಾಲಿನ ಬಜೆಟ್ ನಲ್ಲಿ ಜಿಲ್ಲೆಯ ಹೊಸ ರೈಲು ಮಾಗ೯ಗಳಾಗಿರುವ ಭಾಗಲಕೋಟೆ ಗಂಗಾವತಿ, ದರೋಜಿ ಗಂಗಾವತಿ, ಆಲಮಟ್ಟಿ ಚಿತ್ರದುಗ೯ ಈ ರೈಲು ಮಾಗ೯ಗಳಿಗೆ ಬಜೆಟ್ ನಲ್ಲಿ ಅನುದಾನವನ್ನು ಒದಗಿಸಬೇಕು.
ಇದರ ಜತೆಗೆ ಕೊಪ್ಪಳ, ಹುಲಗಿ, ಮುನಿರಬಾದ್ ರೈಲು ನಿಲ್ದಾಣಗಳ ಕಾಮಗಾರಿಯನ್ನು ಆದಷ್ಟು ಬೇಗನೇ ಪೂಣ೯ಗೊಳಿಸಬೇಕು. ಇನ್ನೂ ರದ್ದಾಗಿರುವ ಬೆಳಗಾವಿ ಹೈದರಾಬಾದ್ ರೈಲನ್ನು ಪುನರಾಂಭ ಮಾಡಬೇಕು. ತಿರುಪತಿ ಕೊಲ್ಲಾಪೂರ ಮದ್ಯೆ ಗುಂತಕಲ್, ಹೊಸಪೇಟೆ, ಹುಬ್ಬಳ್ಳಿ ಮಾಗ೯ವಾಗಿ ವಂದೇ ಭಾರತ್ ರೈಲು ಪ್ರಾರಂಭಿಸಬೇಕು.
ಸಾಮಾಜಿಕವಾಗಿ , ಆಥಿ೯ಕ. ಪ್ರಗತಿಗಾಗಿ ಕುಷ್ಟಗಿ ಗೋಕಾಕ, ರಾಯಚೂರ ಬೆಳಗಾವಿ ಹೊಸ ರೈಲು ಮಾಗ೯ಗಳನ್ನು ಸವೇ೯ ಕಾಯ೯ ಪ್ರಾರಂಭಿಸಬೇಕು ಎಂದು ಮನವಿ ಸಲ್ಲಿಸಿದರು.
ಬಾಕ್ಸ್..
ಜ.14 ರಂದು ವಿ.ಸೋಮಣ್ಣ ಅವರಿಂದ ರೈಲ್ವೆ ಮೇಲ್ಸೇತುವೆ ಉದ್ಘಾಟನೆ

ಕೊಪ್ಪಳ :
ಸಾರ್ವಜನಿಕರ ಅನುಕೂಲಕ್ಕೆ ನಿರ್ಮಾಣಗೊಂಡಿರುವ ರೈಲ್ವೆ ಗೇಟ್ ನಂಬರ 66 ರಲ್ಲಿ (ಕುಷ್ಟಗಿ) ಬಳಿ ನಿರ್ಮಿಸಿರುವ ರೈಲ್ವೆ ಮೇಲ್ಸೇತುವೆಯನ್ನು ಜನೇವರಿ 14 ರಂದು ಉದ್ಘಾಟನೆ ಮಾಡಲು ದಿನಾಂಕ ನಿಗಧಿಯಾಗಿದೆ.
ಕೊಪ್ಪಳದ ಬಿಜೆಪಿ ಪಕ್ಷದ ಕಾರ್ಯಕಾರಣಿ ಸದಸ್ಯರಾದ ಡಾ.ಬಸವರಾಜ ಎಸ್ ಕ್ಯಾವಟರ್ ಅವರು ರೈಲ್ವೆ ಮೇಲ್ಸೇತುವೆಯನ್ನು ಜನರ ಅನುಕೂಲಕ್ಕಾಗಿ ಹಾಗೂ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜನರಿಗೆ ಉಪಯೋಗವಾಗಲು ಆದಷ್ಟು ಬೇಗನೆ ಉದ್ಘಾಟನೆ ಮಾಡಬೇಕು ಎಂದು ಕೇಂದ್ರ ರೈಲ್ವೆ ಸಚಿವರಾದ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು.
ಮನವಿಗೆ ಸ್ಪಂದಿಸಿದ ಸಚಿವರು ಮೇಲ್ಸೇತುವೆಯನ್ನು ಉದ್ಘಾಟನೆ ಮಾಡಲು ಒಪ್ಪಿಗೆಯನ್ನು ಸೂಚಿಸಿದ್ದಾರೆ.
ಸಚಿವರು ತಿಳಿಸುವಂತೆ ಜನೇವರಿ 14 ರಂದು ಉದ್ಘಾಟನೆಯ ದಿನಾಂಕವನ್ನು ನಿಗಧಿ ಮಾಡಲಾಗಿದೆ. ಮೇಲ್ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಸಚಿವರಾದ ವಿ.ಸೋಮಣ್ಣ ಅವರು ಕೂಡ ಭಾಗವಹಿಸಿ ಮೇಲ್ಸೇತುವೆಯನ್ನು ಉದ್ಘಾಟನೆ ಮಾಡಲಿದ್ದಾರೆ.WhatsApp Image 2025-01-09 at 4.58.27 PM (1).jpeg

Get real time updates directly on you device, subscribe now.

Leave A Reply

Your email address will not be published.

error: Content is protected !!