`ಕೇವಲ ಎರಡು ವರ್ಷದಲ್ಲಿ ಐಐಟಿ ಸಾಧನೆ ನಮ್ಮ ಗುರಿ-ಎನ್. ಸೂರಿಬಾಬು

Get real time updates directly on you device, subscribe now.

ಗಂಗಾವತಿ:
ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿರುವ ಮಕ್ಕಳು ಮೆಡಿಕಲ್, ಎಂಜಿನಿಯರಿಂಗ್ ಸೇರಿದಂತೆ ಸಾಕಷ್ಟು ವೃತ್ತಿಪರ ಕೋಸರ್್ಗಳನ್ನು ಪಡೆದುಕೊಂಡಿದ್ದಾರೆ. ಆದರೆ ಉತ್ಕೃಷ್ಟ ಸಂಸ್ಥೆಯಾದ ದೆಹಲಿಯ ಐಐಟಿಯಲ್ಲಿ ನೇರವಾಗಿ ಅವಕಾಶ ಪಡೆದುಕೊಂಡಿಲ್ಲ.
ಇದೀಗ ನಮ್ಮ ಮುಂದಿರುವ ಗುರಿ ಇಂಡಿಯನ್ ಇನ್ಸ್ಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ (ಐಐಟಿ) ನಮ್ಮ ಮಕ್ಕಳು ನೇರವಾಗಿ ಪ್ರವೇಶ ಪಡೆಯಬೇಕೆಂಬುವುದಾಗಿದ್ದು, ಇದನ್ನು ಕೇವಲ ಮುಂದಿನ ಎರಡು ಮೂರು ವರ್ಷದಲ್ಲಿ ಸಾಧಿಸುವುದಾಗಿ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್. ಸೂರಿಬಾಬು ವಿಶ್ವಾಸ ವ್ಯಕ್ತಪಡಿಸಿದರು.
ಶಿಕ್ಷಣ ಸಂಸ್ಥೆಯ ಮಕ್ಕಳು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಸಾಧಿಸುವುದಕ್ಕೆ ಪ್ರೇರಣೆ ನೀಡುತ್ತಿರುವ ಮತ್ತು ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಕಾರಣಕ್ಕೆ ಸೋಮವಾರ ಶ್ರೀರಾಮನಗರ ಗ್ರಾಮಸ್ಥರು ಹಾಗೂ ಯುವಕರು ಸೂರಿಬಾಬು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಸೂರಿಬಾಬು, ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಮುನ್ನೆಡಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಈ ಹಿಂದೆ ಶಿಕ್ಷಣ ಸಂಸ್ಥೆಯನ್ನು ಹೇಗೆ ಸ್ಥಾಪನೆ ಮಾಡಿಕೊಂಡು ಬಂದಿದ್ದೇವೆ ಎಂಬುವುದು ಗೊತ್ತಾಗದಂತೆ ದಿನಗಳ ಕಳೆದು ಹೋಗಿವೆ.
ಆದರೆ ಶಿಕ್ಷಣ ಸಂಸ್ಥೆ ಬೆಳೆದಂತೆಲ್ಲಾ ಅದರೊಂದಿಗೆ ಸಮಸ್ಯೆಗಳೂ ಹೆಚ್ಚುತ್ತಿವೆ. ನಾವು ಶಿಕ್ಷಣ ಸಂಸ್ಥೆಯನ್ನು ಕಾನೂನು ಬದ್ಧವಾಗಿಯೇ ನಿರ್ವಹಿಸಿಕೊಂಡು ಹೋಗುತ್ತಿದ್ದೇವೆ. ಆದಾಗ್ಯೂ ಕೆಲ ಸಂಘಟನೆಗಳು, ವ್ಯಕ್ತಿಗಳ ಸಲ್ಲದ ಕಾರಣಕ್ಕೆ ತೊಂದರೆ ನೀಡುವಂತ ಕೆಲಸ ಮಾಡುತ್ತಿದ್ದಾರೆ.
ಇದು ಸರಿಯಲ್ಲ. ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಏನಾದರೂ ಲೋಪ-ದೋಷಗಳಿದ್ದರೆ ಪಾಲಕರು ನಮಗೆ ಸೂಕ್ತ ಸಲಹೆ, ಸೂಚನೆ ನೀಡಿದರೆ ಮುಕ್ತವಾಗಿ ಸ್ವೀಕರಿಸಿ ಆಡಳಿತದಲ್ಲಿ ಅಳವಡಿಸಿಕೊಂಡು ಹೋಗುತ್ತೇವೆ. ಸರಿಪಡಿಸುವ ಕೆಲಸ ನಿಮ್ಮಿಂದ ಆಗಬೇಕು ಎಂದು ಪಾಲಕರಿಗೆ ಮನವಿ ಮಾಡಿದರು.
ಶ್ರೀರಾಮನಗರದ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಕ್ಯಾಂಪಸ್ ಸಧ್ಯಕ್ಕೆ ಕೊಪ್ಪಳ ಜಿಲ್ಲಾ ವ್ಯಾಪ್ತಿಯನ್ನು ಮೀರಿ ಕಲ್ಯಾಣ ಕನರ್ಾಟಕಕ್ಕೆ ವಿಸ್ತರಿಸಿದೆ. ರಾಜ್ಯದ ಮೈಸೂರು, ಬೆಂಗಳೂರು, ಮಂಡ್ಯ, ದಾವಣಗೆರೆ, ಧಾರವಾಡ, ಚಿತ್ರದುರ್ಗ, ತೂಮಕೂರು ಜಿಲ್ಲೆಯ ವಿದ್ಯಾಥರ್ಿಗಳು ನಮ್ಮಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ಶ್ರೀರಾಮನಗರದ ವಿದ್ಯಾನಿಕೇತಕ ಶಿಕ್ಷಣ ಸಂಸ್ಥೆಯನ್ನು ರಾಜ್ಯದಲ್ಲಿ ನಂಬರ್-1 ಮಾಡುತ್ತೇವೆ. ರಾಷ್ಟ್ರಮಟ್ಟದ ಗಮನ ಸೆಳೆಯುವಂತೆ ರೂಪಿಸುವುದು ನಮ್ಮ ಮಕ್ಕಳನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶವಿದೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ಪತ್ರಕರ್ತ ಶ್ರೀನಿವಾಸ್ ಎಂ.ಜೆ. ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 18 ವರ್ಷದಿಂದ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಕಳೆದ ಹಲವು ವರ್ಷದಿಂದ ಶೈಕ್ಷಣಿಕ, ಸಾಮಾಜಿಕ ಕಾರ್ಯದ ಮೂಲಕ ರಾಜ್ಯಮಟ್ಟದಲ್ಲಿ ಸಂಸ್ಥೆ ಗಮನ ಸೆಳೆಯುತ್ತಿದೆ.
ಅಲ್ಲದೇ ರಾಜ್ಯದ ನಾನಾ ಜಿಲ್ಲೆಯ ಮಕ್ಕಳನ್ನು ಶ್ರೀರಾಮನಗರಕ್ಕೆ ಕರೆತಂದು ಭವಿಷ್ಯ ರೂಪಿಸಿಕೊಡುತ್ತಿದೆ. ಒಂದು ಕಾಲದಲ್ಲಿ ಶ್ರೀರಾಮನಗರದ ಮಕ್ಕಳು ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆಯಲು ನೆರೆ-ಹೊರೆಯ ಊರಿಗೆ ಹೋಗುತ್ತಿದ್ದರು. ಆದರೆ ಇದೀಗ ಶ್ರೀರಾಮನಗರವನ್ನು ವಿದ್ಯಾಕಾಶಿಯನ್ನಾಗಿಸುತ್ತಿರುವುದು ನಮ್ಮೂರಿಗೆ ಹೆಮ್ಮೆಯ ವಿಷಯ ಎಂದರು.
ಗಂಗಾವತಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮೊಹಮ್ಮದ್ ರಫಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕರಟೂರಿ ಶ್ರೀನಿವಾಸ, ಮಾಜಿ ಸದಸ್ಯ ರವಿಕುಮಾರ ಎಂ.ಜೆ ಸೇರಿದಂತೆ ಹಲವರು ಮಾತನಾಡಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಶ್ರಮಿಸುತ್ತಿರುವ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಚಂದ್ರಮೋಹನ, ಪ್ರಾಂಶುಪಾಲಕ ಜಗನ್ನಾಥ್ ರಾವ್, ಹಾಗೂ ಶೈಕ್ಷಣಿಕ ನಿದರ್ೇಶಕ ಶ್ರೀನಿವಾಸ ಚೌದರಿ ಅವರನ್ನು ಗ್ರಾಮಸ್ಥರು ಈ ಸಂದಭರ್ದದಲ್ಲಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಸಿ.ಎಚ್. ರಾಮಕೃಷ್ಣ, ಭಾಸ್ಕರ್ ರೆಡ್ಡಿ, ವೆಂಕಟೇಶ ಎಂ.ಜೆ, ಪ್ರಸಾದ್, ಸುಮಂಗಲ, ಉಪ್ಪಾರ ವೆಂಕಟೇಶ, ಚನ್ನಬಸವ ಜಕ್ಲಿ, ಚಿಕನ್ ಪಕೋಡಾ ಕಾಶಿ, ಮುಳ್ಳಪೂಡಿ ಶ್ರೀನಿವಾಸ, ಎನ್. ರಾಜೇಶ, ಆಂಜನೇಯ ಈಳಿಗೇರ ಸೇರಿದಂತೆ ಹಲವರು ಇದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: