ದೇಶದ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆಯಾಗಿದೆ-ಕ್ಯಾವಟರ್

Get real time updates directly on you device, subscribe now.

ಕೇಂದ್ರ ಸರ್ಕಾರದಿಂದ ಆರೋಗ್ಯ ಕ್ಷೇತ್ರ ವೃದ್ಧಿ- ಕ್ಯಾವಟರ್

ಕೊಪ್ಪಳ:
ಸ್ವಾಸ್ಥ್ಯ ಸುರಕ್ಷಾ ಯೋಜನೆ, ಆಯುಷ್ಮಾನ ಭಾರತ, ಜನೌಷಧಿ ಕೇಂದ್ರಗಳು, ನೂತನ ಏಮ್ಸ‌ಗಳು ಹೀಗೆ ಆರೋಗ್ಯ ಕ್ಷೇತ್ರವನ್ನು ಗಣನೀಯವಾಗಿ ವೃದ್ದಿಗೊಳಿಸುತ್ತಿರುವ ಪ್ರಧಾನಿ ಮೋದಿಯವರಿಗೆ ಮತ ನೀಡಿ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಕರೆ ನೀಡಿದರು.
ನಗರದ ಶ್ರೀ ಕೇತೆಶ್ವರ ಕಲ್ಯಾಣ ಮಂಟಪದಲ್ಲಿ ನಡೆದ “ಡಾ.ಶ್ಯಾಮ್ ಪ್ರಸಾದ ಮುಖರ್ಜಿ ಮತ್ತು ಅಟಲ್ ಬಿಹಾರಿ ವಾಜಪೇಯಿ” ಮಹಾಶಕ್ತಿ ಕೇಂದ್ರಗಳ ಸಭೆಯಲ್ಲಿ ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸುಧಾರಣಾ ನೀತಿಯಿಂದ  ಬಿಜೆಪಿ ಅವಧಿಯಲ್ಲಿ ದೇಶದ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆಯಾಗಿದೆ. ಕೋವಿಡ್ ಸಂದರ್ಭದಲ್ಲಿ ಇಡೀ ವಿಶ್ವವೇ ಆತಂಕದಲ್ಲಿತ್ತು. ದೇಶದ ಜನತೆಗೆ ಧೈರ್ಯ ತುಂಬಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಕೋವಿಡ್ ಲಸಿಕೆಗೆ ವಿದೇಶಗಳ ಮೇಲೆ ಅವಲಂಬನೆಯಾಗದೇ ದೇಶದ ವಿಜ್ಞಾನಿಗಳಿಂದ ಲಸಿಕೆ ತಯಾರಿಸಿ ದೇಶದ ಎಲ್ಲ ಜನತೆಗೆ ಉಚಿತವಾಗಿ ನೀಡಿದ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.
ಈ ಸಂದರ್ಭದಲ್ಲಿ ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷ ಶರಣಯ್ಯ ಹಿರೇಮಠ, ಮಲ್ಲಪ್ಪ ಸಜ್ಜನ, ನಗರ ಮಂಡಲ ಅಧ್ಯಕ್ಷ ರಮೇಶ ಕವಲೂರು, ಮಾಜಿ ಸಂಸದ ಶಿವರಾಮೇಗೌಡ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯೆ ಸಿ.ವಿ.ಚಂದ್ರಶೇಖರ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್, ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ ಭೂಮರೆಡ್ಡಿ, ಪ್ರಮುಖರಾದ ಭೂಸನೂರಮಠ, ಕೆ.ಜಿ.ಕುಲಕರ್ಣಿ, ವಿರೇಶ ಮಹಾಂತಯ್ಯಮಠ, ನಗರಸಭೆ ಸದಸ್ಯ ಮಲ್ಲಪ್ಪ ಕವಲೂರು, ಮುಖಂಡರಾದ ರಾಜು ಬಾಕಳೆ, ಡಾ.ಗೋವಿನಕೊಪ್ಪಳ, ಗೀತಾ ಮುತ್ತಾಳ, ಮಹಾಲಕ್ಷ್ಮಿ ಕಂದಾರಿ, ಕೀರ್ತಿ ಪಾಟೀಲ, ಶೋಭಾ ನಗರಿ, ರಾಘವೇಂದ್ರ ಪಾನಘಂಟಿ, ಡಾ.ಶಿವನಗೌಡ, ಚಂದ್ರು ಕವಲೂರು ಹಾಗೂ ಉಭಯ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Get real time updates directly on you device, subscribe now.

Comments are closed.

error: Content is protected !!