ಮಕ್ಕಳಿಗಾಗಿ ಸಂವಿಧಾನ- ಪುಸ್ತಕ ವಿತರಿಸುವ ಮೂಲಕ ಮಗುವಿನ ನಾಮಕರಣ
ಭಾಗ್ಯನಗರ : ಬಾಬಾ ಸಾಹೇಬ್ ಡಾ. ಬಿ ಆರ್ .ಅಂಬೇಡ್ಕರ್ ಅವರ ಜಯಂತಿಯಂದು ತಮ್ಮ ಮಗನಿಗೆ ನಾಮಕರಣ ನೆರವೇರಿಸಿದ ಭಾಗ್ಯನಗರದ ದಂಪತಿಗಳು ಮಕ್ಕಳಿಗಾಗಿ ಸಂವಿಧಾನ ಎನ್ನುವ ಪುಸ್ತಕವನ್ನು ವಿತರಿಸುವ ಮೂಲಕ ವಿಶಿಷ್ಟವಾಗಿ ನಾಮಕರಣ ಕಾರ್ಯಕ್ರಮ ನೆರವೇರಿಸಿದರು.
ಭಾಗ್ಯನಗರ ಪಟ್ಟಣದ
ಡಾ. ಬಿ ಆರ್ ಅಂಬೇಡ್ಕರ್ ಸಮಗ್ರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿರುವ ಉದ್ಯಮಿ ಚಂದ್ರು ಇಟ್ಟಂಗಿ- ಪ್ರಣತಿ ದಂಪತಿಗಳು ಇಂದು ತಮ್ಮ ಮಗ ಮಶಾಂಕ್ ನ ನಾಮಕರಣ ಕಾರ್ಯಕ್ರಮ ನೆರವೇರಿಸಿದರು.
ಕಾರ್ಯಕ್ರಮಕ್ಕೆ ಬಂದಂತಹ ಮಕ್ಕಳಿಗೆ ಹಾಗೂ ಅತಿಥಿಗಳಿಗೆ ಹೋರಾಟಗಾರ್ತಿ ವಾಣಿ ಪೆರಿಯೋಡಿ ಬರೆದಿರುವ ಮಕ್ಕಳಿಗಾಗಿ ಸಂವಿಧಾನ ಎನ್ನುವ ಪುಸ್ತಕವನ್ನು ವಿತರಿಸುವ ಮೂಲಕ ವಿಶಿಷ್ಟವಾಗಿ ನಾಮಕರಣ ಕಾರ್ಯಕ್ರಮ ನೆರವೇರಿಸಿದರು. ಕಾರ್ಯಕ್ರಮಕ್ಕೆ ಬಂದಿದ್ದ ಅತಿಥಿ ಗಣ್ಯರು ಪುಸ್ತಕ ವಿತರಣೆಯ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು. ಮಕ್ಕಳು ಪುಸ್ತಕ ಪಡೆದು ಸಂಭ್ರಮಿಸಿದರು.
Comments are closed.