ಯತ್ನಟ್ಟಿ ಶ್ರೀ ಬಸವರಾಜೇಶ್ವರ ಸ್ವಾಮಿಗಳ ರಥೋತ್ಸವ 

Get real time updates directly on you device, subscribe now.

ಕೊಪ್ಪಳ : ಪಕ್ಕದ ಯತ್ನಟ್ಟಿ ಗ್ರಾಮದಲ್ಲಿ  ಅದಿತ್ಯವಾರದಂದು  ಶ್ರೀ.ಮ.ನಿ‌.ಪ್ರ.ಸ್ವ.  ಶ್ರೀ ಬಸವರಾಜೇಶ್ವರ ಸ್ವಾಮಿಗಳ ಜಾತ್ರಾ ಮುಹೋತ್ಸವ  ಮತ್ತು  ಧರ್ಮಸಭೆಯ ಸಾನಿದ್ಯವನ್ನು   ಡಾ. ಶ್ರೀ . ಹಿರಿಶಾಂತವೀರಸ್ವಾಮಿಗಳು ಗವಿಸಿದ್ದೇಶ್ವರ ಮಠ
ಹೂವ್ವಿನಹಡಗಲಿಯವರು ವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಮರುಳಾರಾಧ್ಯ ಶಿವಾರ್ಯ ಸ್ವಾಮಿಗಳು ಸಿದ್ದೇಶ್ವರಮಠ  ಅಳವಂಡಿಯವರು ಭಕ್ತರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಬಸವರಜೇಶ್ವರಸ್ವಾಮಿಗಳ ಮಠದ ಮಹತ್ವದ ಬಗ್ಗೆ ಆಶೀರ್ವಾದ ವಚನ ನೀಡಿದರು.

ಶ್ರೀ ಬಸವರಾಜೇಶ್ವರ ಸ್ವಾಮಿಗಳ  ಪರಮ ಭಕ್ತರಾದ ಡಾ. ಷಣ್ಮುಖಯ್ಯ ತೋಟದ  ಸಾಹಿತಿ. ಕಿರುತೆರೆ ಕಲಾವಿದ, ವಕೀಲರು ಸಭೆಯನ್ನು ಉದ್ದೇಶಿಸಿ ಮಾತಾಡುತ್ತ ಸ್ವಾಮಿಗಳ ತಪಸ್ಸು ಮತ್ತು ಕಲಿಯುಗದ  ದೇವರ ಪವಾಡಗಳನ್ನು ಮಹಿಮೆಯನ್ನು ಭಕ್ತಿರಿಗೆ ತಿಳಿಸಿ ಧಾರ್ಮಿಕ ಸಮಾರಂಬದ ಜೊತೆಗೆ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವುದರ ಮುಖಾಂತಾರ ಸಮಾಜ ತಿದ್ದಬಹುದಂದು ಹೇಳಿದರು ವೇದಿಕೆಯಲ್ಲಿ ಮೈನಹಳ್ಳಿ ಗ್ರಾಮದ  ಪತ್ರಪ್ಪ ಮೂಲಿಮನಿ.   ಎಲ್.ಎಫ್.ಪೋ, ಪಾಟೀಲ, ಈಶಪ್ಪ ಮಾಸ್ತರ ಓಜಿನಹಳ್ಳಿಯವರಿದ್ದರು.  ಕಾರ್ಯಕ್ರಮದ ನಿರೂಪಣೆ   ಸಿದ್ದಣ್ಣನವರು ಮಾಡಿದರು

  ಕಾರ್ಯಕ್ರಮದ ನಂತರ  ಶ್ರೀ ಶ್ರೀ ಬಸವರಾಜೇಶ್ವರ ಸ್ವಾಮಿಗಳ ರಥೋತ್ಸವ ವಿಜ್ರಮಣೆಯಿಂದ ಜರುಗಿತು.  ಮತ್ತು ಸುತ್ತ ಮುತ್ತಲಿನ ಮೈನಹಳ್ಳಿ. ಓಜನಹಳ್ಳಿ ಕಾಮನೂರು ಗ್ರಾಮದ ಸಾವಿರಾರು ಭಕ್ತರು ಭಾಗವಹಿಸಿದ್ದರು . ಮಠಕ್ಕೆ ಬಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು ಜೊತೆಗೆ ಟ್ರಸ್ಟ ಕಮೀಟಿಯವರು ಎಲ್ಲಾ ವ್ಯವಸ್ಥೆ ಮಾಡಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: