ಡಾ. ಬಿ.ಆರ್ ಅಂಬೇಡ್ಕರ್ ಜನ್ಮದಿನಾಚರಣೆ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ
ಗಂಗಾವತಿ: ನಗರದ ವಾರ್ಡ್ ೨೭ ಹಿರೇಜಂತಕಲ್‌ದಲ್ಲಿ ಇಂದು ಅಂಬೇಡ್ಕರ್ ಜಯಂತಿ ಅಂಗವಾಗಿ ಬಸವೇಶ್ವರ ಯುವ ಸಮಿತಿ ಮತ್ತು ಚಲವಾದಿ ಸಮಾಜದ ವತಿಯಿಂದ ಬೌದ್ಧ ಧರ್ಮದ ವಿಧಿ ವಿಧಾನಗಳು ಪ್ರಕಾರ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಬಂತಿಜಿ ಬೌದ್ಧ ಧರ್ಮದ ಪಂಚಶೀಲಗಳನ್ನು ಪಠಣ ಮಾಡಿದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಹಿರಿಯ ಮುಖಂಡ ಮತ್ತು ಬಸವ ಸೇವಾ ಸಮಿತಿ ಗೌರವಾಧ್ಯಕ್ಷ ಹುಲುಗಪ್ಪ ಮಾಗಿ ಮಾತನಾಡಿ, ಈ ಸಾಮೂಹಿಕ ವಿವಾಹ ಮಾಡುವುದರಿಂದ ಬಡವರ ಮತ್ತು ಕೂಲಿಕಾರ್ಮಿಕರಿಗೆ ಅರ್ಥಿಕ ಹೊರೆಯನ್ನು ಕಡಿಮೆ ಮಾಡಲು ಇದೊಂದು ಸಣ್ಣ ಪ್ರಯತ್ನವಾಗಿದೆ ಮತ್ತು ಯಾವುದೇ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಸರಳವಾಗಿ ವಿವಾಹವನ್ನು ಮಾಡಲಾಯಿತು ಮತ್ತು ಈ ಸರಳ ವಿವಾಹದಿಂದ ಬಡ ಸಮಾಜದ ಕುಟುಂಬಗಳಿಗೆ ಸರಕಾರದಿಂದ ನೆರವು ಕೂಡ ಆರ್ಥಿಕ ಧನ ಸಹಾಯ ಮಾಡಿದಂತಾಗುತ್ತದೆ ಎಂದು ಹೇಳಿದರು.
ಅದೇರೀತಿ ಹುಸೇನಪ್ಪ ಹಂಚಿನಾಳ ವಕೀಲರು ಮಾತನಾಡಿ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನದಂದು ಇಂತಹ ಸಾಮೂಹಿಕ ಕಾರ್ಯಕ್ರಮಗಳು ಮಾಡುವುದರಿಂದ ಒಂದು ನಮ್ಮ ಸಮಾಜಕ್ಕೆ ಉತ್ತಮವಾದ ಸಂದೇಶ ಕೊಟ್ಟಂತಾಗುತ್ತದೆ ಮತ್ತು ಈ ಸರಳ ಯುಗದಿಂದ ಬಡವರಿಗೆ ಆರ್ಥಿಕ ನೆರವು ನೀಡಿದಂತಾಗುತ್ತದೆ ಎನ್ನುವ ಮೂಲಕ ಅವರ ತತ್ವ ಸಿದ್ಧಾಂತದ ಬಗ್ಗೆ ವಧುವರರಿಗೆ ತಿಳಿಸಿಕೊಟ್ಟರು. ಪ್ರತಿ ವ? ಇಂತಹ ಕಾರ್ಯಕ್ರಮ ಮಾಡುವುದರಿಂದ ಅಂಬೇಡ್ಕರ್ ಚಿಂತನೆ ಮತ್ತು ಆದರ್ಶ ಪಾಲಿಸದಂತೆ ಎಂದು ಹೇಳಿದರು. ನವ ಜೋಡಿಗಳು ಜೀವನದಲ್ಲಿ ಸುಖವಾಗಿ ನೆಮ್ಮದಿಯಿಂದ ಬಾಳಲಿ ಎಂದರು ಅಶಿರ್ವಾದ ಮಾಡಿದರು.
ಈ ಸಂದರ್ಭದಲ್ಲಿ ಬೌದ್ಧ ಧರ್ಮದ ಅನುಯಾಯಿಯಾದ ಮಲ್ಲಪ್ಪ ದೇವದುರ್ಗ, ಹರಿಯಪ್ಪ ಕೂರಿ ಬಸವ ಸೇವಾ ಸಮಿತಿ ಅಧ್ಯಕ್ಷರು. ಬಿಮಣ್ಣ ಕರಿಮೂತಿ, ರೇವಣಪ್ಪ, ರವಿ ಆರತಿ, ಸಮಾಜದ ಹಿರಿಯ ಮುಖಂಡರಾದ ಹುಲಗಪ್ಪ ಮಾಸ್ತರ್, ವೀರೇಶ ಆರತಿ, ತಿಮ್ಮಣ್ಣ ಮುಂಡಾಸ್ತ ವಕೀಲರು, ಅಂಜಿನಯ್ಯ ಸೋಮನಾಳ, ಲೊಕಪ್ಪ ಸೇರಿದಂತೆ ಅನೇಕ ಮುಖಂಡರು, ನವಜೋಡಿಗಳು ಮತ್ತು ಇತರರು ಇದ್ದರು.
Comments are closed.