ಜನರಿಗೆ ಅನಗತ್ಯ ತೊಂದರೆ ನೀಡದೆ ನಿಸ್ವಾರ್ಥ ಸೇವೆ ಮಾಡಬೇಕು ; ಶಾಸಕ ದೊಡ್ಡನಗೌಡ ಪಾಟೀಲ್
ಕುಷ್ಟಗಿ.ಜೂ.30; ವೈದ್ಯರು ಸೇರಿದಂತೆ ಎಲ್ಲಾ ವರ್ಗದ ಸಿಬ್ಬಂದಿ ವರ್ಗದವರು ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯವಹಿಸಬೇಡಿ ಕೆಲಸದ ವಿಷಯದಲ್ಲಿ ಯಾವುದೇ ಮುಲಾಜಿಲ್ಲ, ನಿರ್ಲಕ್ಷ್ಯ ಕಂಡು ಬಂದರೆ ಸೂಕ್ತ ಕ್ರಮ ಎದುರಿಸಬೇಕಾಗುತ್ತದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಎಚ್ಚರಿಸಿದರು.
ಶುಕ್ರವಾರ ಮಧ್ಯಾಹ್ನ ಇಲ್ಲಿನ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಹಾಗೂ ಸಿಬ್ಬಂದಿ ವರ್ಗದವರು ಸಭೆಯನ್ನು ತೆಗೆದುಕೊಂಡು ಮಾತನಾಡಿದ ಅವರು ಸರಕಾರಿ ಆಸ್ಪತ್ರೆಗೆ ಬರುವ ರೋಗಿಗಳು ತುಂಬಾ ಬಡವರಾಗಿದ್ದಾರೆ.
ಸರ್ಕಾರದ ಸಂಬಳ ಪಡೆದು ನಾವು ನೀವೆಲ್ಲರೂ ಉತ್ತಮ ರೀತಿ ಕೆಲಸ ಮಾಡಬೇಕು.
ಸರಕಾರದ ಕೆಲಸ ದೇವರ ಕೆಲಸ ಎಂದು ನಂಬಿ ಕೆಲಸ ಮಾಡಬೇಕು.
ಜನರಿಗೆ ಅನಗತ್ಯ ತೊಂದರೆ ನೀಡದೆ ನಿಸ್ವಾರ್ಥ ಸೇವೆ ಮಾಡಬೇಕು ಎಂದು ವೈದ್ಯರಿಗೆ ತಾಕೀತು ಮಾಡಿದರು.
ಕೆಲಸದ ಒತ್ತಡದ ಇದೆ ಎಂದು ಕರ್ತವ್ಯಕ್ಕೆ ಯಾವತ್ತು ದ್ರೋಹ ಮಾಡಬಾರದು.
ವೈದ್ಯರು ಸಂಖ್ಯೆ ತೀರಾ ಕಡಿಮೆ ಇದೆ ಸುಗಮವಾಗಿ ಕರ್ತವ್ಯ ನಿರ್ವಹಿಸಲು ತುಂಬಾ ತೊಂದರೆ ಉಂಟಾಗಿದೆ.
ನಿವೃತ್ತ ಹೊಂದಿದ ಡಾ.ಚಂದ್ರಶೇಖರ ಮಂತ್ರಿ ಮರಳಿ ಕಾಂಟ್ಯಾಕ್ಟ್ ಬೇಸಿಕ್ ನಲ್ಲಿ ಮರಳಿ ಸೇವೆಗೆ ಅವಕಾಶ ಕಲ್ಪಿಸಬೇಕು.
ಸದ್ಯದಲ್ಲೇ ಇರುವ ಕಟ್ಟಡ ತುಂಬಾ ಹಳೆಯದಾಗಿದೆ ಸರಕಾರ ಸಾಕಷ್ಟು ಹಣ ಕರ್ಚು ಮಾಡಿ ನವೀಕರಣ ಮಾಡಲಾಗಿದೆ.
ಅಲ್ಲಲ್ಲಿ ಬಿರುಕು ಬಿಟ್ಟು ಮಳೆ ಬಂದ ಸಂದರ್ಭದಲ್ಲಿ ನೀರು ಸೊರಕೆಯಾಗುತ್ತದೆ ಇದರಿಂದ ರೋಗಿಗಳಿಗೆ ತುಂಬಾ ತೊಂದರೆ ಉಂಟಾಗುತ್ತದೆ ಎಂದು ಹೇಳಿದರು.
ಪ್ರತಿ ತಿಂಗಳು ಸರಾಸರಿ 200 ಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ.
ಅರವಳಿಕೆ, ಕಣ್ಣಿನ ವೈದ್ಯರು, ಮಹಿಳಾ ತಜ್ಞರ, ಸೂಪರ ವೈಸರ್, ನಾನ್ ಕ್ಲಿನಿಕಲ್ ಸ್ಟಾಪ್, ತುಂಬಾ ಅವಶ್ಯಕತೆ ಇದೆ ಕೂಡಲೇ ಭರ್ತಿಗೆ ಕ್ರಮ ಕೈಗೊಳ್ಳಲು ಶಾಸಕರ ಗಮನಕ್ಕೆ ತಂದರು.
32 ಹುದ್ದೆಗಳ ಪೈಕಿ 19 ಹುದ್ದೆಗಳು ಖಾಲಿ ಇವೆ ಕೂಡಲೇ ಭರ್ತಿ ಮಾಡಬೇಕು ಎಂದು ಡಾ.ಕೆ.ಎಸ್ ರೆಡ್ಡಿ ಶಾಸಕರಿಗೆ ಮನವಿ ಮಾಡಿದರು.
ಹೋಮಿಯೋಪತಿ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ ಆದರೇ ತಾಲೂಕಿನ ಜನರು ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.
ಬಾಣಂತಿ ಹಾಗೂ ಒಳರೋಗಿಗಳ ವಿಭಾಗದಲ್ಲಿ ಶೌಚಾಲಯ ಸಮಸ್ಯೆ ಇದೆ.
ಲೇಬರ್ ರೋಂ ನವೀಕರಣದ ಕೆಲಸವನ್ನು ನಿರ್ಮಿತಿ ಕೇಂದ್ರದ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಡಾ.ರೆಡ್ಡಿ ಶಾಸಕರ ಗಮನ ಸೆಳೆದರು.
ಡಾ.ಚಂದ್ರಕಲಾ ಅವರು ರೋಗಿಗಳನ್ನು ಬೇರೆ ಕಡೆ ಸಿಪಾರಸ್ಸು ಮಾಡುತ್ತಾರೆ ಎಂದು ಆರೋಪ ಕೇಳಿ ಬರುತ್ತಿದೆ ಇನ್ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳಬೇಕು ಎಂದು ಡಾ.ಚಂದ್ರಕಲಾ ಅವರಿಗೆ ಶಾಸಕರು ತಾಕೀತು ಮಾಡಿದರು.
ಇದಕ್ಕೆ ಉತ್ತರಿಸಿದ ಡಾ.ಚಂದ್ರಕಲಾ ಅವರು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಸಂಖ್ಯೆ ಕಡಿಮೆ ಇದೆ ದಿನದ 24 ತಾಸು ಕೆಲಸ ಮಾಡಿದರು ಕಡಿಮೆ.
ಕೆಲಸದ ಒತ್ತಡ ತುಂಬಾ ಇದೆ ಮುಂದಿನ ದಿನಮಾನಗಳಲ್ಲಿ ತೊಂದರೆ ಎದುರಿಸಬೇಕಾಗುತ್ತದೆ ಕಾರಣ ಶಾಸಕರು ವೈದ್ಯರ ನೇಮಕಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಡಾ.ಕೆ.ಎಸ್ ರೆಡ್ಡಿ, ಪ್ರಸೂತಿ ತಜ್ಞೆ ಡಾ. ಚಂದ್ರಕಲಾ, ದಂತ ವೈದ್ಯೆ ಶ್ರೀ ವಿದ್ಯಾ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಾಲಾಜಿ ಬಳಿಗಾರ, ಕಿವಿ,ಮೂಗು, ಗಂಟಲು ತಜ್ಞೆ ಡಾ.ವಿಜಯಲಕ್ಷ್ಮೀ, ಸಹಾಯಕ ಆಡಳಿತ ಅಧಿಕಾರಿ ಸೈಯದ್ ರಹೀಮ್ ಸಾಬ, ಪ್ರ.ದ.ಸಹಾಯಕರಾದ ಕಾಸೀಂಸಾಬ ಕಲಾಲಬಂಡಿ, ಗಿರೀಶ್ ಕುಂಬಾರ, ರಕ್ತ ಪರೀಕ್ಷಕ ಗವಿಸಿದ್ದಪ್ಪ ಉಪ್ಪಾರ, ಶಾಮಲಾ ನಾಯಕ್, ಶರಣಮ್ಮ, ಭಾಗ್ಯಶ್ರೀ, ಹಿರಿಯ ಪಾರ್ಮಾಸಿಸ್ಟ್ ಅಧಿಕಾರಿ ಮರಿಶಾಂತವೀರ ಸ್ವಾಮಿ, ಪಾರ್ಮಾಸಿಸ್ಟ್ ಆಫೀಸರ್ ಶಿಲ್ಪಾ ಪಾಟೀಲ್ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ನಂತರ ನೂತನವಾಗಿ ಆಯ್ಕೆಯಾದ ಶಾಸಕ ದೊಡ್ಡನಗೌಡ ಪಾಟೀಲ್ ಅವರಿಗೆ ಇಲ್ಲಿನ ಸಾರ್ವಜನಿಕ ಆಸ್ಪತ್ರೆ ವೈದ್ಯರು ಸೇರಿದಂತೆ ಸಿಬ್ಬಂದಿ ವರ್ಗದವರು ಗೌರವಿಸಿ ಸನ್ಮಾನಿಸಿದರು
Comments are closed.