ಭಾಗ್ಯನಗರ ಸಂಭ್ರಮದ ರಂಜಾನ್ ಹಬ್ಬ ಆಚರಣೆ

Get real time updates directly on you device, subscribe now.

 

ಭಾಗ್ಯನಗರ : ಪಟ್ಟಣದ ಮುಸ್ಲಿಂ ಬಾಂಧವರು ಸಡಗರ ಹಾಗೂ ಸಂಭ್ರಮದಿಂದ ಈದ್ ಉಲ್ ಪಿತ್ರ್ ರಂಜಾನ್ ಹಬ್ಬವನ್ನು ಆಚರಿಸಿದರು. ಬೆಳಿಗ್ಗೆ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗ್ಯನಗರ ಹಾಗೂ ಸುತ್ತಮುತ್ತಲಿನ ಗ್ರಾಮದ ಮುಸ್ಲಿಂ ಬಾಂಧವರು ಆಗಮಿಸಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಭೀಕರ ಬರಗಾಲ ಕಾಡುತ್ತಿರುವ ಹಿನ್ನೆಲೆಯಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಭಾಗ್ಯನಗರದ ಈದ್ಗಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗ್ಯನಗರ ಜಾಮಿಯಾ ಮಜೀದ್ ಕಮಿಟಿಯ ಅಧ್ಯಕ್ಷರಾದ ಇಬ್ರಾಹಿಂಸಾಬ್ ಬಿಸರಳ್ಳಿ, ಪಟ್ಟಣ ಪಂಚಾಯತ್ ಸದಸ್ಯರಾದ ಹೊನ್ನೂರು ಸಾಬ್ ಬೈರಾಪುರ , ಉಪಾಧ್ಯಕ್ಷ ಆಶ್ರಯ ಸಮಿತಿ ಸದಸ್ಯರಾದ ಮೌಲಾ ಹುಸೇನ್ ಹಣಗಿ, ಕಬೀರ್ ಸಾಬ್ ಬೈರಾಪುರ , ರಶೀದ್ ಸಾಬ್, p. ಶರಿಪ್ಸಾಬ್, ಎಫ್ ಎ ನೂರ ಭಾಶಾ, ಹಾಜಿ ಋತಬುದ್ದೀನ್ ಸಾಬ್, ಮೆಹಬೂಬ್ ಬಳಿಗಾರ್ , ಬಾಬಾ ಪಟೇಲ್, ನೌಜವನ್ ಕಮಿಟಿ ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.

 

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಿರುವ ಇಬ್ರಾಹಿಂಸಾಬ್ ಬಿಸರಳ್ಳಿ ಹಾಗೂ ಆಶ್ರಯ ಸಮಿತಿ ಸದಸ್ಯರಾಗಿ ಆಯ್ಕೆಯಾಗಿರುವ ಮೌಲಾ ಹುಸೇನ್ ಹಣಗಿ ಯವರನ್ನು ಸಮಾಜದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು

Get real time updates directly on you device, subscribe now.

Comments are closed.

error: Content is protected !!