ಕುಷ್ಟಗಿ ಪಟ್ಟಣ ಹಾಗೂ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಬೃಹತ್ ಮತದಾನ ಜಾಗೃತಿ

Get real time updates directly on you device, subscribe now.

ಲೋಕಸಭಾ ಚುನಾವಣೆ-2024 ರ ಅಂಗವಾಗಿ ಮತದಾನ ಜಾಗೃತಿಗಾಗಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಬುಧವಾರದಂದು ಕುಷ್ಟಗಿ ಪಟ್ಟಣ ಮತ್ತು ಗ್ರಾಮ ಪಂಚಾಯತಿಗಳಲ್ಲಿ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿ ಜಾಗೃತಿ ಕಾರ್ಯಕ್ರಮಕ್ಕೆ ತಾಲೂಕ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ನಿಂಗಪ್ಪ ಎಸ್. ಮಸಳಿ ರವರು  ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಚುನಾವಣೆಯನ್ನು ಎಲ್ಲರೂ ಹಬ್ಬದಂತೆ ಆಚರಿಸಬೇಕು. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂಬ ಉದ್ದೇಶದಿಂದ ವಿನೂತನವಾಗಿ ಸ್ವೀಪ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಇಂದು ಕುಷ್ಟಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಹಾಗೂ ನೀಡಶೇಸಿ, ಮಾರ್ಗವಾಗಿ ತಳುವಗೇರ ಗ್ರಾಮ ಪಂಚಾಯತಿಗಳಲ್ಲಿ ಈ ಒಂದು ಬೃಹತ್ ಬೈಕ್ ರ‍್ಯಾಲಿ ಮೂಲಕ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದರು.
ತಾಲೂಕು ಪಂಚಾಯತ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ರ‍್ಯಾಲಿಯಲ್ಲಿ ಭಾಗವಹಿಸಿದ್ದು, ಇದೇ ರೀತಿ ಎಲ್ಲರೂ ಮತದಾನ ಮಾಡುವ ಮೂಲಕ ತಾಲೂಕಿನಲ್ಲಿ ಶೇ.100 ರಷ್ಟು  ಮತದಾನ ನಡೆಯುವಂತೆ ಸಹಕರಿಸಿ ಎಂದು ಮನವಿ ಮಾಡಿದರು.
ಬೈಕ್ ರ‍್ಯಾಲಿ: ಜಾಗೃತಿ ವಾಹಿನಿ ಜಾಥಾ
ಕುಷ್ಟಗಿ ಪಟ್ಟಣದ ಮಲಯ್ಯ ಸರ್ಕಲ್,  ಮಹಾವೀರ್ ಸರ್ಕಲ್ , ಮಾರುತಿ ಸರ್ಕಲ್,  ಅಂಬೇಡ್ಕರ್ ಸರ್ಕಲ್, ತಹಸೀಲ್ದಾರ್ ಕಚೇರಿ  ಮಾರ್ಗವಾಗಿ ಆರಂಭವಾದ ಬೈಕ್ ರ‍್ಯಾಲಿಯು ನೀಡಶೇಸಿ ಮಾರ್ಗವಾಗಿ ತಳುವಗೇರ ಗ್ರಾಮದಲ್ಲಿ ಅಂತ್ಯಗೊAಡಿತು.
ಮತದಾನ ಜಾಗೃತಿ ಹೆಂಡ್ ಔಟ್ಸ್ ಗಳನ್ನು ಹಿಡಿದುಕೊಂಡು ಜಾಥಾ ಉದ್ದಕ್ಕೂ ಮತದಾನದ ಮಹತ್ವವನ್ನು ಸಾರುವ  ಜಿಂಗಲ್ಸ್ ಗಳನ್ನು ಸಹ ಪ್ರಸಾರ ಮಾಡುವ ಮೂಲಕ, 100 ಕ್ಕೂ ಹೆಚ್ಚು ದ್ವಿ ಚಕ್ರ ವಾಹನಗಳ ಮೂಲಕ ಅರಿವು ಮೂಡಿಸಲಾಯಿತು.
ಪ್ರತಿಜ್ಞಾವಿಧಿ ಬೋಧನೆ:
ತಳುವಗೇರ ಗ್ರಾಮದ ಶರಣಬಸವೇಶ್ವರ  ದೇವಸ್ಥಾನದ ಆವರಣದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಾದ ನಿಂಗಪ್ಪ ಮೂಲಿಮನಿ ರವರು ಪ್ರತಿಜ್ಞಾವಿಧಿ ಬೋಧಿಸುವ ಮೂಲಕ ಜನರಿಗೆ ಮತದಾನ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರಾದ(ಗ್ರಾ.ಉ) ನಿಂಗನಗೌಡ ವಿ.ಹೆಚ್., ತಾಲೂಕ ಮಟ್ಟದ ವಿವಿಧ ಇಲಾಖೆಯ ಅಧಿಕಾರಿ ವರ್ಗ ಸೇರಿದಂತೆ ತಾಲ್ಲೂಕು ಪಂಚಾಯತ್ ಸಿಬ್ಬಂದಿಗಳು, ತಾಲೂಕಿನ ಎಲ್ಲಾ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಕರ ವಸೂಲಿಗಾರರು ಡಿಇಓ ರವರು, ಸಿಬ್ಬಂದಿ ಹಾಗೂ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: