ನರೇಗಾ ಕಾಮಗಾರಿ ಸ್ಥಳದಲ್ಲಿ ಮತದಾನ ಪ್ರತಿಜ್ಞಾ ವಿಧಿ ಭೋಧನೆ
ಇಂದು ಕುಕನೂರ ತಾಲೂಕಿನ ನೆಲಜೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ವಟಪರ್ವಿ ಗ್ರಾಮದಲ್ಲಿ ನರೇಗಾ ಕಾಮಗಾರಿ ಸ್ಥಳದಲ್ಲಿ ಸ್ವೀಪ್ ಜಾಗೃತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ಮಾತನಾಡಿ ನಮ್ಮ ದೇಶ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿದ ದೇಶ, ಪ್ರಜೆಗಳೆ ಇಲ್ಲಿ ಸಾರ್ವಭೌಮರು. ಕಡ್ಡಾಯವಾಗಿ ಮೇ-7 ರಂದು ಮತದಾನ ಮಾಡುವುದರಿಂದ ಒಳ್ಳೆಯ ನಾಯಕರನ್ನು ಆಯ್ಕೆ ಮಾಡಿದಾಗ ಶ್ರೇಷ್ಠ ಭಾರತವನ್ನು ನಿರ್ಮಾಣ ಮಾಡಲು ಸಾಧ್ಯ, ಮತದಾನ ದಿನ ದಂದು ಸರ್ಕಾರಿ ರಜೆ ಇರುತ್ತದೆ. ರಜೆ ಇದೆ ಎಂದು ಮತದಾನ ಮಾಡದೇ ಇರಬಾರದು.
ಪ್ರತೀ ಮತವೂ ಅತ್ಯಮೂಲ್ಯ. ಚುನಾವಣೆಯಲ್ಲಿ ನಿಂತ ಅಭ್ಯರ್ಥಿಗಳಿಗೆ ಮತ ಹಾಲು ಇಷ್ಟವಿಲ್ಲಾ ಎಂದಾದಲ್ಲಿ ನೋಟಾ ಬಟನ್ನು ಅನ್ನು ಒತ್ತಬಹುದು. ಹಿರಿಯ ನಾಗರೀಕರಿಗೆ, ವಿಶೇಷ ಚೇತನರಿಗೆ ವಿಶೇಷ ಮತದಾನದ ವ್ಯವಸ್ಥೆ ಕಲ್ಪಿಸಲಾಗಿದೆ, ಸಕ್ಷಮ ಯಾಪ್ ಮೂಲಕ ವಿಶೇಷ ಮತಚಲಾಯಿಸಲು ಇವರು ನೊಂದಣಿ ಮಾಡಿಕೊಳ್ಳಬಹುದು ಎಂದರು.
ನಂತರ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಪರಶುರಾಮ್ ನಾಯಕ ರವರು ಮಾತನಾಡಿ ನನ್ನ ಮತ ನನ್ನ ಹಕ್ಕು 18 ವರ್ಷ ತುಂಬಿದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಹಾಕಬೇಕು, ಯುವಕರು ಪ್ರಜ್ಞಾವಂತಿಕೆಯಿಂದ ಮತ ಹಾಕಬೇಕು ಎಂದರು.
ನಂತರ 300 ಕ್ಕೂ ಹೆಚ್ಚು ಕೂಲಿಕಾರರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಸ್ಥಳದಲ್ಲಿ ತಾಂತ್ರಿಕ ಸಹಾಯಕ ಶರಣಯ್ಯ ಸಸಿ, ಕಂಪ್ಯೂಟರ್ ಅಪರೇಟರ್ ಯಮನೂರಪ್ಪ ಬಿ.ಎಫ್.ಟಿ ಮಂಗಳೇಶ್ ಕೌದಿ, ಗ್ರಾಮ ಕಾಯಕ ಮಿತ್ರರಾದ ಲಲಿತಾ ಹೋಸೂರು, ಕಾಯಕ ಬಂಧುಗಳು ಕೂಲಿಕಾರರು ಹಾಜರಿದ್ದರು.
Comments are closed.