ಅಂಗನವಾಡಿಯ ಎಳೆ ಕಂದಮ್ಮಗಳಿಗೆ ಉರಿ ಬಿಸಿಲಿನಿಂದ ರಕ್ಷಿಸಲು ಆಗ್ರಹ

Get real time updates directly on you device, subscribe now.

   ಕೊಪ್ಪಳ: ಜಿಲ್ಲೆಯ ಎಳೆ ಕಂದಮ್ಮಗಳಿಗಾಗುವ ದುಷ್ಪರಿಣಾಮಗಳಿಂದ ರಕ್ಷಿಸಲು ಅಂಗನವಾಡಿ ಕೇಂದ್ರಗಳ ಕೆಲಸದ ವೇಳೆಯನ್ನು ಬದಲಾಯಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ನಳಿನ್ ಅತುಲ್ ಅವರಿಗೆ ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಬಸವರಾಜ್ ಶೀಲವಂತರ್ ನೇತ್ರತ್ವದಲ್ಲಿ ಮನವಿ ಸಲ್ಲಿಸಲಾಯಿತು.
       ಮನವಿಯಲ್ಲಿ ತಮಗೆ ತಿಳಿದಿರುವ ಹಾಗೆ ಕೊಪ್ಪಳ ಜಿಲ್ಲೆಯಲ್ಲಿ ಸಹಿಸಲು ಅಸಾಧ್ಯವಾದ ಭಯಂಕರ ಉರಿ ಬಿಸಿಲು. ಅಕ್ಷರಶಃ ಬೆಂಗಾಡು. ಬೆಳಗ್ಗೆ 8ರ ನಂತರ ದೊಡ್ಡವರು ಸೇರಿದಂತೆ ಎಲ್ಲರೂ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಇನ್ನೂ ಅದ್ಯಾವ ಮೂಲಭೂತ ಸೌಕರ್ಯಗಳು ಇಲ್ಲದಿರುವ ಅಂಗನವಾಡಿ ಕೇಂದ್ರಗಳಲ್ಲಿನ ಎಳೆ ಮಕ್ಕಳ ಸ್ಥಿತಿಯು ಹೇಗಿರಲಿಕ್ಕಿಲ್ಲ. ನೀವೆ ಲೆಕ್ಕ ಹಾಕಿ. ಅದೇಷ್ಟೋ ಅಂಗನವಾಡಿ ಕೇಂದ್ರಗಳು ಶೆಡ್ ಗಳಲ್ಲಿ ನಡೆಯುತ್ತೀವೆ. ಎಷ್ಟೋ ಕೇಂದ್ರಗಳಿಗೆ ಕರೆಂಟ್ ವ್ಯವಸ್ಥೆ ಇಲ್ಲ. ಕೆಲ ಕೇಂದ್ರಗಳಿಗೆ ಕರೆಂಟ್ ಇದ್ದರೂ ಫ್ಯಾನ್ ಗಳು ಇಲ್ಲ. ಕುಡಿಯುವ ನೀರಿನ ವ್ಯವಸ್ಥೆಯಂತೂ ಎಲ್ಲೂ ಇಲ್ಲ, ಹೀಗೆ ಯಾವ ಸೌಲತ್ತುಗಳು ಇಲ್ಲದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು ಉರಿ ಬಿಸಿಲಿನ ಪರಿಣಾಮ ದಿಂದಾಗಿ ಅನುಭವಿಸುವ ತೊಂದರೆಯು ಅಷ್ಟಿಷ್ಟಲ್ಲ. ಬಿಸಿಲು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಹಾಗೂ ಮಕ್ಕಳ ಚರ್ಮದ ಮೇಲೆ ಕೆಟ್ಟ ಪರಿಣಾಮವನ್ನು ಬೀರಲಿದೆ.ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಅಥವಾ ಜೀವಕ್ಕೆ ಇನ್ನೇನಾದರು ಅಪಾಯ. ಅನಾಹುತ ಆಗುವ ಮುಂಚೆ ಕೊಪ್ಪಳದ ಜಿಲ್ಲಾಧಿಕಾರಿಗಳಾದ ತಾವು ಬೇಗ ಎಚ್ಚೆತ್ತುಕೊಂಡು, ಅಂಗನವಾಡಿ ಕೇಂದ್ರಗಳ ಕೆಲಸದ ಅವಧಿಯನ್ನು ಬೆಳಗಿನ 8 ಗಂಟೆಯಿಂದ 12 ಗಂಟೆಯವರೆಗೆ ನಿಗದಿಪಡಿಸಿ ಆದೇಶವನ್ನು ಹೊರಡಿಸಬೇಕು ಹಾಗೂ ಎಪ್ರಿಲ್ ಮತ್ತು ಮೇ ಎರಡು ತಿಂಗಳು ಬಿಸಿಲಿನ ಕಾರಣಕ್ಕಾಗಿ ಮಕ್ಕಳ ಮತ್ತು ತಾಯಂದಿರುಗಳ ಆಹಾರವನ್ನು ಮನೆಗೆ ತಲುಪಿಸಬೇಕು. ನಮ್ಮ ಈ ಮನವಿಯನ್ನು ತಾವು ಗಂಭೀರವಾಗಿ ಪರಿಗಣಿಸಿ ವಿಶೇಷ ಕಾಳಜಿವಹಿಸಿ, ತಾವು ಮೇಲ್ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಂಗನವಾಡಿ ಕೇಂದ್ರಗಳಿಗೆ ಕೆಲಸದ ಅವಧಿಯಲ್ಲಿ ವಿನಾಯತಿಯನ್ನು ನೀಡಿ ಆದೇಶಿಸಿ, ಮಕ್ಕಳನ್ನು ಬಿಸಿಲಿನ ತಾಪದಿಂದ ರಕ್ಷಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಒಕ್ಕೂಟದ ಜಿಲ್ಲಾ ಸಂಚಾಲಕ ಬಸವರಾಜ್ ಶೀಲವಂತರ್. ಸಿದ್ಧಲಿಂಗಪ್ಪ ಹಡಪದ್ ಮುಂತಾದವರು ಉಪಸ್ಥಿತರಿದ್ದರು.
      ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿಪನಿರ್ವಶಕರಿಗೂ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

Get real time updates directly on you device, subscribe now.

Comments are closed.

error: Content is protected !!
%d bloggers like this: