ಲೋಕಸಭಾ ಚುನಾವಣೆ: ಛಾಯಾಗ್ರಹಣ ಸ್ಪರ್ಧೆ

Get real time updates directly on you device, subscribe now.

ಕೊಪ್ಪಳ,: ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಹಿನ್ನೆಲೆಯಲ್ಲಿ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಾರ್ಯಾಲಯದಿಂದ ಛಾಯಾಗ್ರಹಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಛಾಯಾಗ್ರಹಣ ಸ್ಪರ್ಧೆಯ ಮೂಲಕ ಪ್ರಜಾಪ್ರಭುತ್ವದ ವಿಶೇಷತೆ ಹಾಗೂ ವೈವಿಧ್ಯತೆಯನ್ನು ನಿಮ್ಮ ಲೆನ್ಸ್ ಮೂಲಕ ಸೆರೆಹಿಡಿದು ಆಕರ್ಷಕ ಬಹುಮಾನವನ್ನು ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ. ಆಸಕ್ತರು ನಿಮ್ಮ ಛಾಯಾಚಿತ್ರಗಳನ್ನು ಇ-ಮೇಲ್ [email protected] ಗೆ ಮೇ 15 ರ ಸಂಜೆ 5 ಗಂಟೆಯೊಳಗಾಗಿ ಕಳುಹಿಸಬೇಕು.

ಸ್ಪರ್ಧಿಗಳ ಗಮನಕ್ಕೆ: ಪ್ರತೀ ಸ್ಪರ್ಧಿಯು ಕೂಡ ಗರಿಷ್ಠ 5 ಭಾವಚಿತ್ರಗಳನ್ನು ಸಲ್ಲಿಸಬಹುದು. ಪ್ರತಿ ಫೋಟೋ ಜೊತೆಗೆ ನಿಮ್ಮ ಪೂರ್ಣ ಹೆಸರು, ಸಂಪರ್ಕ ವಿವರಗಳು ಮತ್ತು ಸಂಕ್ಷಿಪ್ತ ವಿವರಣೆಯನ್ನು ಸೇರಿಸಿ, ಅದರ ಸಂದರ್ಭ, ಸ್ಥಳ ಮತ್ತು ದಿನಾಂಕವನ್ನು ಹೈಲೈಟ್ ಮಾಡಿ. ಪ್ರತೀ ಛಾಯಾಚಿತ್ರವೂ ಕೂಡ ಸ್ಪರ್ಧಿಗಳು ತಾವೇ ಕ್ಲಿಕ್ ಮಾಡಿರುವಂತಹ ಚಿತ್ರವಾಗಿರಬೇಕು. ಜೆಪಿಇಜಿ ಅಥವಾ ಜೆಪಿಜಿ ಫಾರ್ಮ್ಯಾಟ್‌ನಲ್ಲಿರುವ ಡಿಜಿಟಲ್ ಛಾಯಾಚಿತ್ರಗಳನ್ನು ಮಾತ್ರ ಸ್ವೀಕರಿಸಲಾಗುವುದು. ಛಾಯಾಚಿತ್ರದ ಸೈಜ್ 20 ಎಂಬಿ ಮೀರಿರಬಾರದು. ಛಾಯಾಚಿತ್ರದ ರೆಜಲೂಷನ್ ಕನಿಷ್ಠ 300 ಡಿಪಿಐ ಇರಬೇಕು.

ಹಾರಿಜಂಟಲ್ (Horizontal) ಚಿತ್ರಗಳಿಗೆ ವಿಡ್ತ್ (Width) ಹಾಗೂ ವರ್ಟಿಕಲ್ (Vertical) ಚಿತ್ರಗಳಿಗೆ ಹೈಟ್ (Height) ಕನಿಷ್ಠ 1,600 ಪಿಕ್ಸೆಲ್ (Pixel)ಗಳು ಇರುವುದು ಕಡ್ಡಾಯ. ಛಾಯಾಚಿತ್ರದ ಕ್ರಾಪಿಂಗ್, ಬಣ್ಣ ತಿದ್ದುಪಡಿಯನ್ನು ಮಾತ್ರ ಎಡಿಟ್ ಮಾಡಲು ಅನುಮತಿಸಲಾಗಿದೆ. ಮತದಾರರ ಭಾಗವಹಿಸುವಿಕೆ, ಮತದಾರರ ವೈವಿಧ್ಯತೆ ಮತ್ತು ಚುನಾವಣಾ ಕಾರ್ಯಕರ್ತರ ನಿವೇದನೆ ಸೇರಿದಂತೆ ಚುನಾವಣಾ ಪ್ರಕ್ರಿಯೆಗಳನ್ನು ಸೃಜನಾತ್ಮಕವಾಗಿ ಸೆರೆಹಿಡಿಯಬೇಕಾಗಿದೆ.

ರಾಜಕೀಯ ಪಕ್ಷದ ಪ್ರಚಾರಗಳು, ಅಭ್ಯರ್ಥಿಗಳು ಅಥವಾ ಪಕ್ಷಪಾತವನ್ನು ಸೂಚಿಸುವ ಹಾಗೂ ಗುರುತಿಸಬಹುದಾದ ಚಿಹ್ನೆಗಳ ನೇರ ಚಿತ್ರಣಗಳನ್ನು ತಿರಸ್ಕರಿಸಲಾಗುವುದು. ಛಾಯಾಚಿತ್ರಗಳನ್ನು ಇಮೇಲ್ ಮಾಡುವಾಗ Democracy in Focus Photography Competition Submission ಅಂತ ನಿಮ್ಮ ಇಮೇಲ್ ನ ಸಬ್ಜೆಕ್ಟ್ ಇರಬೇಕು.

Get real time updates directly on you device, subscribe now.

Comments are closed.

error: Content is protected !!