ಕರಡಿ ಪರಮಾಪ್ತ ಸೈಯದ್ ನಾಸಿರುದ್ದೀನ್ ಹುಸೇನಿ ಕಾಂಗ್ರೆಸ್ಸಿಗೆ : ಮುಂದೆ?
ಕೊಪ್ಪಳ : ಕೊಪ್ಪಳ ಲೋಕಸಭಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಜಕೀಯ ಬೆಳವಣಿಗೆಯಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿರುವ ಸಂಸದ ಸಂಗಣ್ಣ ಕರಡಿ ಕಾಂಗ್ರೆಸ್ ಸೇರ್ಪಡೆ ಊಹಾಪೋಹಗಳ ಹಿನ್ನೆಲೆಯಲ್ಲಿ ಇಂದು ಅವರ ಪರಮ ಆಪ್ತ ಸಯ್ಯದ್ ನಾಸಿರುದ್ದೀನ್ ಹುಸೇನಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಇಂದು ಕಾಂಗ್ರೆಸ್ ಕಾರ್ಯಾಲಯದಲ್ಲಿ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಕೆ ರಾಜಶೇಖರ್ ಹಿಟ್ನಾಳ್ ಸಮ್ಮುಖದಲ್ಲಿ ನಾಸಿರುದ್ದೀನ್ ಹುಸೇನಿ ಕಾಂಗ್ರೆಸ್ ಸೇರ್ಪಡೆಗೊಂಡರು. ಸಂಸದ ಕರಡಿ ಸಂಗಣ್ಣ ಪರಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸೈಯದ್ ನಾಸಿರುದ್ದೀನ್ ಹುಸೇನಿ ಈ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷ ಸಂಸದ ಕರಡಿ ಸಂಗಣ್ಣನವರಿಗೆ ಗಾಳ ಹಾಕಿದೆ ಎನ್ನುವ ಮಾತುಗಳ ಹಿನ್ನೆಲೆಯಲ್ಲಿ ಶೀಘ್ರವೇ ಕರಡಿ ಸಂಗಣ್ಣ ಕಾಂಗ್ರೆಸ್ ಪಕ್ಷ ಸೇರಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ ಇದಕ್ಕೆ ಪೂರಕವಾಗಿ ಇಂದು ಅವರ ಪರಮ ಶಿಷ್ಯ ಆಪ್ತ ನಾಸಿರುದ್ದೀನ್ ಕಾಂಗ್ರೆಸ್ ಪಕ್ಷ ಸೇರಿದ್ದಾರೆ ಎಂದು ವಿಶ್ಲಷಿಸಲಾಗುತ್ತಿದೆ.
Comments are closed.