ಜೆ.ಡಿ.ಎಸ್ ಪಕ್ಷದ ಕೊಪ್ಪಳ ಜಿಲ್ಲಾ ರೈತ ವಿಭಾಗದ ನೂತನ ಅಧ್ಯಕ್ಷರಾಗಿ ಬಸವರೆಡ್ಡಿ ಕೇಸರಹಟ್ಟಿ ನೇಮಕ

ಗಂಗಾವತಿ: ಸುಮಾರು ವ?ಗಳಿಂದ ಜೆ.ಡಿ.ಎಸ್ ಪಕ್ಷದಲ್ಲಿ ಎಲೆಮರಿ ಕಾಯಿಯಂತೆ ದುಡಿದು, ಪ್ರಾಮಾಣಿಕವಾಗಿ, ನಿಷ್ಠೆಯಿಂದ ಪಕ್ಷದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಗುರುತಿಸಿ ಪಕ್ಷದಲ್ಲಿ ಕೊಪ್ಪಳ ಜಿಲ್ಲೆಯ ರೈತ ವಿಭಾಗದ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಕ್ಕೆ ಬಸವರೆಡ್ಡಿ ಕೇಸರಹಟ್ಟಿ ಸಂತಸ ವ್ಯಕ್ತಪಡಿಸಿದರು.
ಜೆ.ಡಿ.ಎಸ್ ಪಕ್ಷದ ಜಿಲ್ಲಾ ರೈತವಿಭಾಗದ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿರುವುದಕ್ಕೆ ಪಕ್ಷದ ರಾಷ್ಟ್ರಾಧ್ಯಕ್ಷರಾದ ಹೆಚ್.ಡಿ ದೇವೇಗೌಡ ರಿಗೆ, ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ರಿಗೆ, ಶ್ರೀಮತಿ ಅನಿತಾ ಕುಮಾರಸ್ವಾಮಿ , ನಿಖಿಲ್ ಕುಮಾರಸ್ವಾಮಿ , ಹೆಚ್.ಡಿ ರೇವಣ್ಣರವರಿಗೆ. ಶ್ರೀಮತಿ ಭವಾನಿ ಅಕ್ಕನವರಿಗೆ, ಪ್ರಜ್ವಲ್ ರೇವಣ್ಣ . ಸಿ.ವಿ ಚಂದ್ರಶೇಖರ , ಕೊಪ್ಪಳ ಜಿಲ್ಲಾಧ್ಯಕ್ಷರಾದ ಸುರೇಶ್ ಎಸ್. ಭೂಮರೆಡ್ಡಿ ವರಿಗೆ, ರಾಜ್ಯ ಯುವ ಕಾರ್ಯದರ್ಶಿಯಾದ ರಾಜು ನಾಯಕ್ ಅಣ್ಣನವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಪಕ್ಷ ಗುರುತಿಸಿ ಜವಾಬ್ದಾರಿ ಸ್ಥಾನ ನೀಡಿದ್ದಕ್ಕೆ ಪಕ್ಷದ ಜಿಲ್ಲಾ ಘಟಕದ ಹಾಗೂ ರಾಜ್ಯ ಘಟಕದ ಸಲಹೆ, ಸೂಚನೆ ಮೇರೆಗೆ ಪಕ್ಷಕ್ಕೆ ಹಾಗೂ ರೈತರಿಗೆ ಒಳ್ಳೆಯ ಕೆಲಸಗಳಾಗುವಂತೆ ಕರ್ತವ್ಯ ನಿರ್ವಹಿಸುತ್ತೇನೆ ಎಂದು ತಿಳಿಸಿದರು.
Comments are closed.