ಎಲೆಕ್ಟ್ರಾನಿಕ್ & ಡಿಜಿಟೆಲ್ ಮಾಧ್ಯಮದಲ್ಲಿ ಉದ್ದಿಮೆ ಸ್ಥಾಪನೆಗೆ ಸಹಾಯಧನ: ಅರ್ಜಿ ಆಹ್ವಾನ

Get real time updates directly on you device, subscribe now.

ಕರ್ನಾಟಕ ಮಹರ್ಷಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಪರಿಶಿಷ್ಟ ಪಂಗಡಗಳ ಸಮುದಾಯದ ನಿರುದ್ಯೋಗಿ ಯುವಕ ಯುವತಿರಿಗೆ ಎಲೆಕ್ಟ್ರಾನಿಕ್ ಮತ್ತು ಡಿಜಿಟೆಲ್ ಮಾಧ್ಯಮದಲ್ಲಿ ಉದ್ದಿಮೆಯನ್ನು ಸ್ಥಾಪಿಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಎಲೆಕ್ಟ್ರಾನಿಕ್ ಮತ್ತು ಡಿಜಿಟೆಲ್ ಮಾಧ್ಯಮಗಳಾದ ಯ್ಯೂಟುಬ್ ಚಾನೆಲ್, ಸೋಶಿಯಲ್ ಮಿಡಿಯಾ ನ್ಯೂಸ್ ಪೇಜ್ಸ್, ನ್ಯೂಸ್ ಆನ್‌ಲೈನ್ ಬ್ಲಾಗ್, ನ್ಯೂಸ್ ಕನ್‌ಟೆಂಟ್ ಕ್ರಿಯೆಷನ್, ಆನ್‌ಲೈನ್ ನ್ಯೂಸ್, ಆನ್‌ಲೈನ್ ಬ್ಲಾಗ್, ವೆಬ್ ಪೇಜ್ಸ್, ಆನ್‌ಲೈನ್ ಜರ್ನಲಿಸಂ, ಮೀಡಿಯಾ ರಿಲೆಟೆಡ್ ಟ್ರೈನಿಂಗ್ ಕಾರ್ಯಕ್ರಮಗಳಡಿ ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಉದ್ದಿಮೆಯನ್ನು ಸ್ಥಾಪಿಸಲು ಸಹಾಯಧನವನ್ನು ಪಡೆಯಲು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಪರಿಶಿಷ್ಟ ಪಂಗಡಗಳ ಸಮುದಾಯದ ನಿರುದ್ಯೋಗಿ ಯುವಕ ಯುವತಿಯರು ಅರ್ಜಿಯನ್ನು ಆಫ್‌ಲೈನ್ ಮೂಲಕ ಮಾರ್ಚ್ 30ರೊಳಗಾಗಿ ಜಿಲ್ಲಾ ವ್ಯವಸ್ಥಾಪಕರ ಕಾರ್ಯಾಲಯ ಕರ್ನಾಟಕ ಮಹರ್ಷಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಜಿಲ್ಲಾ ಆಡಳಿತ ಭವನ 2ನೇ ಮಹಡಿ ರೂ.ನಂ-109 ಕೊಪ್ಪಳ, ಈ ಕಚೇರಿಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ಕಚೇರಿಗೆ ಸಂಪರ್ಕಿಸಬಹುದಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!
%d bloggers like this: